Skip to main content
ಟಗರು ಖ್ಯಾತಿಯ ಡಿಚ್ಚಿ ಅಶ್ವತ.ಯಾರು ಗೊತ್ತ.?

ರಾರ್ಬಟ್ ಚಿತ್ರದ ಸ್ಟಂಟ್ ಮಾಸ್ಟರ್ ವಿನೋದ್ ಯಾರ್ ಗೊತ್ತಾ.?

ಟಗರು ಖ್ಯಾತಿಯ ಡಿಚ್ಚಿ ಅಶ್ವತ.

ಸ್ಟಂಟ್ ಮಾಸ್ಟ ರ್ ವಿನೋದ್ ........
ಸ್ಟಂಟ್ ಮಾಸ್ಟ ರ್ ವಿನೋದ್ ........

ಚಲನಚಿತ್ರಗಳ ಸಾಹಸ ದೃಶ್ಯಗಳಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸುವಲ್ಲಿ, ನಾಯಕನಟರು ಭೇಷ್ ನಿಸಿಕೊಂಡರೆ  ಹೀರೋಗೆ ಸರಿಸಮಾನವಾಗಿ ಸಾಹಸ ಮಾಡುವ ಕಲಾವಿದರು ಯಾರೆಂಬುದೂ  ಅಷ್ಟೇ ಕುತೂಹಲಕಾರಿ. ಒಂದು ಸಾಹಸ ದೃಶ್ಯ ರೋಮಾಂಚನಗೊಳಿಸುವಂತೆ ಮೂಡಿಬರಲು ತೆರೆಹಿಂದೆ ಅನೇಕ ಕಲಾವಿದರ ಹಾಗೂ  ಸಾಹಸ ನಿರ್ದೇಶಕರ ಪಾತ್ರ ಬಹಳ ಪ್ರಮುಖವಾಗಿರುತ್ತದೆ. ಅಂತಹುದರಲ್ಲಿ ಸ್ಟಂಟ್ ಮಾಸ್ಟರ್ ಗಳ ಬಗ್ಗೆ ಹೇಳೊದಾದ್ರೆ, ತೆರೆಯ ಮೇಲೆ ಒಮ್ಮೆ ಇವರನ್ನ ನೋಡಿದ್ರೆ ಏನು ಗುರು ಅವನ ಸ್ಟಂಟ್ ಅನ್ನೋದು ಸಹಜ. ಆದರೆ ಅಂತಹ ಸಾಹಸ ಕಾಲಾವಿದರು ತುಂಬಾ ಒರಟು ಎಂಬ ಭಾವನೆ, ಅಂತಹ ಪೈಟ್ ಕಲಾವಿದನ ಮುಗ್ದ ಮನಸ್ಸು ಹೊಂದಿರುವ ,ಸ್ಟಂಟ್ ಮಾಸ್ಟರ್ ವಿನೋದ್ ಬಗ್ಗೆ ಒಂದು ಸ್ಟೋರಿ. ದುವರೆಗೂ  ಸುಮಾರು 600 ರಿಂದ 700 ಸಾಹಸ ದೃಶ್ಯಗಳನ್ನು ಸಂಯೋಜಿಸಿರುವುದಲ್ಲದೆ ಸಾಹಸ ನಿರ್ದೇಶಕರಾಗಿ ಮತ್ತು ಸಾಹಸ  ಕಲಾವಿದನಾಗಿ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಸಾಧಿಸಬೇಕೆಂಬ ಛಲ ಹೊಂದಿರುವ ಫೈಟ್ ಮಾಸ್ಟರ್ ನ ಮನದಾಳದ ಮಾತು.

ಸ್ಟಂಟ್ ಮಾಸ್ಟ ರ್ ವಿನೋದ್ ........

ಸ್ಟಂಟ್ ಮಾಸ್ಟ ರ್ ವಿನೋದ್  ಮತ್ತು ದುನಿಯಾ ವಿಜಯ್  ಸ್ನೇಹಿತರ ಜೊತೆ....

ಬೆಂಗಳೂರಿನಲ್ಲಿ ಅದೆಷ್ಟೋ ಜನರು ಚಿತ್ರರಂಗವನ್ನ ಪ್ರವೇಶಿಸಲು ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಅಲೆಯುತ್ತಾರೆ , ಆದರೆ ಈ ಕಲಾವಿದ ತನ್ನ ಚಿಕ್ಕ ವಯಸ್ಸಿನಲ್ಲಿ ಅದ್ ಏನ್ ಆಗ್ತಿನೋ ಅನ್ನೋ  ರಿವು ಇಲ್ಲದಂತಹ ಸಮಯದಲ್ಲಿ ಇವರ ಆ ಪ್ರತಿಭೆ ಗಾಂಧಿನಗರಕ್ಕೆ ಎಂಟ್ರಿ ಕೊಡಿಸಿತ್ತು. ಮೂಲತಃ  ಬೆಂಗಳೂರಿನ ಕೆ.ಅರ್. ಪುರಂ ನ  ಕೊಡಿಗೆ ಹಳ್ಳಿಯ ಈ ಸಾಹಸಿಗ ಬಾಲ್ಯದಲ್ಲಿ ಎಲ್ಲರಂತೆ ಯಾವುದೇ ಯೋಚನೆಗಳಿಲ್ಲದೆ ತುಂಟಾಟ, ಚೇಷ್ಟೆಮಾಡುತ್ತಿದ್ದ ಪೋರ. ಒಂದು ದಿನ ತಮ್ಮ ಗ್ರಾಮದ ಕೆರೆ ಬಾವಿಗಳಲ್ಲಿ , ಸ್ನೇಹಿತರ ಜೊತೆ ಈಜಲು ಹೋಗಿದ್ದಾಗ, ಅಲ್ಲಿ ಎಲ್ಲರಲ್ಲೊಬ್ಬನಾಗದೆ ಬಾವಿಗಳಲ್ಲಿ ವಿಚಿತ್ರ ರೀತಿಯ ಡೈವ್ ಗಳನ್ನ ಮಾಡುತ್ತಿದ್ದ , ಆ ವಿಚಿತ್ರ ರೀತಿಯ ಡೈವ್ ಗಳನ್ನ ನೋಡಿ ಒಬ್ಬ ವ್ಯಕ್ತಿ ಇವರ ಆ ಸ್ಟೈಲ್ಗೆ ಫಿದಾ ಅಗಿದ್ದರು.

ಇವರ ಆ ಪ್ರತಿಭೆಯನ್ನ ಗುರುತಿಸಿದ ಮಾಸ್ಟ್ ರ್ ಕೆ.ಡಿ.ವೆಂಕಟೇಶ್.

ಇವತ್ತು ನಾನು ಚಿತ್ರರಂಗದಿಂದ ಒಂದು ತುತ್ತು ಅನ್ನ ತಿನ್ನೋಕೆ ಕಾರಣವಾದವರು “ಕೆ.ಡಿ ವೆಂಕಟೇಶ್” ಎಂದು ಮಾತು ಪ್ರಾರಂಭಿಸಿದ ವಿನೋದ, ತನ್ನ ಬಾಲ್ಯದ ನೆನಪುಗಳನ್ನ ಬಿಚ್ಚಿಟ್ಟರು. ಪ್ರತಿಭೆ  ಎನ್ನುವುದನ್ನ ಯಾರು ಯಾವಾಗ ಗುರುತಿಸುತ್ತಾರೆ, ಎಂದು ಊಹಿಸಲು ಆಸಾಧ್ಯ . ಅಂತಹ ಸಂಧರ್ಭ ಇವರಿಗೆ ಒದಗಿಬಂದಿದ್ದು ಅಚ್ಚರಿ ಯಾಗಿತ್ತು. ಅಂದು ಕೆರೆ ಬಾವಿಗಳಲ್ಲಿ ಡೈವ್ ಮಾಡುತ್ತಿದ್ದ ಯುವಕ ಒಬ್ಬ ಸಾಹಸ ನಿರ್ದೇಶಕನಾಗಲು ಇವರ ಆ ಡಿಫರೆಂಟ್ ಡೈವ್ಳೇ ಕಾರಣ. ಇವರ ವಿಚಿತ್ರ ರೀತಿಯ ಡೈವ್ ಗಳನ್ನು ಕಂಡು ತ ಏನೊ ಮಾಡಬಲ್ಲ ಎಂದು ತನ್ನ 15ನೇ ವಯಸ್ಸಿಗೆ ಚಿತ್ರರಂಗಕ್ಕೆ ಪರಿಚಯಿಸಿದ್ದಷ್ಟೇ  ಅಲ್ಲದೇ  ಅದಕ್ಕೆ ಅಗತ್ಯವಾದಂತಹ ತರಬೇತಿ ನೀಡಿದ ಹಿರಿಯ ಸಾಹಸ ನಿರ್ದೇಶಕರಾದ ಕೆ.ಡಿ.ವೆಂಕಟೇಶ್  ನನ್ನ ''ಗಾಡ್ ಫಾದರ್'' ಎನ್ನುತ್ತಾರೆ.

ಮಾಸ್ಟ್ ರ್ ಕೆ.ಡಿ.ವೆಂಕಟೇಶ್.
ಮಾಸ್ಟ್ ರ್ ಕೆ.ಡಿ.ವೆಂಕಟೇಶ್.

ದುನಿಯಾ ವಿಜಯ್ ಬಗ್ಗೆ ಸ್ಟಂಟ್ ಮಾಸ್ಟರ್ ಹೇಳಿದ್ದಾದ್ರೂ  ಏನು.?

ಚಿತ್ರರಂಗವೇ ಒಂದು ಕನಸುಗಳ ಕಾರ್ಖಾನೆ. ಚಿಕ್ಕಂದಿನಿಂದಲೇ  ನಟನೆ ಪ್ರಾರಂಭಿಸಿದ ಇವರು ಕಾಲ ಕಳೆದಂತೆ ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯನ್ನ ಗುರುತಿಸಿಕೊಂಡರು, ಆದರೆ ಟೈಮ್ ಅನ್ನೋದು ಒಂದೇ ರೀತಿ ಅಲ್ವಲ್ಲಾ, ಅದೆಷ್ಷೋ ಆಸೆಗಳನ್ನು ಇಟ್ಟುಕೊಂಡಿದ್ದ ಇವರಿಗೆ ಒಂದಷ್ಟು ಚಿತ್ರಗಳಲ್ಲಿ ಸಾಹಸ ಕಲಾವಿದರಾಗಿ ಅಭಿನಯಿಸಿದ ನಂತರ ಸುಮಾರು ವರ್ಷಗಳ ಕಾಲ ಅವಕಾಶಗಳೇ  ಇಲ್ಲದಂತಾಯಿತು. ಆದರೆ ತಮ್ಮ ಪ್ರತಿಭೆಯ ಬಗ್ಗೆ ಆಪಾರ ನಂಬಿಕೆ ಇಟ್ಟಿದ್ದ ಇವರು ಚಿತ್ರರಂಗದಲ್ಲಿಯೇ ಏನಾದರೂ  ಸಾಧನೆ ಮಾಡಬೇಕೆಂದು , ಅದೆಷ್ಟೋ ಚಿತ್ರ ನಟರ ಮನೆ ಬಾಗಿಲಿಗೆ ಅಲೆದಾಡಿದಂತಹ ದಿನಗಳನ್ನ ನೆನಸಿಕೊಂಡರು. ಅವಕಾಶಕ್ಕಾಗಿ ಹಾತೊರೆಯುತ್ತಿದ್ದ ಇವರಿಗೆ ,ಅಂತಹ ಸಮಯದಲ್ಲಿ ಕೈ ಹಿಡಿದವರು ಕನ್ನಡದ “ಬ್ಲಾಕ್ ಕೋಬ್ರಾ” ದುನಿಯಾ ವಿಜಯ್” ತಮ್ಮ ಬ್ಯಾನ್ ರನಲ್ಲಿ ನಿರ್ಮಾಣ ಮಾಡಿದ ಮೊದಲ ಚಿತ್ರ “ಜಯಮ್ಮನ ಮಗ” ಚಿತ್ರಕ್ಕೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಲು ಅವಕಾಶ ನೀಡಿದ ಇವರನ್ನ ನನ್ನ ಗುರುಗಳು ಎಂದರು.

ದುನಿಯಾ ವಿಜಯ್ ಬಗ್ಗೆ ಸ್ಟಂಟ್ ಮಾಸ್ಟರ್ ಹೇಳಿದ್ದಾದ್ರು ಏನು.?

ತನ್ನ ಪ್ರತಿಭೆಯನ್ನು ಗುರುತಿಸಿದ ಡಿ. ಬಾಸ್. “ದರ್ಶನ್” ಬಗ್ಗೆ ಮನದ ಮಾತು.....

ಈ ಹಿಂದೆ ದರ್ಶನ್ ರವರ ಅನೇಕ ಚಿತ್ರಗಳಲ್ಲಿ ಸಾಹಸ ಕಲಾವಿದನಾಗಿ ಅಭಿನಯಿಸಿದ್ದ ನಾನು ಅವಕಾಶಗಳಿಲ್ಲದ ದಿನಗಳಲ್ಲಿ ಚಾಲೆಂಜಿಂಗ್ ಸ್ಟಾರ್ “ದರ್ಶನ್” ರವರಲ್ಲಿ ತನಗೊಂದು ಅವಕಾಶ ನೀಡುವಂತೆ ಕೇಳಿಕೊಂಡಾಗ ಅದಕ್ಕೆ ಸ್ಪಂದಿಸಿದ ಚಾಲೆಂಜಿಂಗ್ ಸ್ಟಾರ್ “ಅಗ್ರಜ” ಚಿತ್ರದಲ್ಲಿ ಸಾಹಸ ಸಂಯೋಜಿಸಲು ಅವಕಾಶ ನೀಡಿದರು. ಅಷ್ಟೇಅಲ್ಲದೆ ಮಂಡ್ಯ, ಅಂಬರೀಷ ಚಿತ್ರಗಳಲ್ಲಿ ಸಾಹಸ ಕಲಾವಿದನಾಗಿ ಅಭಿನಯಿಸಿದ್ದಲ್ಲದೆ ಮುಂಬರಲಿರುವ ದರ್ಶನ್ ರವರ ಬಹುನೀರಿಕ್ಷಿತ ಚಿತ್ರ ಕುರುಕ್ಷೇತ್ರ ಚಿತ್ರದಲ್ಲಿ ಸಹ ಸಾಹಸ ನಿರ್ದೇಶಕರಾಗಿರುವ ಖ್ಯಾತಿ ಇವರದು. ಇನ್ನೂ ಈಗಾಗಲೇ ತೇರೆ ಮೇಲೆ ಬರಲು ಸಿದ್ದವಾಗಿರುವ ರಾರ್ಬಟ್ ಚಿತ್ರಕ್ಕೆ ಅದರ್ರಲ್ಲೂ ದರ್ಶನ್ ಸಾರ್ ಅವರಿಗೆ ಸಂಸ್ಟ ಮಾಸ್ಟರಾಗಿ ಕೇಲಸ ಮಾಡಿದ್ದು ತುಂಬ ಸಂತೋಷ ತಂದುಕೊಟ್ಟಿದೆ ಎಂದರು.

Video Link https://www.youtube.com/watch?v=KW4spw9sUwE&t=187s

ಡಿ. ಬಾಸ್.  “ದರ್ಶನ್” ಬಗ್ಗೆ ಮನದ ಮಾತು.....
ಡಿ. ಬಾಸ್. “ದರ್ಶನ್” ಜೊತೆ .

ಗೆಳೆಯರಾದ ಅನಿಲ್ ಹಾಗು ಉದಯ್ ರನ್ನು  ಸ್ಮರಿಸಿಕೊಂಡ ಆತ್ಮೀಯ......

ಪ್ರಾರಂಭದ ದಿನಗಳಲ್ಲಿ ಬಹಳ ಕಷ್ಟದ ದಿನಗಳನ್ನು ಕಂಡ ಸ್ನೇಹಿತರು ನಾವೆಲ್ಲ ಒಟ್ಟೊಟ್ಟಿಗೆ ಜೊತೆಯಲ್ಲೆ ಇದ್ದವರು, ತುಂಬಾ ಒಳ್ಳೆಯ ಗೆಳೆಯರು. ತಮಗೆ ಸ್ಟಾರ್ ಪಟ್ಟ ಇದ್ದಾಗಲೂ  ಸಹ ಯಾವುದೇ ಕಾರ್ಯಕ್ರಮಗಳಲ್ಲಿ ನಮ್ಮ ಬಗ್ಗೆ ಹೇಳಿಕೊಳ್ಳುತ್ತಿದ್ದ ಆತ್ಮೀಯರೆಂದು ಭಾವುಕರಾದರು.

ಗೆಳೆಯರಾದ ಅನಿಲ್ ಹಾಗು ಉದಯ್ರನ್ನು ಸ್ಮರಿಸಿಕೊಂಡ ಆತ್ಮೀಯ......

ಗೆಳೆಯರಾದ ಅನಿಲ್ ಹಾಗು ಉದಯ್ರನ್ನು ಸ್ಮರಿಸಿಕೊಂಡ ಆತ್ಮೀಯ......

ನೂತನ ಸಾಹಸ ಕಲಾವಿದರಿಗೊಂದು ಕಿವಿಮಾತು.

ಅದೆಷ್ಟೋ ಬಾರಿ ತಾವು ಸ್ಟಂಟ್ ಮಾಡುವ ಸಂರ್ಧಭದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆಗಳನ್ನ ನೆನೆದರು. ಒಂದು ಬಾರಿ ತಾವು ಸಾಹಸ ಮಾಡುವ ಚಿತ್ರದಲ್ಲಿ ತಮ್ಮ ಎರಡೂ  ಕಾಲುಗಳನ್ನ ಮುರಿದು ಕೊಂಡಿದ್ದ ಘಟನೆಯನ್ನ ನೆನಸಿಕೊಂಡು, ಸ್ಟಂಟ್ ಎಂಬುದು ರಿಸ್ಕಿ ಜಾಬ್ ಇಲ್ಲಿ  ಳು ಬೀಳುಗಳು ಸಹಜ,  ಕೆಲವು ಬಾರಿ ನಮ್ಮ ಶಕ್ತಿ  ಮೀರಿ ರಿಸ್ಕ್ ಗಳನ್ನ ತೆಗೆದು ಕೊಳ್ಳಬೇಕಾಗುತ್ತದೆ. ಒಂದೆಡೆ ಹೆತ್ತ ತಾಯಿ ತನ್ನ ಮಗ ಸೇಫ್  ಆಗಿ ಮನೆಗೆ ಬರಲಿ ಎಂದು ಪ್ರತಿದಿನ ಬಾಗಿಲು ನೋಡುತ್ತಿರುತ್ತಾರೆ. ಅಂತಹ ನಮ್ಮನ್ನೇ ನಂಬಿದ ಜೀವಗಳ ಬಗ್ಗೆ ಕೂಡ  ಕೆಲವು ಬಾರಿ ಯೋಚಿಸ ಬೇಕಾಗುತ್ತದೆ. ಪ್ರತಿಯೊಬ್ಬ ಕಲಾವಿದನಿಗೆ ಆಸರೆಯಾಗಿ ತನ್ನದೆ ಆದಂತಹ ಕುಟುಂಬ ಇದ್ದೇ  ಇರುತ್ತದೆ. ಯಾವುದೇ ಅನಾಹುತಗಳು  ಸಂಭವಿಸುವ ಮುನ್ನ ತಮಗೆ ಅಗತ್ಯವಿರುವ ಸೇಪ್ಟಿ ಬಗ್ಗೆ ತಾವೇ ಎಚ್ಚರವಹಿಸಬೇಕು ಎನ್ನುತ್ತಾರೆ. ಇದಕ್ಕೆ ಪೂರಕವಾಗಿ ತಮ್ಮ ಚಿತ್ರಗಳಲ್ಲಿ ಫೈಟರ್ ಗಳಿಗೆ ಸುರಕ್ಷತೆ ನೀಡುವುದು ನನ್ನ ಮೊದಲ ಅದ್ಯತೆ ಎಂದು ಹೇಳಿದರು. ಇಷ್ಟೆ ಅಲ್ಲದೆ ಸಾಹಸ ಕಲಾವಿದರ ಸಂಘದ ಅದ್ಯಕ್ಷರಾಗಿ ಸೇವೆಸಲ್ಲಿಸಿದ್ದು, ಇನ್ನೂ ಕನ್ನಡ ಚಿತ್ರರಂಗದ ಎಲ್ಲಾ ನಾಯಕ ನಟರುಗಳ ಜೊತೆ ಅಭಿನಯಿಸುವ ಆಸೆಯನ್ನ ಹೊಂದಿದ್ದಾರೆ.

ಯಾವುದೇ ಒಂದು ದೃಶ್ಯ ಪ್ರೇಕ್ಷಕರನ್ನು ಮನರಂಜಿಸುವಂತೆ ಮಾಡಬೇಕಾದರೆ, ಚಿತ್ರದ ನಾಯಕ ಹಾಗು ಖಳನಾಯಕರ ಪಾತ್ರ ಎಷ್ಟು ಮುಖ್ಯವೋ ಅಷ್ಟೆ ಸಾಹಸ ನಿರ್ದೇಶಕರ ಕೊಡುಗೆಯೂ ಮುಖ್ಯ. ತಮ್ಮ ವೃತ್ತಿಯಲ್ಲಿ ದೇವರನ್ನು ಕಾಣು  ಮಾಸ್ಟರ್,  ಚಿತ್ರೀಕರಣದ  ಹಿಂದಿನ ದಿನ ತಮ್ಮ ದೇ  ಆದ ಸಿದ್ದತೆಯನ್ನು ಮಾಡಿಕೊಂಡು ಚಿತ್ರದಲ್ಲಿನ ನಟರಿಗೆ ಸೂಕ್ತವಾಗುವಂತಹ ರೀತಿಯಲ್ಲಿ   ನಿರ್ದೇಶಿಸುವ ಇವರ ವಿಶಿಷ್ಟ ಕಲೆಗೆ ಯಶಸ್ಸು  ಸಿಗಲಿ ಎಂಬುದು ನಮ್ಮ  ಹಾರೈಕೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.