Skip to main content
"ಕಿಂಗ್ & ಕ್ವೀನ್" ಆಗಿ ಬರುತ್ತಿದ್ದಾರೆ ಶ್ರೇಯಸ್ ಚಿಂಗ - ಇತಿ ಆಚಾರ್ಯ.

"ಕಿಂಗ್ & ಕ್ವೀನ್" ಆಗಿ ಬರುತ್ತಿದ್ದಾರೆ ಶ್ರೇಯಸ್ ಚಿಂಗ - ಇತಿ ಆಚಾರ್ಯ.

"ಕಿಂಗ್ & ಕ್ವೀನ್" ಆಗಿ ಬರುತ್ತಿದ್ದಾರೆ ಶ್ರೇಯಸ್ ಚಿಂಗ - ಇತಿ ಆಚಾರ್ಯ.

Kannada

ಕುತೂಹಲ ಮೂಡಿಸಿದೆ ರಿವೇಂಜ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಪೋಸ್ಟರ್* .

ಕನ್ನಡ ಚಿತ್ರರಂಗಕ್ಕೀಗ ಸುವರ್ಣ ಯುಗ ಎಂದರೆ ತಪ್ಪಾಗಲಾರದು. ಕಂಟೆಂಟ್ ಓರಿಯಂಟೆಡ್ ಸಿನಿಮಾಗಳನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಡೇವಿಡ್ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ಶ್ರೇಯಸ್ ಚಿಂಗ ನಾಯಕನಾಗಿ ಹಾಗೂ ಇತಿ ಆಚಾರ್ಯ ನಾಯಕಿಯಾಗಿ ಅಭಿನಯಿಸುತ್ತಿರುವ "ಕಿಂಗ್ & ಕ್ವೀನ್" ಚಿತ್ರದ ಪೋಸ್ಟರ್ ಅನಾವರಣವಾಗಿದೆ‌‌.

Kannada

ನವರಸ ನಾಯಕ ಜಗ್ಗೇಶ್ ಪುತ್ರ ಯತಿರಾಜ್ ಸಹ ವಿಶೇಷಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಹೊಸವರ್ಷದ ಆರಂಭದ ದಿನ ಈ ಹೊಸ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ಅರ್ಜುನ್ ಸುಬ್ರಹ್ಮಣ್ಯ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಶ್ರೇಯಸ್ ಚಿಂಗ ಅಭಿನಯದ "ಡೇವಿಡ್" ಚಿತ್ರವನ್ನು ನಿರ್ಮಿಸಿರುವ ಪ್ರಸಾದ್ ರುದ್ರಮುನಿ ನಿರಗಂಟಿ, ಪ್ರದೀಪ್ ಅಬ್ಬಯ್ಯ ಹಾಗೂ ವರುಣ್ ರಾಘವೇಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Kannada

ಚಿತ್ರದಲ್ಲಿ ನಾಲ್ಕು ಸುಮಧುರ ಹಾಡುಗಳಿದೆ. ಅದ್ಭುತ ಗಾಯನದ ಮೂಲಕ ಜನಮನಸೂರೆಗೊಂಡಿರುವ ALL OK ಸಂಗೀತ ನೀಡಲಿದ್ದಾರೆ. ಚಿತ್ರದಲ್ಲಿ ಮೈನವಿರೇಳಿಸುವ ಆರು ಸಾಹಸ ಸನ್ನಿವೇಶಗಳಿದೆ‌. ಚೇತನ್ ಡಿಸೋಜ, ಚಾಮರಾಜ್, ರವಿ ಜಮಖಂಡಿ, ರೋಹಿತ್ ಅರುಣ್ ಸಾಹಸ ಸಂಯೋಜಿಸಲಿದ್ದಾರೆ.

ಶ್ರೇಯಸ್ ಚಿಂಗ, ಇತಿ ಆಚಾರ್ಯ, ಶೋಭ್ ರಾಜ್, ಯತಿರಾಜ್ ಜಗ್ಗೇಶ್, ಲಲಿತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಫೆಬ್ರವರಿ ಮೊದಲವಾರದಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.