ಎಸ್ ಟಿ ಮೀಸಲಾತಿಗಾಗಿ ಒತ್ತಾಯಿಸಿ ಇದೆ 9. ರಾಯಚೂರಿನಲ್ಲಿ ವಿಶ್ವಕರ್ಮರ ಬೃಹತ್ ಹೋರಾಟ.. ಮಾರುತಿ ಬಡಿಗೇರ್...
ಎಸ್ ಟಿ ಮೀಸಲಾತಿಗಾಗಿ ಒತ್ತಾಯಿಸಿ ಇದೆ 9. ರಾಯಚೂರಿನಲ್ಲಿ ವಿಶ್ವಕರ್ಮರ ಬೃಹತ್ ಹೋರಾಟ.. ಮಾರುತಿ ಬಡಿಗೇರ್.

ರಾಯಚೂರು ನ.8. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಹಾಗೂ ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಇದೇ 9ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ರಾಯಚೂರು ಕಾಳಿಕಾ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿ ಅವರಿಗೆ ಎಸ್ ಟಿ ಮೀಸಲಾತಿಗಾಗಿ ಒತ್ತಾಯಿಸಿ ರಾಯಚೂರ ವಿಶ್ವಕರ್ಮರ ಬೃಹತ್ ಹೋರಾಟವನ್ನು ಪತ್ರಕರ್ತ ಹೋರಾಟಗಾರ. ರಾಜ್ಯ ಮಾಧ್ಯಮ ವಕ್ತಾರ ಮಾರುತಿ ಬಡಿಗೇರ್ ಪತ್ರಿಕೆಗೆ ತಿಳಿಸಿದ್ದಾರೆ.. ಈಗಾಗಲೇ ದೇಶದಲ್ಲಿ ಉತ್ತರಕಾಂಡ ಮತ್ತು ನಮ್ಮ ರಾಜ್ಯದಲ್ಲಿ ಚಾಮರಾಜನಗರದಲ್ಲಿ ವಿಶ್ವಕರ್ಮರನ್ನು ಎಸ್ ಟಿ ಗೆ ಸೇರಿಸಲಾಗಿದ್ದು.. ನಮ್ಮ ಜನಾಂಗ ಬಡಗಿತನ ಕಂಬಾರ ಶಿಲ್ಪಿ ಮತ್ತು ಕಂಚಿನ ಕೆಲಸ ಮಾಡುವ ಹಾಗೂ ಅಕ್ಕಸಾಲಿಗ ಐದು ಕಸುಬುಗಳನ್ನು ಮಾಡುತ್ತಿದ್ದು. ತೀರ ಹಿಂದುಳಿದಿದ್ದು ಬಡತನದಿಂದ ಇರುವ ಸಮಾಜ ವಿಶ್ವಕರ್ಮರು.. ಟು ಎ ಮೀಸಲಾತಿಯಿಂದ ನಮಗೆ ಯಾವುದೇ ರೀತಿಯ ಸರ್ಕಾರದಿಂದ ಸೌಲಭ್ಯಗಳು ಸಿಗುತ್ತಿಲ್ಲ 104 ಜಾತಿಗಳಿರುವ 2 ಎ ಮೀಸಲಾತಿಯಲ್ಲಿ ನಮಗೆ ಯಾವುದೇ ರೀತಿಯ ಸೌಲಭ್ಯಗಳು ಸಮರ್ಪಕವಾಗಿ ಪೂರೈಕೆ ಆಗುವುದಿಲ್ಲ. ನಮ್ಮ ರಾಜ್ಯಾಧ್ಯಕ್ಷರು ನಮ್ಮ ನೆಚ್ಚಿನ ನಾಯಕರಾದ ಕೆ ಪಿ ನಂಜುಂಡಿ ಅವರ ಅವರ ಹೋರಾಟದ ಹಾದಿಯಲ್ಲಿ ನಾವು ಸಹ ಇಡೀ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ನಾವು ಎಸ್ಟಿಮಿಸಲಾತಿಗಾಗಿ ಹೋರಾಟವನ್ನು ಕೈಗೊಂಡಿದ್ದೇವೆ.
ಕುಲಶಾಸ್ತ್ರ ಅಧ್ಯಯನದಲ್ಲಿ ನಮ್ಮ ಸಮಾಜವನ್ನು ಸರ್ಕಾರ ಶಿಫಾರಸ್ ಮಾಡಿ ಅಧ್ಯಯನ ಮಾಡಿಸಬೇಕಾಗಿದೆ. 1978 ರಲ್ಲಿ ಮುಖ್ಯಮಂತ್ರಿ ದೇವರಾಜ್ ಅರಸ್ ಕಾಲದಲ್ಲಿ ನಮ್ಮನ್ನು ನಿರ್ಲಕ್ಷತನ ತೋರಿದ್ದಾರೆ. ಆಗ ನಮ್ಮಲ್ಲಿ ಯಾವುದೇ ನಾಯಕರಿರಲಿಲ್ಲ ಮುಂಚೂಣಿಯಲ್ಲಿ ಸಮಾಜ ಕೂಡ ಇರಲಿಲ್ಲ ಹೀಗಾಗಿ ನಮ್ಮಲ್ಲಿ ಕುಲಶಾಸ್ತ್ರ ಅಧ್ಯಯನ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ.ಇದರಿಂದಾಗಿ ನಾವು ಎಸ್ಟಿ ಮೀಸಲಾತಿಯಿಂದ ವಂಚನೆಗೊಳಲಾಗಿದೆ ಈಗ ನಮ್ಮ ನಾಯಕರಾದ ಕೆ ಪಿ ನಂಜುಂಡಿ ಅವರು ರಾಜ್ಯ ಸರ್ಕಾರಕ್ಕೆ ಈಗಾಗಲೇ ಒತ್ತಡ ತಂದಿದ್ದು. ನಾವು ಕೂಡ ಇಡೀ ರಾಜ್ಯದಲ್ಲಿ ವಿಶ್ವಕರ್ಮರು ಎಸ್ ಟಿ ಮೀಸಲಾತಿಗಾಗಿ ನಮ್ಮ ಮುಂದಿನ ಪೀಳಿಗೆ ಅನುಕೂಲಕ್ಕಾಗಿ ಈ ಹೋರಾಟವನ್ನು ನಾವು ಹಮ್ಮಿಕೊಂಡಿದ್ದೇವೆ.. ಬುಧವಾರ ಬೆಳಗ್ಗೆ 10 ಗಂಟೆಗೆ ರಾಯಚೂರು ಜಿಲ್ಲೆಯ ಏಳು ತಾಲೂಕಿನಿಂದ ತಾಲೂಕ ಮತ್ತು ಹೋಬಳಿ ಮತ್ತು ಗ್ರಾಮೀಣ ಪ್ರದೇಶದಿಂದ ನೂರಾರು ಜನ ವಿಶ್ವಕರ್ಮರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ತಿಳಿಸಿದರು ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಬ್ರಹ್ಮ ಗಣೇಶ್. ಜಿಲ್ಲಾಧ್ಯಕ್ಷ ಗಿರೀಶ್ ಆಚಾರ್. ವೆಂಕಟೇಶ್ ಅನ್ವರಿ ಮನೋಹರ್ ಬಡಿಗೇರ್. ಇನ್ನಿತರು ಇದ್ದರು.
Recent comments