ಪೇಪರ್ ಪ್ಲೇನ್ ಕಲಿಕೆಗೆ ಉಚಿತ ಆನ್ಲೈನ್ ಕಾರ್ಯಾಗಾರ ಆಯೋಜನೆ.
ಪೇಪರ್ ಪ್ಲೇನ್ ಕಲಿಕೆಗೆ ಉಚಿತ ಆನ್ಲೈನ್ ಕಾರ್ಯಾಗಾರ ಆಯೋಜನೆ.
ಗಿನ್ನೆಸ್ ರೆಕಾರ್ಡ್ ಹೋಲ್ಡರ್ ಜಾನ್ ಕಾಲಿನ್ಸ್ ಅವರೊಂದಿಗೆ ಕಾರ್ಯಾಗಾರ ಬೆಂಗಳೂರು ಏಪ್ರಿಲ್ 3, 2020: ಕೋವಿಡ್-19 ಸಾಂಕ್ರಮಿಕ ರೋಗದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮನೆಯಲ್ಲಿಯೇ ಉಳಿದು ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಈ ಅವಧಿಯನ್ನು ಇನ್ನಷ್ಟು ಕ್ರಿಯಾತ್ಮಕಗೊಳಿಸಲು ಏಟ್ರಿಯಾ ವಿಶ್ವವಿದ್ಯಾಲಯವು ಉಚಿತ ಆನ್ಲೈನ್ ಕಲಿಕೆಗೆ ಆದ್ಯತೆ ನೀಡುತ್ತಿದೆ. ಹೌದು , ಇದೇ ಏಪ್ರಿಲ್ 5, ಭಾನುವಾರ ಸಂಜೆ 7 ಗಂಟೆಗೆ ಆನ್ಲೈನ್ ಪೇಪರ್ ಪ್ಲೇನ್ ಕಾರ್ಯಾಗಾರ ಉಚಿತವಾಗಿ ಆಯೋಜಿಸಿದ್ದು, ಗಿನ್ನಿಸ್ ರೆಕಾರ್ಡ್ ಖ್ಯಾತಿಯ ಜಾನ್ ಕಾಲಿನ್ಸ್ ಅವರು ಪೇಪರ್ ಪ್ಲೇನ್ ಮಾಡುವ ವಿಧಾನವನ್ನು ಆನ್ಲೈನ್ ಮೂಲಕವೇ ತರಬೇತಿ ನೀಡಲಿದ್ದಾರೆ. ನಿಮ್ಮಲ್ಲಿರುವ ಕಲೆ, ಕ್ರಿಯಾತ್ಮಕತೆಯನ್ನು ಹೊರತರಲು ಈ ಆನ್ಲೈನ್ ತರಬೇತಿ ಹೆಚ್ಚು ಉಪಯುಕ್ತವಾಗಲಿದ್ದು, ವೃತ್ತಿ ಜೀವನಕ್ಕೂ ಈ ತರಬೇತಿ ಅನುಕೂಲವಾಗಲಿದೆ.
ಅತಿ ಹೆಚ್ಚು ದೂರ ಹಾರುವ ಪೇಪರ್ ಪ್ಲೇನ್ ವಿನ್ಯಾಸನಲ್ಲಿ ಈಗಾಗಲೇ ಗಿನ್ನಿಸ್ ರೆಕಾರ್ಡ್ ಮಾಡಿರುವ ಕಾಲಿನ್ಸ್ ಇದೀಗ ಆನ್ಲೈನ್ ಮೂಲಕವೂ ತರಬೇತಿ ನೀಡಲು ಮುಂದಾಗಿದ್ದಾರೆ. ಈ ಆನ್ಲೈನ್ ಕಾರ್ಯಾಗಾರವನ್ನು ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಲು ಅರ್ಹರಿದ್ದಾರೆ. ಒರಿಗಮಿ ಮತ್ತು ಏರೋಡೈನಮಿಕ್ಸ್ ಕಲೆಯನ್ನು ಕರಗತ ಮಾಡಿಕೊಂಡಿರುವ ಕಾಲಿನ್ಸ್ ಅವರು ಅತಿ ಹೆಚ್ಚು ವೇಗದಲ್ಲಿ ಕಾಗದದ ಪ್ಲೇನ್ ವಿನ್ಯಾಸ ಮಾಡುವ ಸಂಬಂಧ ಪುಸ್ತಕ ಪ್ರಕಟಿಸಿದ್ದಾರೆ. ಜೊತೆಗೆ ಈ ಕಲೆಯು ಶೈಕ್ಷಣಿಕವಾಗಿಯೂ ಉಪಯುಕ್ತಕರ ಎಂಬುದನ್ನು ಅರಿತಿರುವ ಇವರು ವಿದ್ಯಾರ್ಥಿಗಳಿಗೆ ಈ ಬಗ್ಗೆ ಹೆಚ್ಚು ಅರಿವು ಮೂಡಿಸುತ್ತಾರೆ. ಪೇಪರ್ ಪ್ಲೇನ್ ತಯಾರಿಕೆಯಲ್ಲಿ ಸಾಕಷ್ಟು ಜ್ಞಾನಾರ್ಜನೆ ಹೊಂದಿರುವ ಅವರು ಇದಕ್ಕಾಗಿಯೇ ಸಾಕಷ್ಟು ವರ್ಷಗಳನ್ನು ವ್ಯಹಿಸಿದ್ದಾರೆ.
ಕಾರ್ಯಾಗಾರದ ಕುರಿತು ಮಾತನಾಡಿದ ಕಾಲಿನ್ಸ್, “ಏಟ್ರಿಯಾ ವಿಶ್ವವಿದ್ಯಾಲಯದ ವತಿಯಿಂದ ವಿದ್ಯಾರ್ಥಿಗಳಿಗೆ ಆನ್ಲೈನ್ ಕಾರ್ಯಾಗಾರ ಆಯೋಜನೆ ಅತ್ಯಂತ ಉಪಯುಕ್ತವಾಗಿದೆ. ಈ ವಿಶ್ವವಿದ್ಯಾಲಯ ಇಂಥ ಪ್ರಯೋಗಗಳಿಗೂ ಹೆಸರುವಾಸಿ. ಕೋವಿಡ್ -19 ಸಾಂಕ್ರಮಿಕ ರೋಗದಿಂದ ಇಡೀ ವಿಶ್ವ ಜರ್ಜರಿತಗೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನೆಯಲ್ಲಿಯೇ ಉಳಿಯುವ ಮಾರ್ಗ ಕಂಡುಕೊಂಡಿದ್ದೇವೆ. ಈ ಅವಧಿಯನ್ನು ಉಪಯುಕ್ತಕರವಾಗಿ ಬಳಸಿಕೊಳ್ಳುವುದು ಉತ್ತಮ ನಡೆಯಲಾಗಿದೆ. ಈ ಆನ್ಲೈನ್ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಅವರಲ್ಲಿರುವ ಕಲೆ ಮತ್ತು ಆಸಕ್ತಿಯನ್ನು ಅನ್ವೇಷಿಸಲು ಉತ್ತಮ ಅವಕಾಶ ಒದಗಿಸಿದೆ. ಕಾಗದದ ವಿಮಾನ ತಯಾರಿಕೆಯು ಅತ್ಯಂತ ಆಸಕ್ತಿದಾಯಕ ವಿಚಾರ. ಅತಿ ದೂರಕ್ಕೂ ಸಹ ಈ ವಿಮಾನವನ್ನು ಹಾರುವಂತೆ ತಯಾರಿಸುವುದು ಒಂದು ಕಲೆ. ಅದನ್ನು ಇವರು ಕಲಿಯುತ್ತಿದ್ದಾರೆ ಎಂದು ಹೇಳಿದರು. ಏಟ್ರಿಯಾ ವಿಶ್ವವಿದ್ಯಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಹೀಮ್ ರಹೀಮಾನ್ ಅವರು ಮಾತನಾಡಿ, “ಪ್ರಸ್ತುತ ನಾವು ಕಠಿಣ ಮತ್ತು ಅನಿಶ್ಚಿತ ಕಾಲದಲ್ಲಿ ಬದುಕುತ್ತಿದ್ದೇವೆ. ನಮ್ಮನ್ನು ಸಕ್ರಿಯವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಏಟ್ರಿಯಾ ವಿಶ್ವವಿದ್ಯಾಲಯದಲ್ಲಿ ನಾವು ವಿದ್ಯಾರ್ಥಿಗಳಿಗೆ ಆನ್ಲೈನ್ ಕಾರ್ಯಾಗಾರಗಳಂತಹ ಹಲವಾರು ಆನ್ಲೈನ್ ಚಟುವಟಿಕೆಗಳನ್ನು ಯೋಜಿಸಿದ್ದೇವೆ, ಅದು ಬೋಧಕವರ್ಗ ಮತ್ತು ಉದ್ಯಮದ ನಾಯಕರ ಭಾಗವಹಿಸುವಿಕೆ, ಬೋಧಕರ ನೇತೃತ್ವದ ಚಟುವಟಿಕೆಗಳು, ಆಸಕ್ತಿದಾಯಕ ಕೌಶಲ್ಯಗಳಲ್ಲಿ ತರಬೇತಿ, ಮತ್ತು ಪದವಿ ವಿದ್ಯಾರ್ಥಿಗಳಿಗೆ ಪದವಿಪೂರ್ವ ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಾಧ್ಯವಾದಷ್ಟರ ಮಟ್ಟಿಗೆ ವಿದ್ಯಾರ್ಥಿಗಳಿಗೆ ಅವರ ಕನಸುಗಳಿಗೆ ಒಂದು ಹೆಜ್ಜೆ ಹತ್ತಿರವಾಗಲು ನಾವು ಬದ್ಧರಾಗಿದ್ದೇವೆ ಎಂದು ಅಭಿಪ್ರಾಯಪಟ್ಟರು.
Recent comments