ಟಿಕೆಟ್ ಕೊಟ್ಟರೆ ಖಂಡಿತ ರಾಯಚೂರು ಇಂದ ಸ್ಪರ್ಧೆ ಚಿತ್ರನಟಿ ಪೂಜಾ ರಮೇಶ್.
ಟಿಕೆಟ್ ಕೊಟ್ಟರೆ ಖಂಡಿತ ರಾಯಚೂರು ಇಂದ ಸ್ಪರ್ಧೆ ಚಿತ್ರನಟಿ ಪೂಜಾ ರಮೇಶ್.

ರಾಜಕೀಯಿಂದಲೇ ಸಮಾಜ ಸೇವೆ ಮಾಡಲು ಅನುಕೂಲಕರ. ಯಾವುದಾದರೂ ಅಧಿಕಾರ ಇದ್ದಾಗ ಮಾತ್ರ ಜನಸೇವೆ ಮಾಡಬಹುದು. ನಾನು ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧಳಿದ್ದೇನೆ. ಯಾವುದಾದರೂ ರಾಜಕೀಯ ಪಕ್ಷದವರು ನನಗೆ ಟಿಕೆಟ್ ನೀಡಿದರೆ ಖಂಡಿತವಾಗಿ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಸಮಾಜ ಸೇವಕಿ. ಚಿತ್ರನಟಿ.ಮಿಸ್ ಇಂಡಿಯಾ ವಿಜೇತೆ ಡಾ. ಪೂಜಾ ರಮೇಶ್ ತಿಳಿಸಿದ್ದಾರೆ . ರಾಜ್ಯದ ರಾಜಕಾರಣದಲ್ಲಿ ಇಲ್ಲಿಯವರೆಗೆ ಮಹಿಳೆಯರಿಗೆ ವಿಶೇಷವಾಗಿ ಸ್ನಾನಮಾನಗಳನ್ನು ಕೊಡುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವಿಫಲವಾಗಿವೆ. ಮಹಿಳೆಯರ ಸಬಲೀಕರಣ ಬಗ್ಗೆ ಮಾತನಾಡುವ ರಾಜಕಾರಣಿಗಳು ಮಹಿಳೆಯರಿಗೆ ಟಿಕೆಟ್ ನೀಡುವಲ್ಲಿ ಕಡೆಗಣಿಸುತ್ತಿರುವುದು ನಿಜವಾಗಿಯೂ ದೌರ್ಭಾಗ್ಯ. ಇಲ್ಲಿವರೆಗೆ ರಾಜ್ಯದಲ್ಲಿ ಶೇಕಡ 32% ಮಹಿಳೆಯರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ನೀಡುವಲ್ಲಿ ಇಂದಿನ ರಾಜಕೀಯ ಪಕ್ಷಗಳು ಅಥವಾ ರಾಜಕಾರಣಿಗಳು ರಾಜ್ಯದ ನಾಯಕರುಗಳು ಮಹಿಳೆಯರಿಗೆ ಟಿಕೆಟ್ ನೀಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.
ಮಹಿಳೆಯರ ರಕ್ಷಣೆ ಮಾಡುವಲ್ಲಿ ಸಹ ಸರ್ಕಾರಗಳು ವಿಫಲವಾಗಿವೆ. ಇಂದಿಗೂ ಮಹಿಳೆಯರ ಮೇಲೆ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನೆಗಳು ಈ ಸಮಾಜದಲ್ಲಿ ನಡೆಯುತ್ತಿವೆ ಇವುಗಳಿಗೆ ಕಡಿವಾಣ ಹಾಕುವಲ್ಲಿ ಸರ್ಕಾರಗಳು ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ರಾಜ್ಯದಲ್ಲಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಆಯ್ಕೆ ಮಾಡಿಕೊಂಡಿದ್ದೇನೆ. ಯಾಕಂದ್ರೆ ಇಲ್ಲಿ ಸಾಕಷ್ಟು ಸಮಾಜಮುಖಿ ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ. ಅಷ್ಟೇ ನನಗೆ ಅಭಿಮಾನಿಗಳಿರುವುದರಿಂದ ನಾನು ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದೇನೆ. ಆಮ್ ಆದ್ಮಿ ಪಾರ್ಟಿ ಅಥವಾ ಬೇರೆಯವರು ನನಗೆ ಗುರುತಿಸಿ ಟಿಕೆಟ್ ನೀಡಿದರೆ ಖಂಡಿತವಾಗಿ ನಾನು ಈ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯುತ್ತೇನೆ. ನಾನು ಚಿತ್ರನಟಿ ಒಂದೇ ಅಲ್ಲ ಸಮಾಜ ಸೇವೆ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಬುಡಕಟ್ಟು ಜನಾಂಗ ಮತ್ತು ಸ್ಲಂ ಮಕ್ಕಳು ಹಾಗೂ ಅಲೆಮಾರಿ ಜನಾಂಗದ ಚಿಂದಿ ಆಯುವ ಮಕ್ಕಳ ಬಗ್ಗೆ ಶಿಕ್ಷಣ ಮತ್ತು ಆರೋಗ್ಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ.
ಭ್ರಷ್ಟಾಚಾರ ನಿರ್ಮೂಲನೆಗಾಗಿ ನಾನು ನಿಂತಿದ್ದೇನೆ ಸಮಾಜದ ಕಟ್ಟ ಕಡೆಯ ಬಡವರ ಬಗ್ಗೆ ಚಿಂತನೆ ಮಾಡುವ ಕೆಲಸ ಮಾಡುತ್ತಿದ್ದೇನೆ.ಇಂದಿರಾ ಗಾಂಧೀ ಪ್ರಧಾನಿಯಾಗಿದ್ದಾಗ ಚಿಕ್ಕಮಗಳೂರಿನ ಶಾಸಕರಾಗಿದ್ದ ದಿವಂಗತ ಭ್ರಮರಾಂಭ ಅವರ ಮೊಮ್ಮಗಳಾಗಿರುವ ನಾನು ರಾಜಕೀಯ ಕುಟುಂಬದಿಂದ ಬಂದಿದ್ದೇನೆ. ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನ ಮಾಡುತ್ತಿರುವೆ ಎಂದು ಅವರು ತಿಳಿಸಿದರು. 9 ಕನ್ನಡ ಸಿನಿಮಾ.19 ಕನ್ನಡ. ತೆಲಗು ಧಾರವಾಹಿಗಳನ್ನು ಮಾಡಿರುವ ಪೂಜಾ ರಮೇಶ್ ಇದೀಗ ರಾಜಕೀಯ ಪ್ರವೇಶಕ್ಕೆ ಸಜ್ಜಗಿದ್ದಾರೆ.
Recent comments