Skip to main content
ಮಾನ್ವಿ ಪೋಲಿಸ್ ಅಧಿಕಾರಿಯವರಿಂದ ಕೊರೋನಾ ಜಾಗೃತಿ.

ಮಾನ್ವಿ ಪೋಲಿಸ್ ಅಧಿಕಾರಿಯವರಿಂದ ಕೊರೋನಾ ಜಾಗೃತಿ.

ಮಾನ್ವಿ ಪೋಲಿಸ್ ಅಧಿಕಾರಿಯವರಿಂದ ಕೊರೋನಾ ಜಾಗೃತಿ.

Raichur

ಮಾನ್ವಿ: ಜನರು ತಮಗೆ ಆಪತ್ತು, ತೊಂದರೆ,ನೋವು, ಕಷ್ಟ ನಷ್ಟ,ಅನ್ನುವಂತಹ ವಿಪತ್ತುಗಳು ಎದುರಾದ್ರೇ ಒಂದಲ್ಲ ಒಂದು ಕಾನೂನು ರೀತಿಯಿಂದ ಪೋಲಿಸರ ಮೋರೆಹೊಗ್ಲೆ ಬೇಕಾಗುತ್ತೆ, ಅದು ಸೂಕ್ತ ಕೂಡ.ಆದರೆ ಇತ್ತೀಚಿಗೆ ಈ ಕೊರೋನಾ ಅನ್ನೋ ಸಂಕ್ರಾಮಿಕ ರೋಗದಿಂದಾಗಿ ಪೋಲಿಸ್ ಅಧಿಕಾರಿಗಳೇ ಜನರಿಗೆ ಕೈ ಮಗಿದು ಬೇಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿಬಿಟ್ಟಿದೆ. ದೇಶವ್ಯಾಪ್ತಿ ಹಬ್ಬಿಕೊಂಡಿರುವ ಈ ದರಿದ್ರ ಮಾರಕ ಸಂಕ್ರಾಮಿಕ ರೋಗ ಬಂತ್ಂದ್ರೇ ಅಲ್ಲಿಗೆ ಅಂತವರ ಅರ್ಧ ಆಯಸ್ಸು ಮುಗಿತು ಅಂತ ಲೆಕ್ಕ. ಹಾಗಾಗಿ ಜನರ ಜೀವ ರಕ್ಷಣೆಯ ಜವಬ್ದಾರಿಯುತ ಮುನ್ನೇಚ್ಚರಿಕೆಯ ಕ್ರಮವಾಗಿ ದೇಶದಲ್ಲಿ ಸಂಪೂರ್ಣ “ಲಾಕ್ ಡೌನ್” ಕಾನೂನು ಜಾರಿಗೊಳಿಸಿದ್ದಾರೆ.ಈ ಸಂದರ್ಭದಲ್ಲಿ ಒಂದಿಷ್ಟೂ ತೊಂದ್ರೆಗಳು ಆಗಿರಬಹುದು ಆದರೆ ಜೀವ ಬದುಕಿದೆ.ಇಂತಹ ಕಠಿಣ ಪರಸ್ಥಿತಿಯಲ್ಲೂ ನಮ್ಮ ಪೊಲೀಸ್ ಅಧಿಕಾರಿಗಳು ತಮ್ಮ ಕುಟುಂಬವನ್ನೂ ಲೆಕ್ಕಿಸದೆ ಜನರ ಜೀವ ರಕ್ಷಣೆಗೆ ಪಣತೊಟ್ಟಿದ್ದಾರೆ.

Raichur

ಅಂತಹವರ ಸಾಲಿನಲ್ಲಿ ಮಾನ್ವಿ ತಾಲುಕಿನ “ಯಂಗ್ ಆ್ಯಂಡ ಡೈನಾಮಿಕ್” ಪೋಲಿಸ್ ಅಧಿಕಾರಿಗಳಾದ ಶ್ರೀ ದತ್ತಾತ್ರೇಯ ಕಾರ್ನಡ್ ಸಿ.ಪಿ.ಐ “ ಮಾನ್ವಿ ಇವರು ಕೂಡ ಒಬ್ಬರಾಗಿದ್ದಾರೆ. ಮಾನ್ವಿ ಜನರ ರಕ್ಷಣೆಗಾಗಿ ತಮ್ಮ ಪೋಲಿಸ್ ತಂಡದೊಂದಿಗೆ ಹಗಲಿರುಳು ಶ್ರಮಿಸುತ್ತಿರುವ ಇವರು. ನಗರದ ಕನಕದಾಸ ಮತ್ತು ಟಿಪ್ಪುಸೂಲ್ತನ್ ವೃತ್ತಗಳಲ್ಲಿ ಸಂಜೀವಿನಿ ಟ್ರಸ್ಟ್ ಸಿರವಾರ ಇವರವತಿಯಿಂದ ಹಮ್ಮಿಕೊಂಡಿದ್ದ “ಕೊರೋನಾ” ಮುಂಜಾಗೃತ ಕ್ರಮಗಳ ಬಗ್ಗೆ ತಿಳಿಸಿಕೊಡುವ ಕಾರ್ಯಕ್ರಮದಲ್ಲಿ ಜನರ ಉದ್ದೇಶಿಸಿ ಮಾತನಾಡಿದರು,

ಇದುವರೆಗೂ ತಾಲುಕು ಮತ್ತು ಜಿಲ್ಲೆಯಲ್ಲಿ ಯಾವುದೇ ಕೊರೋನಾ ಕೆಸ್ ಪತ್ತೆಯಾಗಿಲ್ಲ ಆದೂದರಿಂದ ಈ ರೋಗ ಹರಡದಂತೆ ತಡೆಗಟ್ಟುವ ಸಲುವಾಗಿ ತಾವೇಲ್ಲರು ಮನೆಯಲ್ಲೇ ಇರೋದೆ ಒಳ್ಳೆದು,ಅಲ್ಲದೇ ಅನವಶ್ಯಕವಾಗಿ ಹೊರಗಡೆ ಒಡಾದಂತೆ ಒಂದು ವೇಳೆ ಹೊರಗಡೆ ಬಂದರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕಾಗಿ ಎಂದು ಹೇಳುತ್ತ ಜಾಗೃತಿ ಮೂಡಿಸಿದರು.ಇನ್ನೂ ಇವರ ಜೊತೆ ಸ್ಥಳಿಯ ಪೋಲಿಸ್ ಅಧಿಕಾರಿಗಳು ಸಾಥ್ ನಿಡಿದರು ಇನ್ನೂ ಜನರಿಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವ ಸಂಜೀವಿನಿ ಟ್ರಸ್ಟ್ ಅಧ್ಯಕ್ಷರಾದ ಜ್ಞಾನಮಿತ್ರ ಇವರಿಗೆ ಅಭಿನಂದನೆ ಸಲ್ಲಿಸಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.