ಚೆಕ್ ಫಾರ್ ಚೇಂಜ್ ಅಭಿಯಾನದಿಂದ ಮಹಿಳೆಯರಿಗೆ ಕರೆ ನೀಡಿದ ಅಪೋಲೊ ಕ್ರೇಡಾಲ್ ಬೆಂಗಳೂರು.
ಚೆಕ್ ಫಾರ್ ಚೇಂಜ್ - ಅಭಿಯಾನದ ಮೂಲಕ ಮಹಿಳಾ ದಿನದಂದು ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಮಹಿಳೆಯರಿಗೆ ಕರೆ ನೀಡಿದ ಅಪೊಲೊ ಕ್ರೇಡಲ್ ಬೆಂಗಳೂರು, ಭಾರತ.
ಮಾರ್ಚ್ 11, 2025 - ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಚರಣೆಯ ಹಿನ್ನೆಲೆಯಲ್ಲಿ, ಅಪೊಲೊ ಕ್ರೇಡಲ್ ಎಂಡ್ ಚಿಲ್ಡçನ್ ಆಸ್ಪತ್ರೆ ತನ್ನ #ಚೆಕ್‌ಫಾರ್‌ಚೇಂಜ್ ಆರೋಗ್ಯ ಜಾಗೃತಿ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಕಾರ್ಯಕ್ರಮ ಮಹಿಳೆಯರ ಆರೋಗ್ಯದ ಪ್ರಾಮುಖ್ಯತೆ ಮತ್ತು ಜೀವನದ ವಿವಿಧ ಹಂತಗಳಲ್ಲಿ ಮಹಿಳೆಯರು ಅನುಭವಿಸುವ ಹಲವು ಬದಲಾವಣೆಗಳನ್ನು ಎತ್ತಿ ತೋರಿಸುವಂಥದ್ದಾಗಿದೆ.
ಬೆಂಗಳೂರಿನ ರಾಜಾಜಿನಗರ, ಕೋರಮಂಗಲ ಮತ್ತು ಜಯನಗರದ ಅಪೊಲೊ ಕ್ರೇಡಲ್ ಕೇಂದ್ರಗಳಲ್ಲಿ ಈ ಅಭಿಯಾನ ನಡೆಸಲಾಯಿತು.
ನಿಯಮಿತ ಆರೋಗ್ಯ ತಪಾಸಣೆ ಮತ್ತು ಸಕ್ರಿಯ ಯೋಗಕ್ಷೇಮವನ್ನು ಪ್ರೋತ್ಸಾಹಿಸುವುದಕ್ಕಾಗಿ ವಿನ್ಯಾಸಗೊಳಿಸಲಾದ ಚಟುವಟಿಕೆಗಳ ಸರಣಿಯನ್ನು ಈ ಅಭಿಯಾನವು ಒಳಗೊಂಡಿತ್ತು. ಗಮನಾರ್ಹವಾಗಿ, ಈ ಉದ್ದೇಶ ಸಾಧನೆಗಾಗಿ ವಿವಿಧ ಹಿನ್ನೆಲೆ ಮತ್ತು ವಯೋಮಾನದ ಮಹಿಳೆಯರು ರೋಮಾಂಚಕ ವಾಕಥಾನ್ ಮತ್ತು ಬೈಕ್‌ಥಾನ್‌ಗಳಲ್ಲಿ ಒಂದಾಗಿ ಸೇರಿದ್ದರು.
ಮಹಿಳೆಯರ ಆರೋಗ್ಯಕ್ಕೆ ಆದ್ಯತೆ ನೀಡುವ ತಮ್ಮ ಬದ್ಧತೆಯ ಸಂಕೇತವಾಗಿ, ಭಾಗವಹಿಸಿದವರು ಒಟ್ಟಾರೆ 35 ಕಿಲೋಮೀಟರ್ ದೂರವನ್ನು ಕ್ರಮಿಸಿದರು. ಕರ್ನಾಟಕ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಮತ್ತು ವಿಧಾನಸಭೆಯ ಮಾಜಿ ಸದಸ್ಯೆ ಸೌಮ್ಯ ರೆಡ್ಡಿ ಅವರ ಗೌರವಾನ್ವಿತ ಉಪಸ್ಥಿತಿಯಿಂದ ವಾಕಥಾನ್ ಮತ್ತಷ್ಟು ಮೆರುಗು ಕಂಡಿತ್ತು. ಅವರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ, ತಮ್ಮ ಬೆಂಬಲ ನೀಡಿದರು. “ಮಹಿಳೆಯರು ಆರೋಗ್ಯಕರ ಸಮಾಜದ ಬೆನ್ನೆಲುಬಿದ್ದಂತೆ, ಅವರು ಆರಂಭದಿAದಲೂ ಅವರ ಆರೋಗ್ಯವನ್ನು ಗಮನಿಸಿಕೊಳ್ಳುವುದು ಅತ್ಯಗತ್ಯ” ಎಂದು ಅಪೋಲೋ ಕ್ರೇಡಲ್ ಮತ್ತು ಅಪೋಲೋ ಫರ್ಟಿಲಿಟಿಯ ಮುಖ್ಯ ಕಾರ್ಯಾಚರಣೆ ಅಧಿಕಾರಿ, ಅನುಭವ್ ಪ್ರಶಾಂತ್ ಅವರು ಹೇಳಿದರಲ್ಲದೇ “ಭಾರತದಲ್ಲಿ ಮಹಿಳೆಯರ ಆರೋಗ್ಯವು ಸಂಕೀರ್ಣ ಮತ್ತು ಬಹುಮುಖಿ ಸಮಸ್ಯೆಯಾಗಿದ್ದು, ಇದು ವಿಸ್ತಾರವಾದ ಶ್ರೇಣಿಯ ಕಾಳಜಿಗಳಿಂದ ಕೂಡಿದೆ.
#ಚೆಕ್‌ಫಾರ್‌ಚೇಂಜ್ ಮೂಲಕ, ಮಹಿಳೆಯರು ತಮ್ಮ ಯೋಗಕ್ಷೇಮ ನಿಯಂತ್ರಿಸಲು ಮತ್ತು ಸಕ್ರಿಯ ಆರೋಗ್ಯ ನಿರ್ವಹಣೆಯ ಸಂಸ್ಕೃತಿ ಪ್ರೋತ್ಸಾಹಿಸುವುದಕ್ಕಾಗಿ ಸಬಲೀಕರಿಸುವ ಗುರಿಯನ್ನು ನಾವು ಹೊಂದಿದ್ದೇವೆ. #ಚೆಕ್‌ಫಾರ್‌ಚೇAಜ್ ಅಭಿಯಾನ ಸಮುದಾಯದಿಂದ ದೃಢವಾದ ಪ್ರತಿಕ್ರಿಯೆ ಪಡೆದಿದೆ. ಸುಮಾರು 1000 ಜನರು ಐಕ್ಯತೆಯೊಂದಿಗೆ ಭಾಗವಹಿಸುವುದರೊಂದಿಗೆ ಈ ಬೃಹತ್ ಮತದಾನವು ಭಾರತದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಮತ್ತು ಕಾಳಜಿಯನ್ನು ಒತ್ತಿಹೇಳುತ್ತದೆ. ಮಹಿಳೆಯರ ಆರೋಗ್ಯ ಸಂರಕ್ಷಣೆಗೆ ಅಪೊಲೊ ಕ್ರೇಡಲ್ ಬದ್ಧವಾಗಿದೆಯಲ್ಲದೇ, ಜಾಗೃತಿ ಮೂಡಿಸುವ ಮತ್ತು ಯೋಗಕ್ಷೇಮವನ್ನು ಪ್ರೋತ್ಸಾಹಿಸುವ ಅಭಿಯಾನಗಳ ಆಯೋಜನೆಯನ್ನು ಮುಂದುವರಿಸಲಿದೆ.
ಅಪೊಲೊ ಕ್ರೇಡಲ್ ಎಂಡ್ ಚಿಲ್ಡçನ್ಸ್ ಹಾಸ್ಪಿಟಲ್ಸ್ ಕುರಿತು: ಕ್ಲಿನಿಕಲ್ ಉತ್ಕೃಷ್ಟತೆ, ಅತ್ಯುನ್ನತ ಆರೋಗ್ಯ ಸೇವೆಗಳು ಮತ್ತು ಮಹಿಳಾ ಮತ್ತು ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ರೋಗಿ-ಕೇಂದ್ರೀಕೃತ ಆರೈಕೆ ನೀಡುವÀ ಬದ್ಧತೆಯ ಅತ್ಯುತ್ತಮ ಮಾನದಂಡಗಳಿಗೆ ಈ ಆಸ್ಪತ್ರೆ ಖ್ಯಾತಿ ಪಡೆದಿದೆ. 40 ವರ್ಷ ಅಲ್ಲದೇ 2,00,000ಕ್ಕೂ ಹೆಚ್ಚು ಶಿಶುಗಳ ಹೆರಿಗೆಗಳ ನಂತರವೂ, ಪ್ರತಿ ತಾಯಿ ಮತ್ತು ಮಗು ನಮಗೆ ಅನನ್ಯ ಪ್ರಾಮುಖ್ಯತೆ ಹೊಂದಿರುತ್ತಾರೆ.
ಐದು ಪ್ರಮುಖ ಭಾರತೀಯ ನಗರಗಳಾದ ಹೈದರಾಬಾದ್, ಬೆಂಗಳೂರು, ದೆಹಲಿ ಎನ್‌ಸಿಆರ್, ಅಮೃತಸರ ಮತ್ತು ಚೆನ್ನೈಗಳಲ್ಲಿರುವ 18ಕ್ಕೂ ಹೆಚ್ಚಿನ ಕೇಂದ್ರಗಳೊAದಿಗೆ - ಅಪೊಲೊ ಕ್ರೇಡಲ್ ಎಂಡ್ ಚಿಲ್ಡçನ್ಸ್ ಹಾಸ್ಪಿಟಲ್ಸ್ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ಪೂರೈಸುವಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ.
Recent comments