Skip to main content
"ಸರ್ವ್ ಬೆಂಗಳೂರು" ಮೂಲಕ ಬಡವರಿಗೆ ಆಹಾರ ಪೂರೈಕೆ ಮಾಡುತ್ತಿರುವ ಏಟ್ರಿಯಾ ಫೌಂಡೇಷನ್ .

"ಸರ್ವ್ ಬೆಂಗಳೂರು" ಮೂಲಕ ಬಡವರಿಗೆ ಆಹಾರ ಪೂರೈಕೆ ಮಾಡುತ್ತಿರುವ ಏಟ್ರಿಯಾ ಫೌಂಡೇಷನ್ .

"ಸರ್ವ್ ಬೆಂಗಳೂರು" ಮೂಲಕ ಬಡವರಿಗೆ ಆಹಾರ ಪೂರೈಕೆ ಮಾಡುತ್ತಿರುವ ಏಟ್ರಿಯಾ ಫೌಂಡೇಷನ್ .

"ಸರ್ವ್ ಬೆಂಗಳೂರು" ಮೂಲಕ ಬಡವರಿಗೆ ಆಹಾರ ಪೂರೈಕೆ ಮಾಡುತ್ತಿರುವ ಏಟ್ರಿಯಾ ಫೌಂಡೇಷನ್ .

ಮಾರಣಾಂತಿಕ ಕೊರೋನ ವೈರಸ್ನಿಂದಾಗಿ ಇಡೀ ದೇಶವೇ ಲಾಕ್ಡೌನ್ ಆಗಿದೆ. ಇದರಿಂದ ಬಡವರು, ಅಲೆಮಾರಿಗರು, ವಲಸಿಗರು ಮತ್ತು ನಿರ್ಗತಿಕರು ಹಸಿವಿನಿಂದ ಬಳಲುವಂತಾಗಿದೆ. ಇವರ ಹಸಿವು ನೀಗಿಸಲು ಏಟ್ರಿಯಾ ಫೌಂಡೇಷನ್ ವತಿಯಿಂದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಅಂಗವಾಗಿ ನಗರದ 100 ವಿವಿಧ ಸ್ಥಳಗಳಲ್ಲಿ ಪ್ರತಿದಿನ 1,50,000 ಊಟದ ಪೊಟ್ಟಣಗಳನ್ನು 'ಸರ್ವ್ ಬೆಂಗಳೂರು" ಯೋಜನೆಯಡಿ ವಿತರಣೆ ಮಾಡುತ್ತಿದ್ದು, ಲಾಕ್ಡೌನ್ ಮುಗಿಯುವವರೆಗೂ ಈ ಸೇವೆ ಮುಂದುವರೆಸಲಿದೆ. ಏಟ್ರಿಯಾ ಫೌಂಡೇಷನ್ ಬಡವರು, ವಲಸಿಗರು ಇರುವ ಪ್ರದೇಶಗಳನ್ನು ಗುರುತಿಸಿ ಊಟದ ವ್ಯವಸ್ಥೆ ಕಲ್ಪಿಸುತ್ತಿದೆ.

Atria Foundation

ಏಟ್ರಿಯಾ ಎಜುಕೇಶನ್, ಎಸಿಟಿ ಫೈಬರ್ನೆಟ್, ಏಟ್ರಿಯಾ ಹಾಸ್ಪಿಟಾಲಿಟಿ, ಏಟ್ರಿಯಾ ಪವರ್ ಮತ್ತು ಇತರ ಸಂಸ್ಥೆಗಳ ಸಹಯೋಗದೊಂದಿಗೆ ಏಟ್ರಿಯಾ ಫೌಂಡೇಶನ್ ನಗರಾದ್ಯಂತ ಆಹಾರ ವಿತರಣೆ ಮಾಡುತ್ತಿದೆ. ನಗರದಲ್ಲಿ ಒಟ್ಟು 12 ಅಡುಗೆ ಮನೆ ನಿರ್ಮಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿನಿತ್ಯ ಆಹಾರ ತಯಾರಿಸಲಾಗುತ್ತಿದೆ. ಏಟ್ರಿಯಾ ಸಂಸ್ಥೆಯ ನೌಕರರು ಸ್ವಯಂ ಸೇವಕರಾಗಿ ತಮ್ಮನ್ನು ಈ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆಹಾರ ವಿತರಣೆಯ ಜವಾಬ್ದಾರಿಯನ್ನು ವಿವಿಧ ಎನ್ಜಿಒಗಳು ವಹಿಸಿಕೊಂಡಿವೆ. ಪ್ರತಿನಿತ್ಯ ಪೊಂಗಲ್, ಉಪ್ಪಿಟ್ಟು, ಅನ್ನ, ಸಾಂಬರ್ ಇತ್ಯಾದಿ ತಯಾರಿಸಿ ವಿತರಿಸಲಾಗುತ್ತಿದೆ.

Atria Foundation

ಈ ಕುರಿತು ಮಾತನಾಡಿದ ಆಟ್ರಿಯಾ ಸಂಸ್ಥೆಯ ನಿರ್ದೇಶಕ ಕೌಶಿಕ್ ರಾಜು, "ಇಡೀ ದೇಶ ಕೊರೋನಾ ವೈರಸ್ನಿಂದ ನಲುಗುತ್ತಿದೆ. ಅದರಲ್ಲೂ ಬಡ ಕುಟುಂಬಗಳು, ವಲಸಿಗರು, ದಿನಗೂಲಿ ನೌಕರರು ಊಟಕ್ಕೂ ಕಷ್ಟ ಪಡುವ ಸ್ಥಿತಿ ಎದುರಾಗಿದೆ. ಇವರಿಗೆ ಊಟದ ವ್ಯವಸ್ಥೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಏಟ್ರಿಯಾ ಫೌಂಡೇಷನ್ ಆಹಾರ ಪೂರೈಕೆ ಮಾಡುತ್ತಿದೆ. ಲಾಕ್ಡೌನ್ ಮುಗಿಯುವವರೆಗೂ ಈ ಆಹಾರ ಪೂರೈಕೆ ಮುಂದುವರೆಸಲು ಇಚ್ಚಿಸಿದ್ದೇವೆ. ಯಾರೂ ಸಹ ಹಸಿವಿನಿಂದ ಬಳಲಬಾರದು," ಎಂದು ಹೇಳಿದರು. ಏಟ್ರಿಯಾ ಸಮೂಹದ ಈ ಪ್ರಯತ್ನದಲ್ಲಿ ಕೈಜೋಡಿಸಲು ಆಸಕ್ತಿ ಇರುವವರು ತಮ್ಮ ಆಸಕ್ತಿ ಬಗ್ಗೆ atriafoundation@gmail.com ಗೆ ಇಮೇಲ್ ಮಾಡಬಹುದು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.