ರೋಟರಿ ಕ್ಲಬ್ ಆಫ್ ಬೆಂಗಳೂರು ಪ್ರಸ್ತುತಪಡಿಸುತ್ತಿದೆ - “ವಿದ್ಯೆಗಾಗಿ ಕಲೆ”(ಕಲಾ ಫಾರ್ ವಿದ್ಯಾ).
ದುರ್ಬಲ ವರ್ಗದವರಿಗೆ ಉಜ್ವಲ ಭವಿಷ್ಯ ನೀಡುವುದಕ್ಕಾಗಿ ರೋಟರಿ ಕ್ಲಬ್ ಆಫ್ ಬೆಂಗಳೂರು ಪ್ರಸ್ತುತಪಡಿಸುತ್ತಿದೆ - “ವಿದ್ಯೆಗಾಗಿ ಕಲೆ”(ಕಲಾ ಫಾರ್ ವಿದ್ಯಾ).
ವಾರ್ಷಿಕ ಕಲಾ ಪ್ರದರ್ಶನ ಮತ್ತು ಮಾರಾಟವಾದ “ಕಲಾ ಫಾರ್ ವಿದ್ಯಾ” ಕಾರ್ಯಕ್ರಮದ ಉದ್ಘಾಟನೆಯನ್ನು ಲ್ಯಾವೆಲ್ಲೆ ರಸ್ತೆಯ ರೋಟರಿ ಕ್ಲಬ್ ಆಫ್ ಬೆಂಗಳೂರು ಹೆಮ್ಮೆಪಡುತ್ತಿದ್ದು. 2005ರಲ್ಲಿ ಪ್ರಾರಂಭಿಸಲಾದ ಹಾಗೂ ಜನ ಮೆಚ್ಚುಗೆ ಪಡೆದಿರುವ ಈ ಕಾರ್ಯಕ್ರಮವು ರೋಟರಿ ಬೆಂಗಳೂರು ವಿದ್ಯಾಲಯದಲ್ಲಿ (ಆರ್.ಬಿ.ವಿ.) ಹಿಂದುಳಿದ ಹಾಗೂ ಸಮಾಜದಲ್ಲಿನ ದುರ್ಬಲ ವರ್ಗದ ಮಕ್ಕಳ ಶಿಕ್ಷಣವನ್ನು ಬೆಂಬಲಿಸುವ ಗುರಿ ಹೊಂದಿದೆ. ಈ ವರ್ಷದ ಪ್ರದರ್ಶನದ ವಿಷಯವೆಂದರೆ “ಅಲ್ಪಕಾಲಿಕ ಶಾಶ್ವತತೆ, ನಿಸರ್ಗದ ಕಥೆಗಳು” ಎಂಬುದಾಗಿದೆ. ಉದಯೋನ್ಮುಖ ಪ್ರತಿಭೆಗಳ ಜೊತೆಗೆ ಭಾರತದ ಎಲ್ಲೆಡೆಯ ಪ್ರಸಿದ್ಧ ಕಲಾವಿದರು ಭಾಗವಹಿಸಲಿರುವ
ಈ ಕಾರ್ಯಕ್ರಮ ಕಲೆಗಳ ದರ್ಶನೀಯ ಪ್ರದರ್ಶನವಾಗಲಿದೆ. ಸಾಂಪ್ರದಾಯಿಕ ಕಲೆಗಳಿಂದ ಹಿಡಿದು ಸಮಕಾಲೀನ ಕಲೆಗಳವರೆಗಿನ ವೈವಿಧ್ಯಪೂರ್ಣ ಕಲಾ ಪ್ರಕಾರಗಳನ್ನು ಈ ಕಾರ್ಯಕ್ರಮ ಸಾದರಪಡಿಸಲಿದೆ. ತಮ್ಮ ಕೃತಿಗಳ ಮೂಲಕ, ಕಲಾವಿದರು ಸಾಗುತ್ತಿರುವ ಬದುಕಿನ ಸುಂದರ ಕ್ಷಣಗಳು, ಜೀವನದ ಸೂಕ್ಷ್ಮ ಸಮತೋಲನ ಮತ್ತು ಪ್ರಕೃತಿಯ ನಿರಂತರ ಶಕ್ತಿ ಮುಂತಾದವುಗಳ ಒಳಹೊಕ್ಕು ಬಿಂಬಿಸಲಿದ್ದಾರೆ. ಆರ್. ಬಿ. ವಿ. ಯಲ್ಲಿ ಹಿಂದುಳಿದ ಹಾಗೂ ಸಮಾಜದಲ್ಲಿನ ದುರ್ಬಲ ವರ್ಗದ ಹಿನ್ನೆಲೆಯ 540 ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಉಚಿತ ಸಮವಸ್ತ್ರ, ಆಹಾರ ಮತ್ತು ಪುಸ್ತಕಗಳನ್ನು ಪೂರೈಸಲು ರೋಟರಿ ಕ್ಲಬ್ ಆಫ್ ಬೆಂಗಳೂರು ಬದ್ಧವಾಗಿದೆ.
ಈ ಅರ್ಹ ಮಕ್ಕಳನ್ನು ಶಿಕ್ಷಣದ ಮೂಲಕ ಸಬಲೀಕರಿಸುವ ಕ್ಲಬ್ನ ಬದ್ಧತೆಗೆ “ಕಲಾ ಫಾರ್ ವಿದ್ಯಾ” ಸಾಕ್ಷಿಯಾಗಿದೆ. ಈ ಉದಾತ್ತ ಪ್ರಯತ್ನದಲ್ಲಿ ನಮ್ಮೊಂದಿಗೆ ಕೈಜೋಡಿಸುವಂತೆ ಕಲಾ ಉತ್ಸಾಹಿಗಳನ್ನು ಮತ್ತು ಶಿಕ್ಷಣದ ಬೆಂಬಲಿಗರನ್ನು ಆಹ್ವಾನಿಸುತ್ತಿದ್ದು. ನಾವೆಲ್ಲರೂ ಒಂದಾಗಿ ಈ ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ನೀಡುವುದ್ದಕ್ಕೆ ಕೈ ಜೋಡಿಸಬೇಕಾಗಿದೆ.
Recent comments