ಪ್ರಧಾನಿ ನರೇಂದ್ರ ಮೋದಿ ಅವರಿಗೆ 'ರಾಖಿ 'ಕಟ್ಟಿದ್ದ ಸೋದರಿ ಇನ್ನಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ 'ರಾಖಿ 'ಕಟ್ಟಿದ್ದ ಸೋದರಿ ಇನ್ನಿಲ್ಲ.
ನವದೆಹಲಿ, ಮಾರ್ಚ್ 11: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಿದ್ದ ಸಹೋದರಿ 104 ವರ್ಷದ ಶರ್ಬತಿ ದೇವಿ ಅವರು ಶನಿವಾರ ಜಾರ್ಖಂಡ್‌ನ ಧನ್ಬಾದ್‌ನಲ್ಲಿ ನಿಧನರಾಗಿದ್ದಾರೆ. ಭಾನುವಾರ ಅವರ ಅಂತ್ಯಕ್ರಿಯೆ ನೆರವೇರಲಿದೆ. ದೆಹಲಿಯ ಲೋಕ್ ಕಲ್ಯಾಣ್ ಮಾರ್ಗ್‌ನಲ್ಲಿರುವ ಪ್ರಧಾನಿ ಮೋದಿ ಅವರ ಅಧಿಕೃತ ನಿವಾಸದಲ್ಲಿ ಕಳೆದ ವರ್ಷ ರಾಖಿ ಹಬ್ಬದ ಸಂಭ್ರಮ ಕಳೆಕಟ್ಟಿತ್ತು.
ತನ್ನ ಕಳೆದುಕೊಂಡ ಸಹೋದರನನ್ನು ಮೋದಿ ಅವರಲ್ಲಿ ಕಂಡಿದ್ದ ಶರ್ಬತಿ ದೇವಿ ಅವರು ಪ್ರಧಾನಿ ಅವರನ್ನು ಭೇಟಿ ಮಾಡುವ ಮೂಲಕ ಸುದ್ದಿಯಾಗಿದ್ದರು.ನಂತರ, ಪ್ರಧಾನಿ ಮೋದಿ ಅವರ ಆಹ್ವಾನದ ಮೇರೆಗೆ ಬಂದಿದ್ದ ಶರ್ಬತಿ ದೇವಿ ಅವರು ಮೋದಿ ಅವರಿಗೆ ರಾಖಿ ಕಟ್ಟಿದ್ದರು.
ತನ್ನ ಕಳೆದುಕೊಂಡ ಸಹೋದರನನ್ನು ಮೋದಿ ಅವರಲ್ಲಿ ಕಂಡಿದ್ದ ಶರ್ಬತಿ ದೇವಿ ಅವರ ಅಪೇಕ್ಷೆಯನ್ನು ಪ್ರಧಾನಿ ಮೋದಿ ತೀರಿಸಿದ್ದರು. ಅವರೊಂದಿಗೆ ರಾಖಿ ಹಬ್ಬ ಆಚರಿಸುವ ಬಯಕೆ ಈಡೇರಿತ್ತು.ಶರ್ಬತಿ ಅವರ ಆಸೆ ಈಡೇರಿಸುವಂತೆ, ಪತ್ರದ ಮೂಲಕ ಪ್ರಧಾನಿಗಳನ್ನು ಕೋರಲಾಗಿತ್ತು.
ಧನರಾಜ್ ಅಗರವಾಲ್ ಎಂಬುವವರನ್ನು ಮದುವೆಯಾಗಿದ್ದ ಶರ್ಬತಿ ಅವರಿಗೆ 9 ಜನ ಮಕ್ಕಳಿದ್ದರು. ಆದರೆ, ಈಗ ಪತಿ ಸೇರಿದಂತೆ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದರು. ನಾಲ್ವರು ಮಕ್ಕಳು, ಮೂವರು ಪುತ್ರಿರನ್ನು ಅಗಲಿದ್ದಾರೆ.
Good
Good