ರಾಯಚೂರು ವಿಧಾನಸಭಾ ಕ್ಷೇತ್ರಕ್ಕೆ ಘಟಾನುಘಟಿಗಳು ಸ್ಪರ್ಧಿಸಲಿ. ಜನರ ಆಶೀರ್ವಾದ ನನ್ನ ಮೇಲಿದೆ -- ಡಾ. ಪೂಜಾ ರಮೇಶ್.
ರಾಯಚೂರು ವಿಧಾನಸಭಾ ಕ್ಷೇತ್ರಕ್ಕೆ ಘಟಾನುಘಟಿಗಳು ಸ್ಪರ್ಧಿಸಲಿ. ಜನರ ಆಶೀರ್ವಾದ ನನ್ನ ಮೇಲಿದೆ -- ಡಾ. ಪೂಜಾ ರಮೇಶ್.
ರಾಯಚೂರು ನ. 7 . ಮುಂಬರುವ ವಿಧಾನಸಭಾ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ವಿಧಾನಸಭಾ ಕ್ಷೇತ್ರಕ್ಕೆಯಾರೇ ಘಟಾನುಘಟಿಗಳು ಸ್ಪರ್ಧೆ ಮಾಡಲಿ ರಾಯಚೂರಿನ ಜನರು ಹೊಸ ಮುಖ ಹೊಸ ಬದಲಾವಣೆಯನ್ನು ಬಯಸುತ್ತಿದ್ದಾರೆ. ಮಹಿಳೆಯರನ್ನು ಈ ಸಲ ಆಯ್ಕೆ ಮಾಡುವ ಎನ್ನುವುದು ಅಲ್ಲಿನ ಜನತೆಯ ಆಸೆಯಾಗಿದೆ ಈ ನಿಟ್ಟಿನಲ್ಲಿ ಈ ಸಲ ನನಗೆ ಅಲ್ಲೇನ ಜನತೆ ಆಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಚಿತ್ರನಟಿ ಸಮಾಜ ಸೇವಕಿ ಡಾ. ಪೂಜಾ ರಮೇಶ ಮಾತನಾಡಿದರು.
ಈಗಾಗಲೇ ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಅಭ್ಯರ್ಥಿಗಳ ಟಿಕೆಟ್ ಆಕಾಂಕ್ಷಿಗಳ ಕಾವು ರಂಗೇರುತ್ತಿದ್ದು ಇನ್ನು ಯಾವುದೇ ಪಕ್ಷಗಳಲ್ಲಿ ನಿಖರವಾಗಿ ಅಭ್ಯರ್ಥಿಗಳ ಹೆಸರುಗಳು ಆಯ್ಕೆ ಆಗಿರುವುದಿಲ್ಲ. ನಾನು ಸಹ ಈಗಾಗಲೇ ದೆಹಲಿಯ ಹೈಕಮಾಂಡ್ ಜೊತೆ ನಿಕಟವಾಗಿ ಸಂಪರ್ಕದಲ್ಲಿದ್ದೇನೆ. ರಾಷ್ಟ್ರೀಯ ಪಕ್ಷಗಳ ಜೊತೆ ಚರ್ಚೆ ಮಾಡುತ್ತಿದ್ದು. ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎನ್ನುವ ಒಂದು ನಿರ್ಧಾರಕ್ಕೆ ಬರುತ್ತಿದ್ದೇನೆ. ನನಗೆ ಹೈಕಮಾಂಡ್ ಜೊತೆ ನೇರ ಸಂಪರ್ಕದಲ್ಲಿದ್ದು. ಹಾಯ್, ಪಕ್ಷದವರು ನನಗೆ ಟಿಕೆಟ್ ಕೊಡುವುದಾಗಿ ಭರವಸೆ ಸಹ ನೀಡಿದ್ದು ಕಾದು ನೋಡುವ ತಂತ್ರಗಾರಿಕೆಯನ್ನು ಅನುಸರಿಸುತ್ತಿದ್ದೇನೆ ಎಂದು ಅವರು ಹೇಳಿದರು. ಯಾವುದೇ ಪಕ್ಷದವರು ಟಿಕೆಟ್ ನೀಡದೇ ಹೋದರು ಪಕ್ಷೇತರ ಅಭ್ಯರ್ಥಿಯಾಗಿ ರಾಯಚೂರು ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ಪೂಜಾ ರಮೇಶ್ ಹೇಳಿದರು. ಈ ಕಳೆದ 14 ಬಾರಿ ಶಾಸಕರು ಪುರುಷರೇ ಆಗಿದ್ದು.
ಇಲ್ಲಿ ಮಹಿಳೆಯರನ್ನು ಶಾಸಕರನ್ನಾಗಿ ಇಲ್ಲಿವರೆಗೂ ಮಾಡಿಲ್ಲ ಮಹಿಳೆಯರನ್ನು ಬರೆ ಮತದಾನಕ್ಕೆ ಮಾತ್ರ ಮೀಸಲಿಟ್ಟಿದ್ದಾರೆ. ಆಶೀರ್ವಾದ ಮಾಡುವ ನಂಬಿಕೆ ನನಗಿದೆ. ರಾಯಚೂರಲ್ಲಿ ಕನಿಷ್ಠ ಮೂಲಭೂತದ ಸೌಲಭ್ಯಗಳನ್ನು ಒದಗಿಸುವಲ್ಲಿ ಇಲ್ಲಿವರೆಗೂ ಜನಪ್ರತಿನಿಧಿಗಳು ನಿರ್ಲಕ್ಷತನ ತೋರಿದ್ದಾರೆ. ಚುನಾವಣೆ ಬಂದಾಗ ಮಾತ್ರ ಮತದಾರರ ನೆನಪಾಗ್ತಾರೆ ಆನಂತರ ಯಾವುದೇ ರೀತಿಯ ಕೆಲಸಗಳು ಆಗುತ್ತಿಲ್ಲ ಎನ್ನುವ ಆರೋಪವನ್ನು ಪೂಜಾ ರಮೇಶ್ ಮಾಡಿದ್ದಾರೆ. ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ತುಂಗಭದ್ರ ಕೃಷ್ಣ ಎರಡು ನದಿಗಳಿದ್ದರೂ ಇಲ್ಲಿ ಶುದ್ಧ ಕುಡಿಯುವ ನೀರು ನಗರಕ್ಕೆ ಕೊಡುವಲ್ಲಿ ಸಂಪೂರ್ಣವಾಗಿ ಜನ ಪ್ರತಿನಿಧಿಗಳು ವಿಫಲರಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ರಾಯಚೂರು ನಗರಕ್ಕೆ ಮಹಿಳೆ ಮಹಿಳೆಯನ್ನೇ ಅದು ನನ್ನನ್ನೇ ಆಯ್ಕೆ ಮಾಡುವ ಜನರಿಗೆ ನಾನು ಋಣಿ ಯಾಗುತ್ತೇನೆ. ನನ್ನ ಉಸಿರಿರೋವರೆಗೂ ರಾಯಚೂರು ಜನತೆಗೆ ನಾನು ಸೇವೆ ಮಾಡಲು ಸದಾ ಸಿದ್ಧ.. ಅಧಿಕಾರಕ್ಕಾಗಿ ಮತಯಾಚನೆಗಾಗಿ ನಾನು ಈ ರೀತಿಯಾಗಿ ಹೇಳುತ್ತಿಲ್ಲ ನನ್ನ ಮನಸ್ಸಿನಿಂದ ನಾನು ಮಾತನಾಡುತ್ತಿದ್ದೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಬ್ರಷ್ಟಾಚಾರದ ದುಡ್ಡನ್ನು ಚುನಾವಣೆಯಲ್ಲಿ ಚೆಲ್ಲಿ ಆಯ್ಕೆ ಮಾಡುವ ತಂತ್ರಗಾರಿಕೆ. ನಡೆಯುವುದಿಲ್ಲ.
ಮಹಿಳಾ ಪ್ರತಿನಿಧಿಯಾಗಿ ನಾನು ಪ್ರತಿ ವಾರ್ಡ್ ಗಳಿಗೆ ನಾನು ಸಂಚರಿಸಿ ಮನೆ ಮನೆ ತೆರಳಿ ಮಹಿಳೆಯರಿಗೆ ಅರಿಶಿಣ ಕುಂಕುಮ ನೀಡಿ ನಾನು ಮತಯಾಚನೆ ಮಾಡುತ್ತೇನೆ. ಹಣ ಹೆಂಡ ಕೊಡುವ ಪ್ರಮೇಯ ನನಗಿಲ್ಲ. ಜನರ ಕಣ್ಣಿಗೆ ಮಣ್ಣೆರಚಿ 5 ವರ್ಷ ಲೂಟಿ ಮಾಡುವ ಹೆಣ್ಣು ಮಗಳು ನಾನಲ್ಲ. ಅಪ್ಪಟ ಕನ್ನಡತಿ ನಾನು ಕನ್ನಡಕ್ಕಾಗಿ ಹುಟ್ಟಿದ್ದೇನೆ ಜನರ ಸೇವೆ ಮಾಡೋದೇ ನನ್ನ ಪರಮ ಉದ್ದೇಶ. ಖಂಡಿತವಾಗಿ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ರಾಯಚೂರು ಜನರ ಆಶೀರ್ವಾದ ನನ್ನ ಮೇಲೆ ಇದೆ ಎಲ್ಲಾ ತಾಯಂದರೂ ನನಗೆ ಖಂಡಿತವಾಗಿ ಈ ಬಾರಿ ಆಶೀರ್ವಾದ ಮಾಡುತ್ತಾರೆ ಎಂದು ಚಿತ್ರನಟಿ ಡಾ. ಪೂಜಾ ರಮೇಶ್ ಹೇಳಿದರು..
Recent comments