ಕರೀನಾ ಕಪೂರ್ ಖಾನ್ “ ಸ್ವಾಸ್ತ್ ಇಮ್ಯೂನೈಸ್ಡ್ ಇಂಡಿಯಾ “ ಅಭಿಯಾನದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಕರೀನಾ ಕಪೂರ್ ಖಾನ್ “ ಸ್ವಾಸ್ತ್ ಇಮ್ಯೂನೈಸ್ಡ್ ಇಂಡಿಯಾ “ ಅಭಿಯಾನದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಮತ್ತು ಪ್ರತಿರಕ್ಷಣಾ ಅಭಿಯಾನದ “ ಸ್ವಾಸ್ತ್ ಇಮ್ಯೂನೈಸ್ಡ್ ಇಂಡಿಯಾ”ದ ಪ್ರಚಾರ ರಾಯಭಾರಿಯಾಗಿ ಖ್ಯಾತ ನಟಿ ಕರೀನಾ ಕಪೂರ್ ಖಾನ್ ಅವರನ್ನು ಆಯ್ಕೆ ಮಾಡಲಾಗಿದೆ.ನೆಟ್ವರ್ಕ್ 18 ಸಹಯೋಗದೊಂದಿಗೆ ಪ್ರಪಂಚದ ಅತಿದೊಡ್ಡ ಲಸಿಕೆ ತಯಾರಕರ ಪೈಕಿ ಒಂದಾದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರಾರಂಭಿಸಿರುವ ಈ ಅಭಿಯಾನವು ಆರೋಗ್ಯಕರ ಭಾರತ ನಿರ್ಮಾಣಕ್ಕೆ ಬಾಲ್ಯದಲ್ಲೆ ರೋಗನಿರೋಧತೆಯ ಅಗತ್ಯತೆ ಬಗ್ಗೆ ಅರಿವು ಮೂಡಿಸಲು ಒಂದು ದೃಡವಾದ ಜಾಲವನ್ನು ನಿರ್ಮಿಸುವತ್ತ ಗಮನಹರಿಸುತ್ತದೆ. ಅಭಿಯಾನದ ಬಗ್ಗೆ ಮಾತನಾಡಿದ ಕರೀನಾ ಕಪೂರ್ ಖಾನ್ “ ಸ್ವಾಸ್ತ್ ಇಮ್ಯೂನೈಸ್ಡ್ ಇಂಡಿಯಾವು ಕುಟುಂಬಕ್ಕೆ ಲಸಿಕೆಯ ಮಹತ್ವವನ್ನು ತಿಳಿಸುತ್ತದೆ.
ಇದು ಮಕ್ಕಳಿಗೆ ಆರೋಗ್ಯಕರ ಜೀವನವನ್ನು ಒದಗಿಸುವ ಅತ್ಯುತ್ತಮ ಪ್ರಯತ್ನವಾಗಿದೆ.ಓರ್ವ ತಾಯಿಯಾಗಿ ಇದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ.ನನ್ನ ಮಗುವನ್ನು ಅಪಾಯಕಾರಿ ರೋಗಗಳಿಂದ ರಕ್ಷಿಸುವುದನ್ನು ನಾನು ಗೌರವಿಸುತ್ತೇನೆ.ಲಭ್ಯತೆಯ ಕೊರತೆಯಿಂದ ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಶಿಶು ಸಾವು ಸಂಭವಿಸುತ್ತವೆ.ನಾವೆಲ್ಲರೂ ಬದಲಾವಣೆಗಾಗಿ ಒಂದಾಗಬೇಕು.ಈ ಕೆಲಸದಲ್ಲಿ ಕೈ ಜೋಡಿಸಲು ನಾನು ಉತ್ಸುಕಳಾಗಿದ್ದೇನೆ.ಅದಾರ್ ಮತ್ತು ನತಾಶಾ ಪೂನವಾಲ್ಲರ್ ಸೆರಮ್ ಇನ್ಸ್ಟಿಟ್ಯೂಟ್ ಮತ್ತು ನೆಟ್ವರ್ಕ್ 18 ರೊಂದಿಗೆ ಈ ಪ್ರಯಾಣದ ಒಂದು ಭಾಗವಾಗಲು ಹೆಮ್ಮೆ ಪಡುತ್ತೇನೆ.ಈ ಆಂದೋಲನದ ಮೂಲಕ ನಾವು ಆರೋಗ್ಯ ಪೂರ್ಣ ಭಾರತ ನಿರ್ಮಾಣದ ಪ್ರತಿಯೊಬ್ಬ ಪೋಷಕರ ಮೇಲೂ ಪ್ರಭಾವ ಬೀರಲಿದೆ” ಎಂದು ಅಭಿಪ್ರಾಯಪಟ್ಟರು. ಸಮಾಜದ ಬಡ ವರ್ಗದ ಜನರಿಗೆ ಚುಚ್ಚುಮದ್ದಿನ ಅಗತ್ಯವನ್ನು ಕರೀನಾ ತಿಳಿಸಿಕೊಡಲಿದ್ದಾರೆ.
ಮಾರಣಾಂತಿಕ ರೋಗಗಳನ್ನು ಬಿಭಾಯಿಸಲು ವ್ಯಾಕ್ಸಿನೇಷನ್ ಹೆಚ್ಚು ಸೂಕ್ತ ವಿಧಾನವಾಗಿದೆ.ಇತ್ತೀಚಿನ ದಿನಗಳಲ್ಲಿ ಭಾರತವು ಪೋಲಿಯೋ ಮತ್ತು ಸ್ಮಾಲ್ ಪೋಕ್ಸ್ಗಳನ್ನು ರಾಷ್ಟ್ರವ್ಯಾಪಿಯಾಗಿ ನಿರ್ಮೂಲನೆ ಮಾಡಿದೆ.ಭವಿಷ್ಯದಲ್ಲಿ ಇತರ ರೋಗಗಳಿಗೂ ಇದು ಸಾಧ್ಯವಾಗಬೇಕು.ಭಾರತದಲ್ಲಿ ಇಂದಿಗೂ ಮಕ್ಕಳು ಮತ್ತು ತಾಯಂದಿರು ಮಾಸ್ಲೆಸ್,ಡಿಫ್ಥೇರಿಯಾ ಮುಂತಾದ ರೋಗಗಳನ್ನು ಲಸಿಕೆ ಮೂಲಕ ತಡೆಗಟ್ಟಲು ಸಹಕರಿಸುತ್ತಿಲ್ಲ ,ಹೆಚ್ಚಿನ ಪ್ರಚಾರ ನೀಡಿದ್ದರೂ ಭಾರತದಲ್ಲಿ ಶೇ.56 ರಷ್ಟು ಜನ ಲಸಿಕೆಯನ್ನು ಅಪೂರ್ಣವಾಗಿ ಹಾಕಿದ್ದರೆ 32ಶೇ,ಮಂದಿ ಲಸಿಕೆಯನ್ನೇ ಹಾಕಿಸಿಲ್ಲ.
ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವು ಸಂಪೂರ್ಣವಾಗಿ ರೋಗನಿರೋಧಕ ಭಾರತದ ಗುರಿಯೆಡೆಗೆ ಇಡುತ್ತಿರುವ ಪ್ರಮುಖ ಹೆಜ್ಜೆಯಾಗಿದೆ ಅಭಿಯಾನದ ಮುಖ್ಯ ಗುರಿ ನಮ್ಮ ದೇಶದಲ್ಲಿ ವ್ಯಾನೇಷನ್ ಮತ್ತು ಪ್ರತಿರಕ್ಷಣೆಯ ಬಗ್ಗೆ ಸಂವಹನದಲ್ಲಿರುವ ಸಮಸ್ಸೆಯನ್ನು ಬಗೆಹರಿಸುವುದು.ಶಿಶಿಗಳು ,ಮಕ್ಕಳು ಮತ್ತು ನಿರೀಕ್ಷಿತ ತಾಯಂದಿರಿಗೆ ಅಗತ್ಯವಿರುವ ಲಸಿಕೆಗಳನ್ನು ಹಾಕಿಸಿಕೊಳ್ಳಲು ಜನರನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶ,ಬಲವಾದ ವ್ಯಕ್ತಿತ್ವ ಮತ್ತು ಪರಿಪೂರ್ಣ ಮನಸ್ಸಿನೊಂದಿಗೆ ಪೋಷಕರಾಗಿರುವ ಕರೀನಾ ಕಪೂರ್ ಖಾನ್ ಅವರ ಬೆಂಬಲವು ನಮ್ಮೊಂದಿಗೆ ಇದೆ. ಬದಲಾವಣೆಯ ಭಾಗವಾಗಿ ಲಸಿಕೆಯನ್ನು ಮಗುವಿನ ಬೆಳವಣಿಗೆಯ ಪ್ರಮುಖ ಅಂಶವೆಂದು ಅರ್ಥಮಾಡಿಕೊಳ್ಳಲು ಮತ್ತು ಜನರನ್ನು ಪ್ರಭಾವಿಸಲು ಅವರು ಸಹಾಯ ಮಾಡುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದರು.
Recent comments