Skip to main content
ಯಶಸ್ವಿ ಜೈಸ್ವಾಲ್ ಐಪಿಎಲ್ ಪಯಣದ ಕುರಿತು ತಂದೆ ಹೇಳಿದ ಮಾತುಗಳಿವು

ಯಶಸ್ವಿ ಜೈಸ್ವಾಲ್ ಐಪಿಎಲ್ ಪಯಣದ ಕುರಿತು ತಂದೆ ಹೇಳಿದ ಮಾತುಗಳಿವು

ಯಶಸ್ವಿ ಜೈಸ್ವಾಲ್ ಐಪಿಎಲ್ ಪಯಣದ ಕುರಿತು ತಂದೆ ಹೇಳಿದ ಮಾತುಗಳಿವು !

Jaishwal

ನವದೆಹಲಿ: ಕಷ್ಟದ ದಿನಗಳನ್ನು ಸವೆಸಿ ದೇಶೀಯ ಕ್ರಿಕೆಟ್ ನಲ್ಲಿ ಎಲ್ಲರ ಗಮನ ಸೆಳೆದಿರುವ 17ರ ಪ್ರಾಯದ ಯಶಸ್ವಿ ಜೈಸ್ವಾಲ್ ಅವರು ಗುರುವಾರ ನಡೆದಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದರು. ಈ ಬಗ್ಗೆ ಅವರ ತಂದೆ ಭೂಪೇಂದ್ರ ಜೈಸ್ವಾಲ್ ಸಂತಸ ವ್ಯಕ್ತಪಡಿಸಿದ್ದಾರೆ. “ಮಗನ ಕಠಿಣ ಪರಿಶ್ರಮವೆಂದೂ ವ್ಯರ್ಥವಾಗಲಿಲ್ಲ. ಐಪಿಎಲ್ ಟೂರ್ನಿಯಲ್ಲಿ ಅವರು ಅತ್ಯುತ್ತಮ ಪ್ರದರ್ಶನ ತೋರಿ ಭಾರತ ತಂಡದಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆಂಬ ನಂಬಿಕೆ ಇದೆ. ಆಗದ್ದಲ್ಲಿ ನನಗೆ ತುಂಬಾ ಸಂತಸವಾಗಲಿದೆ,” ಎಂದು ಹೇಳಿದರು. ಯಶಸ್ವಿ ಜೈಸ್ವಾಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ ಖರೀದಿಸುತ್ತಿದ್ದಂತೆ ಯುವ ಆಟಗಾರನ ಕುಟುಂಬ ಹಾಗೂ ಸಂಬಂಧಿಕರು ಸಿಹಿ ಹಂಚಿ ಸಂಭ್ರಮಿಸಿದ್ದರು.

Jaishwal

“ಇದು ದುಡ್ಡಿನ ವಿಚಾರವಲ್ಲ. ಅವರು ಪಟ್ಟ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಇದು. ಜೈಸ್ವಾಲ್ ನಿಜಕ್ಕೂ ಹೆಮ್ಮೆ ತರುವಂಥ ಸಾಧನೆ ಮಾಡಿದ್ದಾರೆ. 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ ದೇಶಕ್ಕೆ ಟ್ರೋಫಿಯೊಂದಿಗೆ ತವರಿಗೆ ಮರಳುವಂತೆ ದೇವರಲ್ಲಿ ಪ್ರಾಥನೆ ಸಲ್ಲಿಸಿದ್ದೇನೆ,” ಎಂದು ತಿಳಿಸಿದರು. ಪ್ರಥಮ ದರ್ಜೆ ಕ್ರಿಕೆಟ್ ನ 50 ಓವರ್ ಮಾದರಿಯಲ್ಲಿದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹಿರಿಮೆಗೆ ಯಶಸ್ವಿ ಜೈಸ್ವಾಲ್ ಪಾತ್ರರಾಗಿದ್ದಾರೆ. ಕಳೆದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.

Jaishwal

ಇವರು ಸದ್ಯ 19 ವಯೋಮಿತಿ ಭಾರತ ವಿಶ್ವಕಪ್ ತಂಡದಲ್ಲಿದ್ದಾರೆ. ಈ ಬಗ್ಗೆ ಯಶಸ್ವಿ ಜೈಸ್ವಾಲ್ ತಾಯಿ ಪ್ರತಿಕ್ರಿಯಿಸಿ,” ತಮ್ಮ ಮಗ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಯ್ಕೆಯಾಗಿರುವುದಕ್ಕೆ ತುಂಬಾ ಖುಷಿಯಾಗಿದೆ. ಅವರು ಭಾರತ ಹಿರಿಯರ ತಂಡಕ್ಕೆ ಆಯ್ಕೆಯಾಗಲಿದ್ದಾರೆಂಬ ಬಗ್ಗೆ ನಂಬಿಕೆ ಇದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.