ಅದ್ಭುತ ಯಶಸ್ಸಿನೊಂದಿಗೆ ಕಲಾಪ್ರೇಮಿಗಳನ್ನು ಆಕರ್ಷಿಸಿದ ರೋಟರಿ ಕ್ಲಬ್ ಆಫ್ ಬೆಂಗಳೂರು ಕಾರ್ಯಕ್ರಮ
ಅದ್ಭುತ ಯಶಸ್ಸಿನೊಂದಿಗೆ ಕಲಾಪ್ರೇಮಿಗಳನ್ನು ಆಕರ್ಷಿಸಿದ ರೋಟರಿ ಕ್ಲಬ್ ಆಫ್ ಬೆಂಗಳೂರು ಕಾರ್ಯಕ್ರಮ.

ಬೆಂಗಳೂರು:ರೋಟರಿ ಕ್ಲಬ್ ಆಫ್ ಬೆಂಗಳೂರು ತನ್ನ ವಾರ್ಷಿಕ ಕಲಾ ಕಾರ್ಯಕ್ರಮವಾದ ಕಲಾ ಫಾರ್ ವಿದ್ಯಾವನ್ನು ಫೆಬ್ರವರಿ 28ರಿಂದ ಮಾರ್ಚ್ 2ರವರೆಗೆ ಬೆಂಗಳೂರಿನ ಪ್ರತಿಷ್ಠಿತ ಐಟಿಸಿ ವಿಂಡ್ಸರ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಿತು. ಮೂರು ದಿನಗಳ ಈ ಕಾರ್ಯಕ್ರಮ ಭಾರತದ ಎಲ್ಲೆಡೆಯ 40 ಕ್ಕೂ ಹೆಚ್ಚಿನ ಖ್ಯಾತ ಮತ್ತು ಉದಯೋನ್ಮುಖ ಕಲಾವಿದರ ಕಲಾಕೃತಿಗಳ ಸೊಗಸಾದ ಸಂಗ್ರಹವನ್ನು ಪ್ರದರ್ಶಿಸಿತು.
ಈ ಕಲಾಕೃತಿಗಳನ್ನು ಶ್ರೀಮತಿ ಅಮಿತಾ ಶಣೈ ಅವರು ಸಂಗ್ರಹಿಸಿದ್ದಾರೆ.

ಈ ಕಾರ್ಯಕ್ರಮ ಭರ್ಜರಿ ಯಶಸ್ಸು ಕಂಡಿದೆ, ಇದು ನಗರ ಮತ್ತು ಹೊರಗಿನ ಕಲಾ ಪ್ರೇಮಿಗಳು, ಕಲೋತ್ಸಾಹಿಗಳು ಮತ್ತು ದಾನಿಗಳನ್ನು ಆಕರ್ಷಿಸಿತು. ರೋಟರಿ ಕ್ಲಬ್ ಆಫ್ ಬೆಂಗಳೂರಿಗೆ ಇಷ್ಟವಾದ ಉದ್ದೇಶಕ್ಕಾಗಿ ಅಂದರೆ ರೋಟರಿ ಬೆಂಗಳೂರು ವಿದ್ಯಾಲಯದ ಮಕ್ಕಳ ಪ್ರಯೋಜನಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಪ್ರದರ್ಶನವು ಉತ್ತಮ ಮೊತ್ತವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿತ್ತು.
ರೋಟರಿ ಕ್ಲಬ್ ಬೆಂಗಳೂರುವಿನ ಅಧ್ಯಕ್ಷರಾದ ರೋಟೇರಿಯನ್ ಗೌರಿ ಓಝಾ, ಅಂತಾರಾಷ್ಟ್ರೀಯ ಸೇವೆಗಳ ನಿರ್ದೇಶಕರಾದ ರೊಟೇರಿಯನ್. ಡಾ. ಮುಸ್ತಾಲಿ ವಾಘ್ ಮತ್ತು ಅಂತಾರಾಷ್ಟಿçÃಯ ಸೇವೆಗಳ ಮುಖ್ಯಸ್ಥರಾದ ರೋಟೇರಿಯನ್ ಡಾ. ಅರ್ಜುನ್ ಶ್ರೀವತ್ಸ ಅವರು ಈ ಕಾರ್ಯಕ್ರಮವನ್ನು ಅದ್ಭುತವಾಗಿ ಯಶಸ್ವಿಗೊಳಿಸುವಲ್ಲಿ ನೆರವು ನೀಡಿದ ಎಲ್ಲರಿಗೂ ತಮ್ಮ ಹೃತ್ಪೂರ್ವಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
Recent comments