Skip to main content
ಮನೋಜವಂ ಆತ್ರೇಯ ಸಾರಥ್ಯದಲ್ಲಿ "ಮೈ ನೇಮ್ ಇಸ್ ರಾಜ್" ಅದ್ದೂರಿ ಸಂಗೀತ ಕಾರ್ಯಕ್ರಮ.

ಮನೋಜವಂ ಆತ್ರೇಯ ಸಾರಥ್ಯದಲ್ಲಿ "ಮೈ ನೇಮ್ ಇಸ್ ರಾಜ್" ಅದ್ದೂರಿ ಸಂಗೀತ ಕಾರ್ಯಕ್ರಮ.

ಮನೋಜವಂ ಆತ್ರೇಯ ಸಾರಥ್ಯದಲ್ಲಿ "ಮೈ ನೇಮ್ ಇಸ್ ರಾಜ್" ಅದ್ದೂರಿ ಸಂಗೀತ ಕಾರ್ಯಕ್ರಮ.

ಮನೋಜವಂ ಆತ್ರೇಯ ಸಾರಥ್ಯದಲ್ಲಿ "ಮೈ ನೇಮ್ ಇಸ್ ರಾಜ್" ಅದ್ದೂರಿ ಸಂಗೀತ ಕಾರ್ಯಕ್ರಮ.

ಗಾನಗಂಧರ್ವನಿಗೆ ಗಾನನಮನ. ಏಪ್ರಿಲ್ 24 ವರನಟ ಡಾ||ರಾಜಕುಮಾರ್ ಹುಟ್ಟುಹಬ್ಬ.‌ ಈ ಸಂದರ್ಭದಲ್ಲಿ ಏಪ್ರಿಲ್ 28 ಗರುವಾರ ಸಂಜೆ 6.30ಕ್ಕೆ ಗಾನಗಂಧರ್ವ ಡಾ||ರಾಜಕುಮಾರ್ ನೆನಪಿನಲ್ಲಿ "ಮೈ ನೇಮ್ ಇಸ್ ರಾಜ್" ಎಂಬ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಕೆಲವು ವರ್ಷಗಳ ಹಿಂದೆ "ಸರಿಗಮಪ" ಮೂಲಕ ಮರಿ ಅಣ್ಣವ್ರು ಅಂತಲೇ ಹೆಸರಾಗಿದ್ದ ಮನೋಜವಂ‌ ಅತ್ರೇಯ ಸಾರಥ್ಯದಲ್ಲಿ ಈ ಸಂಗೀತ ಕಾರ್ಯಕ್ರಮ ನಡೆಯಲಿದೆ. . ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮನೋಜವಂ ಆತ್ರೇಯ ಮಾತನಾಡಿದರು.

ನಾನು ಮೊದಲಿನಿಂದಲೂ ಅಣ್ಣವ್ರ ಅಭಿಮಾನಿ. "ಸರಿಗಮಪ"ನಲ್ಲೂ ನಾನು ಹೆಚ್ಚಾಗಿ ಅವರ ಹಾಡುಗಳನ್ನು ಹಾಡುತ್ತಿದ್ದೆ. ಎಲ್ಲರೂ ಮರಿ ಅಣ್ಣವ್ರು ಅಂತಲೇ ಕರೆಯುತ್ತಿದ್ದರು. ಈಗ ಡಾ||ರಾಜ್ ನೆನಪಿನಲ್ಲಿ "ಮೈ ನೇಮ್ ಇಸ್ ರಾಜ್" ಎಂಬ ಸಂಗೀತ ಕಾರ್ಯಕ್ರಮ ಟೀಮ್ ಆತ್ರೇಯ ಮೂಲಕ ಆಯೋಜಿಸಿದ್ದೇವೆ. ಏಪ್ರಿಲ್ 28 ರ ಗುರುವಾರ ಸಂಜೆ 6.30 ಕ್ಕೆ ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ರಾಜ್ ಅವರ ಆದರ್ಶಮಯ ವ್ಯಕ್ತಿತ್ವವನ್ನು ಸಂಗೀತದ ಮೂಲಕ ಪ್ರೇಕ್ಷಕರಿಗೆ ಉಣಬಡಿಸುವ ಕಾರ್ಯಕ್ರಮ ಇದಾಗಲಿದೆ. ನಾಡಿನ ಜನಪ್ರಿಯ ಗಾಯಕರು ಹಾಗೂ ವಾದ್ಯಗಾರರ ಸಮ್ಮಿಲನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಹಿರಿಯ ನಿರ್ದೇಶಕ ಭಗವಾನ್ ಸೇರಿದಂತೆ ಚಿತ್ರರಂಗದ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಟಿಕೇಟ್ ದರ 350ರಿಂದ 500 ರೂಪಾಯಿಗಳಿಗೆ ನಿಗದಿ ಪಡಿಸಲಾಗಿದೆ. ಬುಕ್ ಮೈ ಶೋ ನಲ್ಲಿ ಬುಕ್ ಮಾಡಿಕೊಳ್ಳಬಹುದು. ಈ ಕಾರ್ಯಕ್ರಮದಿಂದ ಬಂದ ಹಣವನ್ನು ಮೈಸೂರಿನ "ಶಕ್ತಿಧಾಮ" ಹಾಗೂ ಬೆಂಗಳೂರಿನ "ನವಚೇತನ" ಸಂಸ್ಥೆಗೆ ನೀಡುತ್ತೇವೆ ಎಂದು ಮಾಹಿತಿ ನೀಡಿದ ಮನೋಜವಂ ಆತ್ರೇಯ, ಇದೇ ಸಂದರ್ಭದಲ್ಲಿ ತಾವೇ ಬರೆದಿರುವ ಹಾಡೊಂದನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು. ಮನೋಜವಂ ಅವರ ತಂದೆ ಜನಾರ್ದನ, ಟೀಮ್ ಆತ್ರೇಯ ಸದಸ್ಯರಾದ ಭರತ್, ಪ್ರಜ್ವಲ್ ಕಶ್ಯಪ್ ಹಾಗೂ ಮನೋಜ್ ಹೊಸ್ಮನೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಪತ್ರಿಕಾಗೋಷ್ಠಿಗೂ ಮುನ್ನ "ಮೈ ನೇಮ್ ಇಸ್ ರಾಜ್" ಸಂಗೀತ ಕಾರ್ಯಕ್ರಮಕ್ಕೆ ಸಿದ್ದಪಡಿಸಿರುವ ಮೂರು ಪ್ರೋಮೊಗಳನ್ನು ಪ್ರದರ್ಶಿಸಲಾಯಿತು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.