ಮದ್ಲಾಪೂರದ ದಲಿತ ಯುವ ಮುಖಂಡನ ಬರ್ಬರ ಹತ್ಯ. ಸಿ ಒ ಡಿ ತನಿಖೆಗೆ ಡಿ ಎಸ್ ಎಸ್ (ರಿ ) ಕರ್ನಾಟಕ ಕಲ್ಬುರ್ಗಿ ವಿಭಾಗಿಯ ಅಧ್ಯಕ್ಷ ಎಲ್ ವಿ ಸುರೇಶ ಆಗ್ರಹ
ಸಿರವಾರ :ಮಾನ್ವಿ ತಾಲೂಕಿನ ಮದ್ಲಾಪೂರ ಗ್ರಾಮದ ದಲಿತ ಯುವ ಮುಖಂಡರಾಗಿದ್ದ, ಎಮ್ ಪ್ರಸಾದ್ ಅವರನ್ನು ದಿನಾಂಕ 30-10-2023 ರಂದು ಬೆಳ್ಳಿಗ್ಗೆ 6 ಘಂಟೆ ಸುಮಾರಿಗೆ ತಾಲೂಕಿನ ಸಮೀಪದ ರಬಣಕಲ್ ಮತ್ತು ಮದ್ಲಾಪೂರ ಗ್ರಾಮದ ಕೇಲವು ಕಿಡಿಗೇಡಿಗಳು ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಬೆಳ್ಳಂ ಬೆಳ್ಳಿಗ್ಗೆ ಹತ್ಯ ಗೈದ ಘಟನೆ ಇಡೀ ಜಿಲ್ಲೆಯಲ್ಲದೇ ರಾಜ್ಯದ ದಲಿತ ಜನತೆಯನ್ನೇ ಬೆಚ್ಚಿಬಿಳಿಸಿದ್ದು, ಈ ಘಟನೆಯನ್ನು ಖಂಡಿಸಿ ದಲಿತ ಸಂರಕ್ಷ ಸಮಿತಿ (ರಿ )ಕರ್ನಾಟಕ ಕಲಬುರ್ಗಿ ವಿಭಾಗಿಯ ಘಟಕದ ಅಧ್ಯಕ್ಷರಾದ ಎಲ್. ವಿ ಸುರೇಶ್ಅವರು
ಇಂದು ತಾಲೂಕು ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಈ ಘಟನೆಯನ್ನು ಸಿ ಒ ಡಿ ತನಿಗೆ ಒಪ್ಪಿಸಿ, ಮತ್ತು ದಲಿತ ಯುವ ಮುಖಂಡರಾಗಿದ್ದ ಎಮ್ ಪ್ರಸಾದ್ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ಹಾಗೂ ಕುಟುಂಬದ ಸದ್ಯಸ್ಯರಿಗೆ ಸರ್ಕಾರಿ ಹುದ್ದೆ ಕೊಟ್ಟು, ಇನ್ನುಳಿದ ತಪ್ಪಿಸ್ತರನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸಿ ಕೊಡಬೇಕಾಗಿ ಮನವಿ ಪತ್ರ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ, ಹನುಮಂತ ಜೆ,ದೇವಪುತ್ರ ಚಿಟ್ಟಿ,ಲಕ್ಷ್ಮಣ ಮೇತ್ರಿ, ಹನುಮೇಶ್ ಭೇರಿ,ಮೇಶಕ್ ದೊಡ್ಡಮನಿ, ಮೇಶಕ್ ಕೆಂಪು,ಎಮ್ ಡೇವಿಡ್,ನಾಗರಾಜ ಜಾಗಟಗಲ್,ಮೌನೇಶ್ ಮರಾಟ,ಮಲ್ಲೇಶ್ ಚಿಕ್ಕಬಾದಾರದ್ದಿನ್ನಿ, ಬಸವರಾಜ್,ಚನ್ನಬಸವ, ಡಾಲಿ, ಭೀಮಣ್ಣ, ತಿಮ್ಮರೆಡ್ಡಿ ಇನ್ನಿತರರು ಭಾಜಿಯಾಗಿದ್ದರು.
Recent comments