ಸಿಐಟಿಯು ಸಂಯೋಜಿತ ಬಿಎಫ್ ಟಿಗಳ ಜಿಲ್ಲಾ ಸಮಿತಿ ರಚನೆ ಜಿಲ್ಲಾಧ್ಯಕ್ಷರಾಗಿ ಕನಕಪ್ಪ ಹಿರೇಕೊಟ್ನೇಕಲ್, ಕಾರ್ಯದರ್ಶಿಯಾಗಿ ಅಂಜನೇಯ ಆಯ್ಕೆ
ಸಿಐಟಿಯು ಸಂಯೋಜಿತ ಬಿಎಫ್ ಟಿಗಳ ಜಿಲ್ಲಾ ಸಮಿತಿ ರಚನೆ ಜಿಲ್ಲಾಧ್ಯಕ್ಷರಾಗಿ ಕನಕಪ್ಪ ಹಿರೇಕೊಟ್ನೇಕಲ್, ಕಾರ್ಯದರ್ಶಿಯಾಗಿ ಅಂಜನೇಯ ಆಯ್ಕೆ.

ಕವಿತಾಳ: ಸಿಐಟಿಯು ಸಂಯೋಜಿತ ಬಿಎಫ್ ಟಿಗಳ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಕನಕಪ್ಪ ಹಿರೇಕೊಟ್ನೇಕಲ್, ಕಾರ್ಯದರ್ಶಿಯಾಗಿ ಅಂಜನೇಯ ಬೆಳಗೂರ್ಕಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶರಣಪ್ಪ ಉಪ್ಪಾರ ತೂರಣದಿನ್ನಿ, ದುರುಗಣ್ಣ ಅಡವಿಬಾವಿ, ಯಲ್ಲಪ್ಪ ಖರಲದಿನ್ನಿ, ಸಹ ಕಾರ್ಯದರ್ಶಿಗಳಾಗಿ, ವೀರೇಶ್ ದೇವದುರ್ಗ, ನಾಗಪ್ಪ ಕಲ್ಲೂರು, ಖಜಾಂಚಿಯಾಗಿ ರತ್ನಮ್ಮ ನಂದಿಹಾಳ, ಜಿಲ್ಲಾ ಸಮಿತಿ ಸದಸ್ಯರಾಗಿ ಲಾಲ್ ಸಾಬ್, ನಾಗರಾಜ್ ನಾಡಗೌಡ, ಹೇಮಣ್ಣ ದಡೆಸ್ಗೂರು, ರಾಚಣ್ಣ ಆಯ್ಕೆಯಾದರು. ಈ ಸಭೆಗೆ ಮಾರ್ಗದರ್ಶಕರಾಗಿ ಆಗಮಿಸಿದ್ದ ರಮೇಶ ವೀರಾಪೂರು ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಕಳೆದ 7 ವರ್ಷಗಳಿಂದ ಯಾವುದೇ ಸೇವಾ ಭದ್ರತೆ ಇಲ್ಲ. ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಬಿಎಫ್ ಟಿ ಗಳು ಎಲ್ಲಾ ಅಧಿಕಾರಿಗಳ ಕೈಗೊಂಬೆಗಳಂತೆ ಕೆಲಸ ಮಾಡುವಂತಾಗಿದೆ.

ಆದರೂ ಕನಿಷ್ಟ ವೇತನ ಜಾರಿಯಾಗಿಲ್ಲ. ಯಾವುದೇ ಪಿಎಫ್, ಇಎಸ್ಐ ಸೌಲಭ್ಯಗಳು ಇಲ್ಲ. ವೇತನವೂ ಇಲ್ಲ. ಜಿಯೋ ಟ್ಯಾಗ್ ಮಾಡಲು ಎನ್ಎಂಎಂಎಸ್ ಮಾಡಲು ಮೊಬೈಲ್ ಪೋನ್ ಗ ಳನ್ನು ಸಹ ವಿತರಣೆ ಮಾಡಿಲ್ಲ. ವಿನಾ ಕಾರಣ ನೌಕರರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಈ ವೇಳೆ ಸಿಐಟಿಯು ಮುಖಂಡ ನಿಂಗಪ್ಪ ಎಂ ಜಿಲ್ಲೆಯ ವಿವಿಧ ತಾಲೂಕುಗಳ ಬಿ ಎಫ್‌ಟಿಗಳು ಉಪಸ್ಥಿತರಿದ್ದರು.
Recent comments