ಮದುವೆಗೂ ಮುನ್ನ ತೃತೀಯಲಿಂಗಿಯ ಆಶೀರ್ವಾದ ಪಡೆದ ಅಪೊಲೋ ಸಂಸ್ಥೆಯ ಅನುಷ್ಪಾಲಾ ಕಾಮಿನೇನಿ ಮತ್ತು ರೇಸರ್ ಅರ್ಮಾನ್ ಇಬ್ರಾಹಿಂ.
ಮದುವೆಗೂ ಮುನ್ನ ತೃತೀಯಲಿಂಗಿಯ ಆಶೀರ್ವಾದ ಪಡೆದ ಅಪೊಲೋ ಸಂಸ್ಥೆಯ ಅನುಷ್ಪಾಲಾ ಕಾಮಿನೇನಿ ಮತ್ತು ರೇಸರ್ ಅರ್ಮಾನ್ ಇಬ್ರಾಹಿಂ.

ಹೈದರಾಬಾದ್: ಅಪೊಲೋ ಬ್ರಾಂಡ್‌ಗಳ ಉಪಾಧ್ಯಕ್ಷರಾದ ಅನುಷ್ಪಾಲಾ ಕಾಮಿನೇನಿ, ವೃತ್ತಿಪರ ರೇಸರ್ ಮತ್ತು X1 ರೇಸಿಂಗ್ ಲೀಗ್‌ನ ಸಹ-ಸಂಸ್ಥಾಪಕ ಅರ್ಮಾನ್ ಇಬ್ರಾಹಿಂ ವಿವಾಹ ಕಾರ್ಯಕ್ರಮಕ್ಕೂ ಮುನ್ನ ತೃತೀಯಲಿಂಗಿಗಳಿಂದ ಮಂಗಳಕರ ಆಶೀರ್ವಾದ ಪಡೆದಿದ್ದಾರೆ. ಡಿಸೆಂಬರ್ 1ರ ಬುಧವಾರ ಸಂಜೆ 5:30 ಕ್ಕೆ. ಅನುಷ್ಪಾಲಾ ಕಾಮಿನೇನಿ ಕುಟುಂಬ ಆಯೋಜಿಸಿದ್ದ ‘ಡೌನ್ ಟು ಅರ್ಥ್’ ಸಮಾರಂಭದಲ್ಲಿ ಟ್ರಾನ್ಸ್‌ಜೆಂಡರ್, ಹಿಜ್ರಾ ಹಕ್ಕುಗಳ ಕಾರ್ಯಕರ್ತೆ, ನಟಿ, ಲೇಖಕಿ ಮತ್ತು ನೃತ್ಯಗಾರ್ತಿ ಲಕ್ಷ್ಮಿ ನಾರಾಯಣ ತ್ರಿಪಾಠಿ ಭಾಗವಹಿಸಿ ಆಶೀರ್ವದಿಸಿದರು. ಸಮಾನತೆ, ಸಾಮರಸ್ಯವನ್ನು ಸಾರುವ ಉದ್ದೇಶಕ್ಕೆ ಕುಟುಂಬದ ಈ ವಿಶೇಷ ಕಾರ್ಯಕ್ಕೆ ತೃತೀಯ ಲಿಂಗಿಗಳಿಗೂ ಆಹ್ವಾನ ನೀಡಿತ್ತು. ಅದೇ ರೀತಿ ಕಾಮಿನೇನಿ ಕುಟುಂಬ ಈವರೆಗೂ ಟ್ರಾನ್ಸ್ ಸಮುದಾಯವನ್ನು ಬೆಂಬಲಿಸುತ್ತ ಬಂದಿದೆ. ಅಪೊಲೋ ಸಂಸ್ಥೆಯಲ್ಲಿಯೂ ವೈವಿದ್ಯತೆಯನ್ನು ಪ್ರೋತ್ಸಾಹಿಸುವ ಮೂಲಕ ಸಮುದಾಯವನ್ನು ಸಬಲೀಕರಣಗೊಳಿಸುವುದನ್ನು ಮುಂದುವರಿಸಿದೆ. ಅದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಇದೀಗ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ತೃತೀಯಲಿಂಗಿಗಳಿಂದ ಮಂಗಳಕರ ಆಶೀರ್ವಾದ ಪಡೆದಿದೆ.
Recent comments