”ಅರಳಿದ ಕಲಮ,ತೆನೇ ಇಳಿಸಿ,ಕೈ ಹಿಡಿದ ಮತದಾರ”.
ಸಿರವಾರ ಪಟ್ಟಣ ಪಂಚಾಯತ್ 20 ವಾರ್ಡ್ಗಳ ಚುನವಾಣೆ ಫಲಿತಾಂಶ.”ಅರಳಿದ ಕಲಮ,ತೆನೇ ಇಳಿಸಿ,ಕೈ ಹಿಡಿದ ಮತದಾರ”.

ಸಿರವಾರ ಡಿಸೇಬಂರ್ 30 : ದಿನಾಂಕ 17 ರಂದು ನಡೆದ ಪಂ.ಪಂಚಾಯತ್ ಚುನಾವಣೆಯ ಫಲಿತಾಂಶ ಇಂದು ಹೊರಬಿದಿದ್ದು, ಗೆದ್ದವರ ಮೋಗದಲ್ಲಿ ಹರ್ಷ ಮೂಡಿದರೆ,ಸೋತವರ ಮುಖದಲ್ಲಿ ನೋವುಂಟುಮಾಡಿದೆ. ಜಿದ್ದ ಜಿದ್ದಿಯ ಸಿರವಾರ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ, ಗೆದ್ದವರಿಗೆ ಹೊಸವರ್ಷದ ಹೊಸತನ ನೀಡಿದರೆ,ಸೋತವರಿಗೆ ಮರೆಯಲಾಗದ ವರ್ಷವಾಗಿದೆ.
ದಿನಾಂಕ 17 ರಂದು ನಡೆದ ಪಂ.ಪಂಚಾಯತ್ ಚುನಾವಣೆ ಅಭ್ಯರ್ಥಿಗಳ ಹಣೆಬರಹ ಭದ್ರವಾಗಿ ಮತ ಪೆಟ್ಟಿಗೆಯಲ್ಲಿ ಇರಿಸಲಾಗಿತ್ತು.ಅದರ ರಿಸಲ್ಟ್ ಇಂದು ತೆರೆಗೆಬಿದ್ದಿದ್ದು ಮತದಾರ ಮತ ಹಾಕುವುದರ ಯಾರ್ ಯಾರಿಗೆ ಮಣೆ ಹಾಕಿದ್ದಾನೆಂದು ಫಲಿತಾಂಶದ ಮೂಲಕ ತನ್ನ ಅಭ್ಯರ್ಥಿಯನ್ನು ಅಯ್ಕೆಮಾಡಿಕೊಡಿದ್ದಾನೆ.

ಸಿರವಾರ 20 ವಾರ್ಡ್ ಗಳ ಪಲಿತಾಂಶ:

ಸಿರವಾರ ಪಂ.ಪಂಚಾಯ್ತ 20 ವಾರ್ಡ್ ಗಳಿಗೆ ಚುನಾವಾಣೆನಡೆದಿದ್ದು ಇಂದಿನ ಫಲಿತಾಂಶ ಲೆಕ್ಕ ಚಾರದಂತೆ, ಮತದಾರ ಕಮಲವನ್ನು ಅರಳಿಸಿ, ತೆನೇ ಇಳಿಸಿ,ಕೈ ಹಿಡಿದಿದ್ದಾನೆ. ಕಾಂಗ್ರೇಸ್ ಪಕ್ಷವು 9 ವಾರ್ಡಗಳಲ್ಲಿ ತನ್ನಅಭ್ಯರ್ಥಿಯನ್ನ ಗೆಲ್ಲಿಸಿಕೊಂಡಿದ್ದರೆ, ಅಡಳಿತ ರೂಡದಲ್ಲಿರು ಬಿಜೆಪಿ ಪಕ್ಷವು 6 ಸ್ಥಾನಗಳಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡಿದೆ. ಇನ್ನೂ ರಾಷ್ಟ್ರೀಯ ಪಕ್ಷ ಜೆಡಿಎಸ್ ಕೇವಲ ಮೂರು ವಾರ್ಡ್ ನ ಅಭ್ಯರ್ಥಿಗಳನ್ನ ಗೆಲ್ಲಿಸಿ ಕೊಳ್ಳುವುದರೊಂದಿಗೆ ಸಂತೃಪ್ತಿ ಪಡೆದುಕೊಂಡಿದೆ.ಜೊತೆಗೆ 2 ವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲ್ಲುವುದರೊಂದಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ರಾಜಕೀಯ ನಾಯಕರ ಲೆಕ್ಕಚಾರದಂತೆ, ಸಿರವಾರ ಪಂ.ಪಂಚಾಯತ್ ಅಧಿಕಾರ ಹಿಡಿಯಲು ಕಾಂಗ್ರೇಸ್ ತೆಕ್ಕೆಗೆ ಹಾಕಿಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು,ಕೇವಲ ಇಬ್ಬರ ಅಭ್ಯರ್ಥಿಗಳ ಅವಶ್ಯಕತೆವಿದೆ ಇಲ್ಲಿ ಪಕ್ಷೇತರ ಅಭ್ಯರ್ಥಿಗಳ ನಿರ್ಣಯ ಪಾತ್ರ ಅತೀ ಪ್ರಮುಖ್ಯವಾಗಿದೆ.
ಘಟಾನು ಘಟಿ ಅಭ್ಯರ್ಥಿಗಳ ಜಿದ್ದ ಜಿದ್ದಿಯವಾರ್ಡಗಳ ಫಲಿತಾಂಶ.

ಕಳೆದ ಚುನಾವಣೆಗಿಂತ ಈ ಭಾರಿಯ ಚುನಾವಣೆ ಬಲು ಬಿರುಸಿನ ಪ್ರಚಾರದ ಜೊತೆಗೆ ಚುನಾವಣೆ ಕಣದಲ್ಲಿನ ಅಭ್ಯರ್ಥಿಗಳ ನಡುವೆ ಜಿದ್ದ ಜಿದ್ದಿಯ ವಾತವರಣ ಏರ್ಪಟ್ಟಿತ್ತು. ಭಾರಿ ಕುತೂಹಲ ಮೂಡಿಸಿದ್ದ ವಾರ್ಡ ನಂ.09 ರ ಅಭ್ಯರ್ಥಿಗಳಾದ ಸೂರಿ ದುರಗಣ್ಣ ಮತ್ತು ಚಿಂಚರಿಕಿ ರಮೇಶ್ ನಡುವಣದ ಚುನಾವಣೆ ಸಿರವಾರ ತಾಲುಕಿನಲ್ಲಿ ಭಾರಿ ಸುದ್ದಿಮಾಡಿತ್ತು ,ಇದರ ಫಲಿತಾಂಶ ಇಂದು ಹೊರಬಿದ್ದಿದು ಕಾಂಗ್ರೇಸ್ ಅಭ್ಯರ್ಥಿ ಸೂರಿ ದುರಗಣ್ಣ ಭಾರಿ ಬೆಂಬಲದೊಂದಿಗೆ ಬಿಜೆಪಿ ಅಭ್ಯರ್ಥಿಯನ್ನು ಸೊಲಿಸುವುದರ ಮೂಲಕ ತಮ್ಮ ಗೆಲುವನ್ನು ಕಂಡುಕೊಂಡಿದ್ದಾರೆ.ಇನ್ನೂ ವಾರ್ಡ್ ನಂ 01 ರ ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯಕ್ ಮತಎಣಿಕೆಯ ಖಾತೆಯನ್ನು ತಮ್ಮ ಗೆಲುವಿನ ಮೂಲಕ ಪ್ರಾರಂಭ ಮಾಡಿ ಬಿಜೆಪಿಯ ಗೆಲುವಿನ ಮೊದಲ ಅಭ್ಯರ್ಥಿಯಾಗಿದ್ದಾರೆ. ಒಟ್ಟಾರೆಯಾಗಿ ಇಂದಿನ ಚುನಾವಣ ಫಲಿತಾಂಶದಿಂದ ಗೆದ್ದಂತ ಅಭ್ಯರ್ಥಿಗಳು ಸಿರವಾರ ಪಟ್ಟಣ ವನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಅಲೋಚನೆ ಇಟ್ಟು ಮುನ್ನಡೆಯುವ ಅವಶ್ಯಕತೆ ಇದೇ ಎಂಬುದು ಮತಾದರನ ಅಭಿಪ್ರಾಯವಾಗಿದೆ.
Recent comments