Skip to main content
ಬೆಳಗಾವಿ ಜಿಲ್ಲೆಯ ಯುವಕ "ಕೌಟಿಲ್ಯ " ಚಿತ್ರದ ನಿರ್ದೇಶಕ

ಬೆಳಗಾವಿ ಜಿಲ್ಲೆಯ ಯುವಕ "ಕೌಟಿಲ್ಯ " ಚಿತ್ರದ ನಿರ್ದೇಶಕ

ಬೆಳಗಾವಿ ಜಿಲ್ಲೆಯ ಯುವಕ "ಕೌಟಿಲ್ಯ " ಚಿತ್ರದ ನಿರ್ದೇಶಕ

ಬೆಳಗಾವಿ

ಬೆಂಗಳೂರು :ಕೆಸರಲ್ಲೆ ಕಮಲ ಅರಳೋದು ಎಂಬ ಕನ್ನಡ ಜನಪ್ರಿಯ ನಾಣ್ಣುಡಿಯಂತೆ ಕಷ್ಟಗಳನ್ನೆ ಸಾಧನೆಯ ಮೆಟ್ಟಿಲಾಗಿಸಿಕೊಂಡು ಇಂದು ಸಾಧಕರ ಹಾದಿಯಲ್ಲಿರುವ ಬರವಸೆಯ ಯುವ ನಿರ್ದೇಶಕ *ಪ್ರಭಾಕರ್ ಶೇರ್ ಖಾನೆ* ಯವರು ತಮ್ಮ ಚೊಚ್ಚಲ ನಿರ್ದೇಶನದ *ಕೌಟಿಲ್ಯ* ಚಿತ್ರದ ಮುಖಾಂತರ ಸಿನಿ ಲೋಕಕ್ಕೆ ದಾಪುಗಾಲಿಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ನಾಗನೂರು ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಸಿನಿಮಾದಲ್ಲಿ ಆಸಕ್ತಿ ಬೆಳೆಸಿಕೊಂಡರು.

ಮುಂದಿನ ದಿನಗಳಲ್ಲಿ ಇವರ ಈ ಆಸಕ್ತಿಯೇ ಅವರನ್ನು ಯಾರು ಪರಿಚಿತರಿಲ್ಲದ ಬೃಹತ್ ಬೆಂಗಳೂರಿನ ಗಾಂಧಿ ನಗರಕ್ಕೆ ಕರೆತರುತ್ತದೆ. ದೊಡ್ಡ ಕನಸನ್ನು ಹೊತ್ತಿದ್ದ ಇವರಿಗೆ ಯಾರ ಸಹಾಯವು ಸಿಗದೆ ಅನೇಕ ಅವಮಾನಗಳನ್ನ ಅನುಭವಿಸುತ್ತಾರೆ ಬೆಟ್ಟದಂತಹ ಕನಸು ಮಂಜಿನಂತೆ ಕರಗುವಾಗ *ವಿಷ್ಣು ಭಂಡಾರಿ* ಎಂಬುವವರಿಂದ *ಆಧರ್ಶ ಫಿಲ್ಮ್ ಇನ್ಸ್ಟಿಟ್ಯೂಟ್* ನ ಪರಿಚಯವಾಗುತ್ತದೆ ನಂತರ ಅಲ್ಲಿಯೇ ನಿರ್ದೇಶನದ ತರಬೇತಿ ಪಡೆಯುತ್ತಾರೆ ನಂತರ *ಗಾಳಿಪಟ* ಎಂಬ ಧಾರವಾಹಿಯಲ್ಲಿ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುತ್ತಾರೆ ತದ ನಂತರ *ಗೊಂಬೆಗಳ ಲವ್*, *ನಾನು ಲವರ್ ಆಫ್ ಜಾನು*, *ಕೆಂಡ ಸಂಪಿಗೆ* ಹೀಗೆ ಅನೇಕ ಚಲನಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ನಿರ್ವಹಿಸಿ ನಿರ್ದೇಶನದಲ್ಲಿ ಪರಿಣಿತಿ ಪಡೆದ ಇವರು ಇಂದು ತಮ್ಮ ಕನಸಿನ ಕೂಸಾದ *ಕೌಟಿಲ್ಯ* ಚಿತ್ರ ನಿರ್ದೇಶನದ ಮುಖಾಂತರ ಸಿನಿ ಲೋಕದಲ್ಲಿ ತಮ್ಮ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ ಇವರ ಚೊಚ್ಚಲ ನಿರ್ದೇಶನದ *ಕೌಟಿಲ್ಯ* ಚಿತ್ರವು ಪೋಸ್ಟ್ ಪ್ರೊಡಕ್ಷನ್ ಮುಗಿಸಿ ರಿಲೀಸ್ ಹಂತದಲ್ಲಿದ್ದು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಗೊಳ್ಳಲಿ ಎಂದು ಶುಭ ಹಾರೈಸುವ *ಮದುವೆ ಅಂದ್ರೇನೆ ಕಾಮಿಡಿ ಗುರು* ಚಿತ್ರತಂಡ

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.