ಕೆ.ಆರ್ .ಪುರ ಭರತ ನಾಟ್ಯ ವೈಭವ .
ಕೆ .ಆರ್ .ಪುರ ಭರತನಾಟ್ಯ ವೈಭವ .
ಕೆ.ಆರ್.ಪುರ: ಪ್ರಾಚಿನ ಕಾಲದ ವೈಭವವನ್ನು ಮರಳಿ ನೆನಪಿಗೆ ತರಲು ಭರತನಾಟ್ಯದಂತಹ ಕಲೆ ಎಲ್ಲರನ್ನೂ ಆಕರ್ಷಿಸುತ್ತದೆ ಎಂದು ಶಾಸಕ ಬೈರತಿ ಬಸವರಾಜ್ ತಿಳಿಸಿದರು. ರಾಮಮೂರ್ತಿನಗರದ ನಾಟ್ಯ ಪ್ರಿಯ ನೃತ್ಯಕ್ಷೇತ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೃತ್ಯಶ್ರೀ ಸಾಯಿ ಡ್ಯಾನ್ಸ್ ಆಕಾಡೆಮಿಯ ಐದನೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ದೇಶ ಸಮೃದ್ಧ ಸಾಂಸ್ಕೃತಿಕ ನೆಲೆಯನ್ನು ಹೊಂದಿದೆ.
ಭಾರತದ ಪ್ರತಿಯೊಂದು ಪ್ರದೇಶ ಭೌಗೋಳಿಕ ಹಿನ್ನೆಲೆ ಹೊಂದಿದ್ದರೂ ಅಯಾ ಪ್ರದೇಶದ ಕಲಾ ಹಿನ್ನೆಲೆ ವಿಶೇಷತೆಯಿಂದ ಕೂಡಿದೆ. ಭರತನಾಟ್ಯ ಕಥಕ್, ಕೂಚಿಪುಡಿ, ಮಣಿಪುರಿ, ಒಡಿಸ್ಸಿ ಶೈಲಿಯ ಮೊದಲಾದ ಕಲೆ ಸಾಹಿತ್ಯವು ಮಿಳಿತಗೊಂಡಿದೆ. ಕಲಾ ಆರಾಧನೆಯನ್ನು ಪ್ರೋತ್ಸಾಹಿಸುತ್ತಿರುವ ನೃತ್ಯಶ್ರೀ ಸಾಯಿ ಡ್ಯಾನ್ಸ್ ಅಕಾಡೆಮಿಯ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ರಾಮಮೂರ್ತಿನಗರ ವಾರ್ಡ್ ಪಾಲಿಕೆ ಸದಸ್ಯೆ ಪದ್ಮಾವತಿ ಶ್ರೀನಿವಾಸ್ ಮಾತನಾಡಿ, ಸತತ ಐದು ವರ್ಷಗಳ ಕಾಲ ನೃತ್ಯ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡುತ್ತಿರುವ ಈ ಭಾಗದ ನೃತ್ಯಶ್ರೀ ಸಾಯಿ ಡ್ಯಾನ್ಸ್ ಅಕಾಡೆಮಿ ಮುಂದಿನ ದಿನಗಳಲ್ಲಿ ಯಶಸ್ಸು ಸಾಧಿಸಲಿ. ಈ ಭಾಗದ ಪ್ರತಿಭೆಗಳನ್ನು ಪೋಷಿಸಲಿ ಎಂದರು. ಮಕ್ಕಳು ಭರತನಾಟ್ಯ, ಕರಾಟೆ, ಗಿಟಾರ್, ಯೋಗ ಮುಂತಾದ ಕಲೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಕಲ್ಕೆರೆ ಶ್ರೀನಿವಾಸ್, ಕೃಷ್ಣಮೂರ್ತಿ, ರಾಮಣ್ಣ ಪಿ. ನೃತ್ಯಶ್ರೀ ಸಾಯಿ ಡ್ಯಾನ್ಸ್ ಅಕಾಡೆಮಿಯ ಅಧ್ಯಕ್ಷೆ ಗುರು ಸಂಧ್ಯಾ ಅಶೋಕ್, ಸದಸ್ಯ ಅಶೋಕ್ ಮೂಲ್ಯ ಇದ್ದರು.
Recent comments