ಲಿಂಗಸೂಗೂರು ಕ್ಷೇತ್ರಕ್ಕೆ "ಬಿ" ಫಾರಂಗಾಗಿ,ಕಾಂಗ್ರೇಸ್ ಪಕ್ಷದಿಂದ ಅರ್ಜಿ ಸಲ್ಲಿದ ಮಾಜಿ ಸಚಿವ ಹನುಮಂತಪ್ಪ ವೈ ಆಲ್ಕೋಡ್.
ಲಿಂಗಸೂಗೂರು ಕ್ಷೇತ್ರಕ್ಕೆ "ಬಿ" ಫಾರಂಗಾಗಿ,ಕಾಂಗ್ರೇಸ್ ಪಕ್ಷದಿಂದ ಅರ್ಜಿ ಸಲ್ಲಿದ ಮಾಜಿ ಸಚಿವ ಹನುಮಂತಪ್ಪ ವೈ ಆಲ್ಕೋಡ್.
ಬೆಂಗಳೂರು ನ 15 :- ರಾಯಚೂರು ಜಿಲ್ಲೆಯ ಲಿಂಗಸೂಗೂರು ಪ್ರತಿಷ್ಠಿತ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಗೆ ಈಗಿನಿಂದಲೇ ಚುನಾವಣೆಯ ರಂಗು ಜೋರಾಗಿದ್ದು, ಕ್ಷೇತ್ರದ ವಿವಿಧ ಪಕ್ಷಗಳ ಸಂಭವನಿಯ ಅಭ್ಯರ್ಥಿಗಳು ಜನರ ಮನಗೇಲಲ್ಲು, ನಾನಾ ಕಸರತ್ತುಗಳ್ಳನ್ನು ಮಾಡುತ್ತಿದ್ದಾರೆ. ಈಗಾಗಲೇ ಲಿಂಗಸೂಗುರು ಮೀಸಲು ಕ್ಷೇತ್ರವಾಗಿದ್ದು ಈ ಕ್ಷೇತ್ರಕ್ಕೆ ಮಾಜಿಸಚಿವರಾದ ಹನುಮಂತಪ್ಪ ವೈ ಆಲ್ಕೋಡ್ ಅವರು ಕಾಂಗ್ರೇಸ್ ಪಕ್ಷದಿಂದ ಪ್ರಭಾವಿ ಆಕಾಂಕ್ಷಿಯಾದ್ದೇನೆ,
ಎನ್ನುವ ಮೂಲಕ ಬೆಂಗಳೂರಿನಲ್ಲಿ ಕಾಂಗ್ರೇಸ್ ಪಕ್ಷದಿಂದ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಣಕಿಳಿಯಲು ಸಕಲ ಸನ್ನದ್ದರಾಗಿ " ಕೈ " ಅಭ್ಯರ್ಥಿಯ "ಬಿ" ಫಾರಂಗಾಗಿ ಅರ್ಜಿ ಸಲ್ಲಿಸಿದರು. ಬೆಂಗಳೂರಿನಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ವಿವಿಧ ನಾಯಕರುಗಳ ಸಮ್ಮುಖದಲ್ಲಿ ಅರ್ಜಿಯನ್ನು ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ಈ ಭಾರಿ ಲಿಂಗಸೂಗೂರು ಕ್ಷೇತ್ರದಿಂದ ನೂರಕ್ಕೆ ನೂರು ಪ್ರತೀಶತ ಟೀಕೆಟ್ ದೊರೆಯುತ್ತದೆ ಎಂದು ಹೇಳಿದರು. ಹಾಗೂ ಸಮುದಾಯದ ನಾಯಕರು ಸಂಘಟನೆಯ ಯುವಕರು ನಮ್ಮ ಪರವಾಗಿದ್ದಾರೆ,ಟೀಕೆಟ್ ದೊರೆತರೆ ಗೇಲುವು ಖಚಿತ ಎಂದು ಆತ್ಮವಿಶ್ವಾಸದಿಂದ ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೇಸ್ ನಾಯಕರು ಕಾರ್ಯಕರ್ತರು ಭಾಗಿಯಾಗಿ ಬೆಂಬಲ ನೀಡಿದರು.
Recent comments