Skip to main content
ಜಂಕಾರ್ ಮ್ಯೂಸಿಕ್ ನಿಂದ "ಹೃದಯವಂತ ವಿಷ್ಣು" ಹಾಡಿನ ಮೂಲಕ ಡಾ||ವಿಷ್ಣುವರ್ಧನ್ ಅವರಿಗೆ ಗಾನನಮನ.

ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ ಎಸ್.ನಾರಾಯಣ್ ಬರೆದು ಸಂಗೀತ ನೀಡಿರುವ ಈ ಹಾಡು.* ಆಡಿಯೋ ಕ್ಷೇತ್ರದಲ್ಲಿ ತನ್ನದೇ ಹೆಸರು ಮಾಡಿರುವ ಜಂಕಾರ್ ಮ್ಯೂಸಿಕ್ ಸಂಸ್ಥೆಯ ಮೇಲೆ ಸಾಹಸಸಿಂಹ ಡಾ||ವಿಷ್ಣುವರ್ಧನ್ ಅವರಿಗೆ ಅಪಾರ ಪ್ರೀತಿ. ಜಂಕಾರ್ ಮ್ಯೂಸಿಕ್ ಸಂಸ್ಥೆಗೂ ಅವರ ಬಗ್ಗೆ ಅಪಾರ ಗೌರವ. ಡಾ||ವಿಷ್ಣುವರ್ಧನ್ ಅಭಿನಯಿಸಿರುವ ಅನೇಕ ಚಿತ್ರದ ಹಾಡುಗಳು ಜಂಕಾರ್ ಮ್ಯೂಸಿಕ್ ಬಳಿಯೇ ಇದೆ. ಡಿಸೆಂಬರ್ 30ಕ್ಕೆ ಡಾ||ವಿಷ್ಣುವರ್ಧನ್ ಅವರು ನಮ್ಮನಗಲಿ ಹದಿಮೂರು ವರ್ಷಗಳಾಗಿದೆ.

ಈ ಸಂದರ್ಭದಲ್ಲಿ ಜಂಕಾರ್ ಸಂಸ್ಥೆ "ಹೃದಯವಂತ ವಿಷ್ಣು" ಎಂಬ ಹಾಡನ್ನು ಬಿಡುಗಡೆ ಮಾಡವ ಮೂಲಕ ವಿಷ್ಣುವರ್ಧನ್ ಅವರಿಗೆ ಗಾನನಮನ ಸಲ್ಲಿಸಿದೆ. ಖ್ಯಾತ ನಿರ್ದೇಶಕ, ನಟ, ಸಾಹಿತಿ, ಸಂಗೀತ ನಿರ್ದೇಶಕ ಎಸ್ ನಾರಾಯಣ್ ಈ "ಹೃದಯವಂತ ವಿಷ್ಣು" ಹಾಡನ್ನು ಬರೆದು, ಸಂಗೀತ ನೀಡಿದ್ದಾರೆ. ಈ ಹಿಂದೆ ಕೂಡ ಎಸ್ ನಾರಾಯಣ್ ಅವರು ರಚಿಸಿ, ಸಂಗೀತ ನೀಡಿರುವ ಅನೇಕ ಹಾಡುಗಳು ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿ ಜನಪ್ರಿಯವಾಗಿದೆ.

ಹಲವು ವರ್ಷಗಳ ನಂತರ ಮತ್ತೆ ಎಸ್ ನಾರಾಯಣ್ - ಜಂಕಾರ್ ಮ್ಯೂಸಿಕ್ ಕಾಂಬಿನೇಶನ್ ನಲ್ಲಿ ಉತ್ತಮ ಗೀತೆಯೊಂದು ಬಿಡುಗಡೆಯಾಗಿದೆ. ಖ್ಯಾತ ಗಾಯಕ ಅರ್ಫಜ್ ಉಲ್ಲಾಳ್ ಈ ಗೀತೆಯನ್ನು ಸುಮಧುರವಾಗಿ ಹಾಡಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.