ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ಗೆ ಶ್ರೀ ಅರುಣ್ ಸಮಾಜಸೇವಕರು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ಗೆ ಶ್ರೀ ಅರುಣ್ ಸಮಾಜಸೇವಕರು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ.
ಚನ್ನರಯಾಪಟ್ಟಣ : ರಾಜ್ಯ ಮಟ್ಟದ ಸಂಘಟನೆಯಾದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ (ರಿ)ಸಂಘಟನೆಗೆ, ರಾಜ್ಯಧ್ಯಕ್ಷರಾದ ಶ್ರೀ ಸಿ ಎನ್. ಅಶೋಕ್ ಇವರು,ಮಕ್ಕಳಲ್ಲಿ ಸಾಹಿತ್ಯಭಿರುಚಿ,ಸೃಜನಶೀಲ ಬರವಣಿಗೆ,ಪರಿಸರ ಸಂರಕ್ಷಣೆ,ಸಹಬಾಳ್ವೆ ಹಾಗೂ ದೇಶಭಿಮಾನವನ್ನು ಬೆಳೆಸುವ ಉದ್ದೇಶದಿಂದ,ಶ್ರೀ ಅರುಣ್ ಇವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಗೋಳಿಸಿ ಅದೇಶಿಸಲಾಗಿದೆ.
ಜೊತೆಗೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅಧಿಕಾರನೀಡಲಾಗಿದೆ, ಎಂದು ರಾಜ್ಯ ಅಧ್ಯಕ್ಷರು ತಮ್ಮ ಆದೇಶದ ಪತ್ರದಮೂಲಕ ತಿಳಿಸಿದ್ದಾರೆ.
Recent comments