Skip to main content
ಆಸ್ಟ್ರೇಲಿಯಾ ಏಕದಿನ ಪಂದ್ಯಕ್ಕೆ ಧೋನಿ ನಾಯಕ

ಕ್ರಿಕೆಟ್ ಆಸ್ಟ್ರೇಲಿಯಾ ದಶಕದ ಏಕದಿನ ತಂಡಕ್ಕೆ ಧೋನಿ ನಾಯಕ .

ಕ್ರಿಕೆಟ್‌ ಆಸ್ಟ್ರೇಲಿಯಾ ದಶಕದ ಏಕದಿನ ತಂಡಕ್ಕೆ ಎಂ.ಎಸ್‌ ಧೋನಿ ನಾಯಕ !

ಎಮ್ .ಎಸ್ .ಧೋನಿ

ಮೆಲ್ಬೋರ್ನ್,: ಅನುಭವಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎಂ.ಎಸ್.ಧೋನಿ ಅವರನ್ನು ದಶಕದ ಕ್ರಿಕೆಟ್ ಆಸ್ಟ್ರೇಲಿಯಾ ಏಕದಿನ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಮಂಗಳವಾರ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದ ಈ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇತರ ಇಬ್ಬರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ. "ಎಂ.ಎಸ್ ಧೋನಿ ಬ್ಯಾಟಿಂಗ್‌ನೊಂದಿಗೆ ಒಂದು ದಶಕದ ಕಾಲ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಭಾರತದ ಏಕ ದಿನದ ತಂಡಕ್ಕೆ ಸುವರ್ಣ ಅವಧಿಯಲ್ಲಿ ಪ್ರಬಲ ಶಕ್ತಿಯಾಗಿದ್ದರು. 2011 ರಲ್ಲಿ ತವರು ನೆಲದಲ್ಲಿ ವಿಶ್ವಕಪ್ ವೈಭವಕ್ಕೆ ಮಾರ್ಗದರ್ಶನ ನೀಡುವ ಮೂಲಕ ಅವರ ಶ್ರೇಷ್ಠತೆಯನ್ನು ಖಚಿತ ಪಡಿಸಿತ್ತು. ಅಲ್ಲದೆ, ಬಲಗೈ ಬ್ಯಾಟ್ಸ್‌ಮನ್‌ ಭಾರತದ ಗುಡ್ ಫಿನಿಶರ್ ಆಗಿ ಹೆಸರು ಪಡೆದಿದ್ದರು" ಎಂದು ಧೋನಿ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆಯಲ್ಲಿ ತಿಳಿಸಿದೆ. ಏಕದಿನ ಮಾದರಿಯಲ್ಲಿ ಶೇ. 50 ರಷ್ಟು ಸರಾಸರಿ ಹೊಂದಿದ್ದಾರೆ. ಜತೆಗೆ, ೪೯ ಇನಿಂಗ್ಸ್ ಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ. ಒಂದು ದಶಕದಲ್ಲಿ 28 ಸ್ಥಳಗಳಲ್ಲಿ ರನ್‌ ಚೇಸ್‌ ಮಾಡುವಾಗ ಧೋನಿ ಅಜೇಯರಾಗಿ ಉಳಿದಿದ್ದಾರೆ. ಇದರಲ್ಲಿ ಕೇವಲ ಮೂರು ಬಾರಿ ಮಾತ್ರ ಭಾರತ ಸೋಲು ಅನುಭವಿಸಿತ್ತು. ವಿಶೇಷವಾಗಿ ಇವರು ವಿಕೆಟ್ ಹಿಂದೆ ಬೌಲರ್ ಗಳಿಗೆ ಬಲವಾಗಿದ್ದರು. 38ರ ಪ್ರಾಯದ ಧೋನಿ 350 ಏಕದಿನ, 90 ಟೆಸ್ಟ್ ಹಾಗೂ 98 ಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇದರ ನಡುವೆ ವಿಕೆಟ್‌ ಹಿಂದೆ ಒಟ್ಟು 829 ವಿಕೆಟ್ ಬಲಿ ಪಡೆದಿದ್ದಾರೆ. ಎಂ.ಎಸ್‌ ಧೋನಿ ನಾಯಕತ್ವದಲ್ಲಿ ಭಾರತ ತಂಡ ಟಿ-20 ವಿಶ್ವಕಪ್ ಹಾಗೂ ಏಕದಿನ ಐಸಿಸಿ ಏಕದಿನ ವಿಶ್ವಕಪ್‌ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಚಾಂಪಿಯನ್‌ ಆಗಿತ್ತು.

ಈ ಮೂರು ಮಾದರಿಯಲ್ಲಿ ಪ್ರಶಸ್ತಿ ಗೆದ್ದ ವಿಶ್ವದ ಮೊದಲ ನಾಯಕ ಎಂಬ ಸಾಧನೆಗೆ ಧೋನಿ ಭಾಜನರಾಗಿದ್ದಾರೆ. ಇವರ ನಾಯಕತ್ವದ ಟೀಮ್ ಇಂಡಿಯಾ ಹಲವು ಬಾರಿ ಏಕದಿನ ಹಾಗೂ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆದಿತ್ತು. 2019ರ ವಿಶ್ವಕಪ್ ಸೆಮಿಫೈನಲ್ ಹಣಾಹಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲು ಅನುಭವಿಸಿದ ಬಳಿಕ ಧೋನಿ, ಟೀಮ್ ಇಂಡಿಯಾದಿಂದ ದೂರ ಉಳಿದಿದ್ದಾರೆ.

ಮಾಜಿ ನಾಯಕನ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯ ಇನ್ನು ಪ್ರಶ್ನೆಯಾಗಿ ಉಳಿದಿದೆ. ಮೂವರು ಭಾರತೀಯರ ಜತೆ, ಹಾಶೀಮ್ ಆಮ್ಲಾ, ಎ.ಬಿ ಡಿವಿಲಿರ್ಸ್‌, ಶಕೀಬ್ ಅಲ್ ಹಸನ್, ಜೋಸ್‌ ಬಟ್ಲರ್, ರಶೀದ್‌ ಖಾನ್, ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್ ಹಾಗೂ ಲಸಿತ್ ಮಲಿಂಗಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ವಿರಾಟ್‌ ಕೊಹ್ಲಿ ನಾಯಕರಾಗಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾದ ಏಕದಿನ ದಶತಕದ ತಂಡ: ರೋಹಿತ್ ಶರ್ಮಾ, ಹಾಶೀಮ್ ಆಮ್ಲಾ, ವಿರಾಟ್ ಕೊಹ್ಲಿ, ಎ.ಬಿ ಡಿವಿಲಿಯರ್ಸ್, ಶಕೀಬ್ ಅಲ್‌ ಹಸನ್‌, ಜೋಸ್ ಬಟ್ಲರ್, ಎಂ.ಎಸ್ ಧೋನಿ, ರಶೀದ್ ಖಾನ್, ಮಿಚೆಲ್ ಸ್ಟಾರ್ಕ್, ಟ್ರೆಂಟ್‌ ಬೌಲ್ಟ್, ಲಸಿತ್ ಮಲಿಂಗಾ. ಕ್ರಿಕೆಟ್ ಆಸ್ಟ್ರೇಲಿಯಾ ದಶಕದ ಟೆಸ್ಟ್ ತಂಡ: ಅಲ್‌ಸ್ಟೈರ್‌ ಕುಕ್‌, ಡೇವಿಡ್ ವಾರ್ನರ್, ಕೇನ್‌ ವಿಲಿಯಮ್ಸನ್, ಸ್ಟೀವ್ ಸ್ಮಿತ್, ವಿರಾಟ್‌ ಕೊಹ್ಲಿ (ನಾಯಕ), ಎ.ಬಿ ಡಿವಿಲಿಯರ್ಸ್‌, ಬೆನ್‌ ಸ್ಟೋಕ್ಸ್, ಡೇಲ್‌ ಸ್ಟೇನ್, ನಥಾನ್‌ ಲಿಯಾನ್ ಜೇಮ್ಸ್ ಅಂಡರ್ಸನ್.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.