Skip to main content
ಚಿಕ್ಕದೇವಸಂದ್ರ ಡಾ.ರಾಜಕುಮಾರ್ ಅಭಿಮಾನಿಗಳಿಂದ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರಿಗೆ ಭಾವಪೂರ್ಣ ನಮನ.

ಚಿಕ್ಕದೇವಸಂದ್ರ ಡಾ.ರಾಜಕುಮಾರ್ ಅಭಿಮಾನಿಗಳಿಂದ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರಿಗೆ ಭಾವಪೂರ್ಣ ನಮನ.

ಚಿಕ್ಕದೇವಸಂದ್ರ ಡಾ.ರಾಜಕುಮಾರ್ ಅಭಿಮಾನಿಗಳಿಂದ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರಿಗೆ ಭಾವಪೂರ್ಣ ನಮನ.

Krpura

ಕೆ.ಆರ್.ಪುರ: ಚಿಕ್ಕದೇವಸಂದ್ರ ಗ್ರಾಮದ ಸಮುದಾಯ ಭವನದಲ್ಲಿ ಬಂಗಾರದ ಮನುಷ್ಯ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ರತ್ನ ಶ್ರೀ ಪುನೀತ್ ರಾಜ್ ಕುಮಾರ್ ರವರಿಗೆ ಭಾವಪೂರ್ಣ ನಮನ ಸಲ್ಲಿಕೆ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು . ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮದ ಗಣ್ಯರು ನೆರವೇರಿಸಿದರು .

Krpura

ಈ ವೇಳೆ ಕನ್ನಡದ ಮೇರು ನಟ ಪುನೀತ್ ರಾಜ್‍ಕುಮಾರ್ ಅವರು ಸ್ವಾರ್ಥಕ್ಕಾಗಿ ಕೆಲಸ ಮಾಡದೇ ನಿಸ್ವಾರ್ಥ ಸೇವೆಯನ್ನು ರೂಢಿಸಿಕೊಂಡಿದ್ದರಿಂದಾಗಿ ದೊಡ್ಡ ವ್ಯಕ್ತಿ ಎನಿಸಿಕೊಂಡಿದ್ದರು ಎಂದು ಸಮಾಜ ಸೇವಕ ಗಂಗನಬಿಡು ವೆಂಕಟಸ್ವಾಮಿ ಹೇಳಿದರು.

ಕೆ ರ್ ಪುರ

ನಟ ಪುನೀತ್ ರಾಜಕುಮಾರ ಅವರು ಯಾವುದೇ ಫೆಲಾಪೇಕ್ಷೆ ಇಲ್ಲದೆ ಸಮಾಜದ ಉನ್ನತಿಗಾಗಿ ಬಡವರಿಗೆ ಕಾಣದ ರೀತಿಯಲ್ಲಿ ದಾನ ಮಾಡುತ್ತ ಬಂದಿದ್ದಾರೆ. ಸ್ವಾರ್ಥಕ್ಕಾಗಿ ಸೇವೆ ಮಾಡುವವರ ನಡುವೆ ನಟ ಪುನೀತ್ ರಾಜ್‍ಕುಮಾರ್ ಅವರು ಭಿನ್ನವಾಗಿ ಕಾಣುತ್ತಾರೆ. ಡಾ.ರಾಜಕುಮಾರ ಅವರಂತೆ ದೊಡ್ಡ ವ್ಯಕ್ತಿಗಳ ಸಾಲಿನಲ್ಲಿ ಪುನೀತ್ ರಾಜ್‍ಕುಮಾರ್ ಅವರನ್ನು ಕಾಣಬಹುದು ಎಂದು ಹೇಳಿದರು. ಪುನೀತ್ ರಾಜ್‍ಕುಮಾರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯಬೇಕು. ಅವರು ಬಿಟ್ಟು ಹೋಗಿರುವ ಸೇವೆಯನ್ನು ಮಾಡುವ ಮೂಲಕ ಅವರನ್ನು ಸದಾಕಾಲವೂ ನೆನಪಿನಲ್ಲಿ ಇಟ್ಟುಕೊಳ್ಳುವ ಕೆಲಸ ಮಾಡಬೇಕು. ನಟ ಪುನೀತ್ ರಾಜ್‍ಕುಮಾರ್ ಅವರ ನೆನಪಿಗೊಸ್ಕರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

 ಕೆ ರ್ ಪುರ

ರಕ್ತದಾನ ಶಿಬಿರದಲ್ಲಿ ಗ್ರಾಮದ ಯುವಕರು , ಮಹಿಳೆಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ನೆಚ್ಚಿನ ನಟನಿಗೆ ನಮನ ಸಲ್ಲಿಸಿದರು . ಚಿತ್ರ ಶೀರ್ಷಿಕೆ: ಸಮಾಜ ಸೇವಕ ಗಂಗನಬಿಡು ವೆಂಕಟಸ್ವಾಮಿ ರಕ್ತದಾನ ಶಿಬಿರ ಉದ್ಘಾಟಿಸಿದರು.

Krpura

ಚಿಕ್ಕದೇವಸಂದ್ರ ಗ್ರಾಮದ ಮುಖಂಡರಾದ ಗೋವಿಂದರಾಜು, ಆರ್ ತಿಮ್ಮಣ್ಣ, ರಮೇಶ್, ಡಿ.ಎಂ.ನಾಗರಾಜ್, ಎ.ಚಂದ್ರು, ಡಿಪಿ ಕೇಶವಮೂರ್ತಿ, ಕೆಂಪರಾಜು, ಗೌತಮ್, ರಾಜೇಶ್, ಪೈಂಟರ್ ನಾಗರಾಜ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.