Skip to main content
ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜನ್ಮ ದಿನ ಆಚರಣೆ .

ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜನ್ಮ ದಿನ ಆಚರಣೆ .

ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜನ್ಮ ದಿನ ಆಚರಣೆ

ದೇವದುರ್ಗ

ನಡೆದಾಡುವ ದೇವರು ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜನ್ಮ ದಿನದ ಅಂಗವಾಗಿ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಎಸ್ ಎಮ್ ಎಸ್ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ನಡೆದ ಪೂಜೆಯಲ್ಲಿ, ಕೊರೊನಾ ಆದಷ್ಟು ಬೇಗ ನಮ್ಮ ದೇಶ ಬಿಟ್ಟು ತೊಲಗಲಿ, ಎಲ್ಲರ ಮುಖದಲ್ಲಿ ನಗು ಚಿಗುರೊಡೆಯಲಿ ಎಂದು ವಿಶೇಷವಾಗಿ ಸರಳ ಪೂಜೆ ಮಾಡಲಾಯಿತು. 

ಇನ್ನು ಕೋವಿಡ್ 19 ಭೀತಿಯಿಂದ ಭಾರತ ಲಾಕ್ ಡೌನ್ ಆಗಿದ್ದು, ಹಗಲಿರುಳು ಎನ್ನದೇ ವೈದ್ಯರು, ಪೊಲೀಸರು ಹಾಗೂ ಪೌರ ಕಾರ್ಮಿಕರು ದುಡಿಯುತ್ತಿದ್ದಾರೆ. ಅಂತಹ ಕಾರ್ಯನಿಕತ ಸಿಬ್ಬಂದಿ ಹಾಗೂ ಸದಾ ಹಸಿವಿನಿಂದ ಬಳಲುತ್ತಿರುವ ನಿರ್ಗತಿಕರಿಗೆ ಊಟದ ವ್ಯವಸ್ಥೆನ್ನು ಕೂಡ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಲೆಯ ವ್ಯವಸ್ಥಾಪಕರಾದ ಶ್ರೀಮತಿ ಮೇಘಾ ಶ್ರೀ ಶಿವಕುಮಾರ ಹರವಿ, ಶ್ರಿಮತಿ ಪ್ರಭಾವತಿ, ಸಂಗಮೇಶ ಹರವಿ, ಮತ್ತು ವನವಾಸಿ ಕಲ್ಯಾಣ ದೇವದುರ್ಗ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಯುವ ಬ್ರಿಗೇಡ್ ಕಾರ್ಯಕರ್ತರು ಭಾಗವಹಿಸಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.