ಸಿರವಾರ ಗುಡ್ಡದ ಮೇಲಿನ ಪವಿತ್ರ ಶಿಲುಭೆ ದ್ವಂಸ ಕಿಡಿಗೇಡಿಗಳ ಪತ್ತೆಗೆ ಕ್ರೈಸ್ತ ಸಮುದಾಯದಿಂದ ಮೌನ ಪ್ರತಿಭಟನೆ.
ಸಿರವಾರ : ಸಿರವಾರ ತಾಲೂಕಿನ ಗುಡ್ಡದ ಮೇಲಿನ ಪವಿತ್ರ ಶಿಲುಭೆಯನ್ನು ದ್ವಂಸಗೊಳಿಸಿದ ಕಿಡಿಗೇಡಿಗಳನ್ನು ಪತ್ತೆಗಾಗಿ, ಒತ್ತಾಯಿಸಿ ತಾಲೂಕಿನ ಕ್ರೈಸ್ತ ಸಮುದಾಯದ, ಮುಖಂಡರು ಹಾಗೂ ಧರ್ಮ ಗುರುಗಳು ಸೇರಿ ಶಾಂತಿ ಪ್ರತಿಭಟನೆಯನ್ನು ಹಮ್ಮಿ ಕೊಂಡಿದ್ದರು. ಸುಮಾರು ಮೂವತ್ತು ವರ್ಷಗಳಹಿಂದೆ ಸಿರವಾರ ತಾಲೂಕಿನ ಗುಡ್ಡದ ಮೇಲೆ ಕ್ರೈಸ್ತ ಸಮುದಾಯದವರು ಸೇರಿಕೊಂಡು ಪ್ರಾರ್ಥನೆಗಾಗಿ ಶಿಲುಭೆಯನ್ನು ಸ್ಥಾಪಿಸಿಕೊಂಡಿದ್ದು, ಕ್ರೈಸ್ತರ ಪವಿತ್ರ ಹಬ್ಬಗಳಾದ ಕ್ರಿಸ್ಮಸ್, ಗುಡ್ ಫ್ರೈಡೇ, ಹಾಗೂ ವಿಶೇಷ ಜಾತ್ರೆ ದಿನಗಳಲ್ಲಿ ಅಲ್ಲಿಗೆ ತೆರಳಿ ಪ್ರಾರ್ಥನೆ ಮಾಡಿ ಆರಾಧನೆ ಮಾಡುವ ಪವಿತ್ರ ಸ್ಥಳವಾಗಿತ್ತು,
ಆದರೆ ಕಳೆದ ದಿನ ಅಂದರೆ ಭಾನುವಾರ ದಿನಾಂಕ 05 -11-2023 ರಂದು ಹೋಲಿ ಕ್ರಾಸ್ ದೇವಾಲಯದಲ್ಲಿ ಆರಾಧನೆಯ ಬಲಿಪೂಜೆ ಮುಗಿಸಿ ಕೊಂಡು ಬಂದು ಗುಡ್ಡದ ಮೇಲೆ ನೋಡಿದಾಗ ಅಲ್ಲಿ ಸ್ಥಾಪಿಸಲಾಗಿದ್ದ ಶಿಲುಭೆ ಕಾಣದಿರುವುದನ್ನು ಗಮನಿಸಿದ ಭಕ್ತರು ಶಿಲುಭೆಗೆ ಏನು ಅನಾಹುತ ಆಗಿರಬೇಕು ಅಂದು ಕೊಂಡು ಅನುಮಾನದಿಂದ ಅಲ್ಲಿಗೆ ತೆರಳಿ ಗಮನಿಸಿದಾಗ ಶಿಲುಭೆ ತುಂಡಾಗಿ ಬಿದ್ದಿರುವುದ್ದನ್ನು ಕಂಡು ಯಾರೋ ಕಿಡಿಗೇಡಿಗಳು ಪವಿತ್ರ ಶಿಲುಭೆಯನ್ನು ದ್ವಂಸಗೊಳಿಸಿರಬಹುದು ಅನ್ನುವುದ್ದಕ್ಕೆ ಸಾಕ್ಷಿಯಾಗಿದೆ.ಈ ಒಂದು ಘಟನೆಯಿಂದ ಕ್ರೈಸ್ತ ಸಮುದಾಯದ ಭಕ್ತರಿಗೆ ಮತ್ತು ಒಂದು ಧರ್ಮಕ್ಕೆ ದಕ್ಕೆ ಉಂಟಾದತ್ತಾಗಿದೆ.
ತಾಲೂಕಿನಲ್ಲಿ ಎಲ್ಲ ಧರ್ಮದವರು ಅನ್ಯೋನ್ಯಾವಾಗಿ ಸಹೋದರತ್ವದಿಂದ ಜೀವನ ನಡೆಸುತ್ತಿದ್ದು ಇಂತಹ ಘಟನೆಯಿಂದ ಕೋಮು ಗಲಭೆಗೆ ಸೃಷ್ಟಿಯಾಗುವುದಲ್ಲೇ, ಅಶಾಂತಿ ವಾತಾವರಣ ಉಂಟಾಗುದಕ್ಕೆ ಎಡೆ ಮಾಡಿಕೊಟ್ಟಂತ್ತೆ ಆಗುತ್ತದೆ.
ಹಾಗಾಗಿ ಇಂತಹ ಘಟನೆ ಮಾರುಕಳಿಸದಂತೆ ತಡೆಗಟ್ಟುವುದ್ದಕ್ಕೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ದೃಸ್ಕೃತ್ಯ ಮಾಡಿರುವ ಕಿಡಿಗೇಡಿಗಳನ್ನು ಆದಷ್ಟು ಭೇಗಾ ಪತ್ತೆ ಮಾಡಿ ಕಾನೂನು ರೀತಿಯಿಂದ ಶಿಕ್ಷೆಗೆ ಗುರಿಪಡಿಸ ಬೇಕೆಂದು ಒತ್ತಾಯಿಸಿ ಕ್ರೈಸ್ತ ಸಮುದಾಯದ ಧರ್ಮಗುರುಗಳು ಹಾಗೂ ಸಭೆಯ ಮುಖಂಡರು ಮತ್ತು ಯವನಸ್ತರು ಮಹಿಳೆಯರು ಸೇರಿಕೊಂಡು ತಾಲೂಕು ದಂಡಾಧಿಕಾರಿಗಳ ಮೂಲಕ ಮಾನ್ಯ ಗೃಹ ಮಂತ್ರಿಗಳಾದ ಜಿ ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದರು.
Recent comments