Skip to main content
ಯುವ ಸಬಲೀಕರಣ " ಯುವಾಹ್ " ಕಾರ್ಯಕ್ರಮಕ್ಕೆ ಚಾಲನೆ .

ಯುವ ಸಬಲೀಕರಣ " ಯುವಾಹ್ " ಕಾರ್ಯಕ್ರಮಕ್ಕೆ ಚಾಲನೆ .

ಯುವ ಸಬಲೀಕರಣ “ಯುವಾಹ್” ಕಾರ್ಯಕ್ರಮಕ್ಕೆ ಕರ್ನಾಟಕದಲ್ಲಿ ಚಾಲನೆ

K rathana prabha

ಬೆಂಗಳೂರು 30 ಜನವರಿ 2020 : ಯುವಕರಿಗೆ ಶಿಕ್ಷಣ, ತರಬೇತಿ ಹಾಗೂ ಉದ್ಯೋಗವಕಾಶಗಳನ್ನು ನೀಡುವ ನಿಟ್ಟಿನಲ್ಲಿ ಬಹು ವಲಯ ಪಾಲುದಾರರ ಯೋಜನೆಯಾದ ಯುವ ಸಬಲೀಕರಣ “ಯುವಾಹ್” ಕಾರ್ಯಕ್ರಮಕ್ಕೆ ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಕರ್ನಾಟಕದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸವಿಸ್ತಾರವಾದ ಮಾರ್ಗಸೂಚಿಯನ್ನು ರೂಪಿಸಲು ಒಂದು ಸಮಾಲೋಚನಾ ಸಭೆಯನ್ನು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ಹಾಗೂ ಯುನಿಸೆಫ್ ಜಂಟಿಯಾಗಿ ರಾಜ್ಯ ಮಟ್ಟದ ಸಮಾಲೋಚನಾ ಸಭೆಯನ್ನು ಇಂದು ಬೆಂಗಳೂರಿನಲ್ಲಿ ನಡೆಸಲಾಯಿತು.

ಈ ಕಾರ್ಯಗಾರದಲ್ಲಿ ಸರ್ಕಾರಿ ಅಧಿಕಾರಿಗಳು, ಸಮಾಜದ ಪ್ರತಿಷ್ಠಿತ ಸದಸ್ಯರು ಹಾಗೂ ಯುವಕರು ಪಾಲ್ಗೊಂಡು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಇಂದು ನಡೆದ ಸಭೆಯಲ್ಲಿ ಮಾಡಬಹುದಾದ ಸಲಹೆಗಳನ್ನಾಧರಿಸಿ ಸರ್ಕಾರಕ್ಕೆ ಒಂದು ವರದಿಯನ್ನು ನೀಡಲಾಗುವುದು. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳು ಹಾಗೂ ಪ್ರಸ್ತುತ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆಯೂ ಆಗಿರುವ ಶ್ರೀಮತಿ ಕೆ. ರತ್ನಪ್ರಭ ಅವರು ಮಾತನಾಡಿ, "ಯುವಜನ ಸಬಲೀಕರಣ ಹಾಗೂ ಕೌಶಲ್ಯ ಅಭಿವೃದ್ಧಿಯು ಮಾನ್ಯ ಪ್ರಧಾನ ಮಂತ್ರಿಯವರ ಮುಖ್ಯ ಧ್ಯೇಯಗಳಲ್ಲಿ ಒಂದಾಗಿದ್ದು ಇದಕ್ಕೆ ಪೂರಕವಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಶ್ರಮಿಸುತ್ತಿರುವುದು ಪ್ರಸ್ತಾಪಿಸಿದ್ದರು.

ಮುಂದುವರೆದು ಈ ಕಾರ್ಯಕ್ರಮಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಯುನಿಸೆಫ್ ಸಂಸ್ಥೆಯು ಸಹ ಮುಂದೆ ಬಂದಿರುವುದು ಪ್ರಶಂಸನೀಯ" ಎಂದು ಹೇಳಿದರು. ಕೇವಲ ಬೆಂಗಳೂರು ನಗರ ಮತ್ತು ಇತರ ನಗರ ಪ್ರದೇಶಗಳ ಯುವಕರನ್ನು ಪ್ರೋತ್ಸಾಹಿಸದೇ ಹಿಂದುಳಿದ ಭಾಗಗಳ ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಭಾಗಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆಯನ್ನು ಒತ್ತಿ ಹೇಳಿದರು. ಅವರು ಮುಂದುವರೆದು ಕೇವಲ ಸಂಪ್ರದಾಯಿಕ ಕಾರ್ಯಕ್ರಮಗಳಾದ ಹೋಲಿಗೆ, ಕಸೂತಿ, ಹಪ್ಪಳ ಮುಂತಾದವುಗಳನ್ನು ಹೊರತುಪಡಿಸಿ ಕೆಲವು ವಿಶೇಷ ತರಬೇತಿಗಳನ್ನು ಹಮ್ಮಿಕೊಂಡು ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಗಮನಹರಿಸಬೇಕೆಂದು ತಿಳಿಸಿದರು. ಕೇವಲ ಪೋಷಕರ ಒತ್ತಾಯದ ಮೇರೆಗೆ ಶಿಕ್ಷಣವನ್ನು ಪಡೆಯುತ್ತಿರುವ ಯುವಕರು ಅವರ ನಿಜವಾದ ಪ್ರತಿಭೆಯನ್ನು ಹೊರಹಾಕಲು ವಂಚಿತರಾಗಿದ್ದು, ಇದನ್ನು ತಪ್ಪಿಸಿ ಅವರ ಇಚ್ಛೆಗೆ ಅನುಗುಣವಾಗಿ ಶಿಕ್ಷಣ ಪಡೆಯಲು ಅನುವು ಮಾಡಿಕೊಡವ ಅವಶ್ಯಕತೆಯನ್ನು ಅವರು ಒತ್ತಿ ಹೇಳಿದರು. ಕೊನೆಯದಾಗಿ ಸಂಪ್ರದಾಯಕ ಶಿಕ್ಷಣ ವ್ಯವಸ್ಥೆಯನ್ನು ಹೊರತುಪಡಿಸಿ, ಮಕ್ಕಳಿಗೆ ಇನ್ನೂ ಹಲವಾರು ಪ್ರತಿಭೆಗಳು ಇದ್ದು ಅಂತಹ ಪ್ರತಿಭೆಗಳನ್ನು ಹೊರಹಾಕುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪೋಷಕರು ಯೋಚಿಸಬೇಕೆಂದು ತಿಳಿಸಿದರು.

ಕೆ ರತ್ನ ಪ್ರಭಾ

ಈ ಸಂದರ್ಭದಲ್ಲಿ ಮಾತನಾಡಿದ ಯೋಜನೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಯುವಜನ ಸಬಲೀಕರಣ“ಯುವಾಹ್” ಕಾರ್ಯಕ್ರಮವು ಕರ್ನಾಟಕ ರಾಜ್ಯದಲ್ಲಿ ಹಾಲಿ ಜಾರಿಯಲ್ಲಿರುವ ಅನೇಕ ಯುವ ಸಬಲೀಕರಣ ಕಾರ್ಯಕ್ರಮಗಳಿಗೆ ಅತ್ಯಂತ ಪೂರಕವಾಗುವುದಲ್ಲದೆ ದುರ್ಬಲ ಯುವಕರ ಅಗತ್ಯತೆಗಳನ್ನು ಪೂರೈಸುವಲ್ಲಿ ಸಹಾಯವಾಗುತ್ತದೆ ಎಂದು ತಿಳಿಸಿದರು.

ಯುನಿಸೆಫ್‍ನ ಕ್ಷೇತ್ರ ಅಧಿಕಾರಿಯಾದ ಶ್ರೀಮತಿ ಮೀಟಲ್ ರಸ್ದಿಯಾರವರು ಮಾತನಾಡಿ ಯುವಕರನ್ನು ಸಬಲೀಕರಿಸುವುದರಿಂದ ಅವರ ಪ್ರಗತಿಗೆ ಪೂರಕವಾಗುವುದಲ್ಲದೆ ರಾಷ್ಟ್ರಮಟ್ಟದ ಹಾಗೂ ಅಂತರಾಷ್ಟ್ರೀಯ ಮಟ್ಟದ ಆರ್ಥಿಕ ಪರಿಣಾಮ ಬೀರುತ್ತದೆ ಎಂದು ತಿಳಿಸುತ್ತಾ ಇದರಿಂದ ಸಾವಿರಾರು ಕುಟುಂಬಗಳು ಪ್ರಯೋಜನ ಪಡೆಯುತ್ತವೆ ಎಂದು ತಿಳಿಸಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.