ಆಪ್ ಪಕ್ಷದಿಂದ ರಾಜ್ಯ ಸ್ಟಾರ ಕ್ಯಾಂಪಿಯನ್ ಹಾಗೂ ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾಗಿ ಚಿತ್ರನಟಿ ಪೂಜಾ ರಮೇಶ್ ನೇಮಕ.
ಆಪ್ ಪಕ್ಷದಿಂದ ರಾಜ್ಯ ಸ್ಟಾರ ಕ್ಯಾಂಪಿಯನ್ ಹಾಗೂ ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾಗಿ ಚಿತ್ರನಟಿ ಪೂಜಾ ರಮೇಶ್ ನೇಮಕ.
ಬೆಂಗಳೂರು. ಫೆ.3 ಮಿಸ್ ಇಂಡಿಯಾ 2021 ವಿಜೇತೆ.ಸಮಾಜ ಸೇವಕಿ. ಚಿತ್ರನಟಿ ಡಾ. ಪೂಜಾ ರಮೇಶ್ ಅವರು ಇಂದು ಬೆಂಗಳೂರಿನ ಆಮ್ ಆದ್ಮಿ ಪಾರ್ಟಿಯ ಕಚೇರಿಯಲ್ಲಿ ಪಕ್ಷವನ್ನು ಸೇರಿದರು. ಅಪ್ ಪಾರ್ಟಿಯ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ ಅವರು ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಸ್ವಾಗತಿಸಿದರು. ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಡಾ. ಪೂಜ ರಮೇಶ್ ಅವರನ್ನು ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗುವುದು ಈಗಾಗಲೇ ಆಮ್ ಆದ್ಮಿಪಕ್ಷವು ತೀರ್ಮಾನ ಮಾಡಲಾಗಿದ್ದು ರಾಜ್ಯದಲ್ಲಿ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಬೇಕಾಗಿದೆ ಆದ್ದರಿಂದ ಪೂಜಾ ರಮೇಶ ಅವರು ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಬೇಕೆಂದು ಪೂಜ ರಮೇಶ್ ಅವರಿಗೆ ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ ಅವರು ಸೂಚನೆ ನೀಡಿದರು.
ಮುಖ್ಯಮಂತ್ರಿ ಚಂದ್ರು ಮಾತನಾಡಿ ಬೇರೆ ಪಕ್ಷಗಳು ಮಹಿಳಾ ಸಬಲೀಕರಣದ ಬಗ್ಗೆ ಕೇವಲ ಆಶ್ವಾಸನೆ ನೀಡುತ್ತಿದ್ದಾರೆ. ಆದರೆ ಆಮ್ ಆದ್ಮಿ ಪಕ್ಷವು ಸಮಾಜಮುಖಿ ಕೆಲಸ ಮಾಡುವ ಸಮಾಜ ಸೇವೆ ಮಾಡುವ ಪ್ರಜ್ಞಾವಂತ ಮಹಿಳೆಯರಿಗೆ ಅವಕಾಶ ನೀಡಿ ರಾಜಕೀಯವಾಗಿ ಮುನ್ನಡೆಸಲು ಮುಂದೆ ಬರುವಂತಹ ಕೆಲಸವನ್ನು ಮಾಡುತ್ತಿರುವುದು ಆಮ್ ಆದ್ಮಿ ಪಕ್ಷದ ಉದ್ದೇಶವಾಗಿದೆ.. ಈಗಾಗಲೇ ಪಕ್ಷ ಸೇರುವುದುಕಿಂತ ಮುಂಚಿತವಾಗಿ ಡಾ. ಪೂಜಾ ರಮೇಶ ಅವರು ದೆಹಲಿಯ ಹೈಟೆಕ್ ಶಾಲೆಗಳ ಬಗ್ಗೆ ಅಧ್ಯಯನ ಮಾಡಿರುವುದು ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿರುವುದನ್ನು ಅವುಗಳ ಉಳಿಯುವುದಾಗಿ ಅಭಿಯಾನ ಮಾಡಿರುವ ಅಂತ ಪೂಜಾ ರಮೇಶ್ ಅವರಿಗೆ ರಾಯಚೂರಿಂದ ಸ್ಪರ್ಧೆ ಮಾಡಲು ಅವಕಾಶ ನೀಡಿದೆ ಎಂದು ಪೃಥ್ವಿ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.... ಪೂಜ ರಮೇಶ್ ಅವರು ಈಗಾಗಲೇ ಸಮಾಜ ಮುಖ್ಯ ಕೆಲಸ ಮಾಡುತ್ತಾ ಲಾಕ್ಡೌನ್ ಸಂದರ್ಭದಲ್ಲಿ ಕಿಟ್ ಹಂಚಿಕೆ. ಮತ್ತು ಚಿಂದಿ ಆಯುವ ಮಕ್ಕಳಿಗೆ ಒಂದು ಉತ್ತಮ ವೇದಿಕೆ ಸಲ್ಲಿಸಲಾಗಿದ್ದು. ಕನ್ನಡ ಸರ್ಕಾರಿ ಶಾಲೆಗಳ ಉಳಿವಿಗಾಗಿ ಅಭಿಯಾನವನ್ನು ಕಳೆದ ಆರು ತಿಂಗಳಿಂದ ರಾಜ್ಯದ ಮೂಲೆಗಳಿಂದ ಮಾಡುತ್ತಿರುವ ಪೂಜಾ ರಮೇಶ್ ಅವರಿಗೆ ಸಂತಸ ತಂದಿದೆ.
ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮಹಿಳಾ ಮತದಾರರಿದ್ದು ಮಹಿಳಾ ಮತ ಬೇಟೆಗಾಗಿ ಸಾಕಷ್ಟು ಶ್ರಮವಿಸ್ತಿದ್ದು ಈಗಾಗಲೇ ಹಲವಾರು ವಾರ್ಡುಗಳಲ್ಲಿ ಸಂಚರಿಸಿದ್ದು.. ಈಗ ಆಮ್ ಆದ್ಮಿ ಪಾರ್ಟಿಯಿಂದ ರಾಯಚೂರಲ್ಲಿ ವಾಸ್ತವ ಹೂಡಿ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆಂದು ಈ ಮೂಲಕ ನಿಮಗೆ ಭರವಸೆ ನೀಡುತ್ತೇನೆಂದು ಚಿತ್ರನಟಿ ಪೂಜಾ ರಮೇಶ್ ಹೇಳಿದರು.. ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಆಮ್ ಆದ್ಮಿ ಪಾರ್ಟಿಯ ಮಹಿಳಾ ಶಾಸಕಿಯಾಗಿ ಬಂದೇ ಬರುತ್ತೇನೆ ಎಂದು ಈ ಸಂದರ್ಭದಲ್ಲಿ ಸುದ್ದಿಗಾರರಿಗೆ ಹೇಳಿದಳು.
Recent comments