Skip to main content
ರಾಯಚೂರು  ರಾಜಕಾರಣಿಗಳ ನಿದ್ದೆಗೆಡಿಸಿದ ಚಿತ್ರನಟಿ ಪೂಜಾ ರಮೇಶ್

ರಾಯಚೂರು ರಾಜಕಾರಣಿಗಳ ನಿದ್ದೆಗೆಡಿಸಿದ ಚಿತ್ರನಟಿ ಪೂಜಾ ರಮೇಶ್

ರಾಯಚೂರು ರಾಜಕಾರಣಿಗಳ ನಿದ್ದೆಗೆಡಿಸಿದ ಚಿತ್ರನಟಿ ಪೂಜಾ ರಮೇಶ್

ರಾಯಚೂರು  ರಾಜಕಾರಣಿಗಳ ನಿದ್ದೆಗೆಡಿಸಿದ ಚಿತ್ರನಟಿ ಪೂಜಾ ರಮೇಶ್

ರಾಯಚೂರು ಸೆ. 24. ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆಗೆ ಸ್ಪರ್ಧಿಸಲು ರಾಜಕೀಯ ಪ್ರವೇಶ ಮಾಡಿರುವ ಚಿತ್ರನಟಿ. ಸಮಾಜ ಸೇವಕಿ .ವಸಂತ ಲಕ್ಷ್ಮಿ ಫೌಂಡೇಶನ್ ಅಧ್ಯಕ್ಷರಾದ ಡಾ. ಪೂಜಾ ರಮೇಶ್ ಅವರ ರಾಜಕೀಯ ಎಂಟ್ರಿಯಿಂದಾಗಿ ನಗರದ ರಾಜಕಾರಣಿಗಳಿಗೆ ನಿದ್ದೆಗೆಡಿಸಿದ್ದಾರೆ. ಅವರು ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವರು ಎನ್ನುವುದು ಇನ್ನೂ ನಿಗೂಢವಾಗಿಟ್ಟಿದ್ದಾರೆ. ಇದರಿಂದಾಗಿ ಮತ್ತಷ್ಟು ಕೂತುಹಲ ಹೆಚ್ಚಾಗಿದೆ ಈಗಾಗಲೇ ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಬಿಜೆಪಿ ಪಕ್ಷದ ಟಿಕೆಟ್ ಸಿಗುವುದಿಲ್ಲ ಎನ್ನುವುದು ಬಿಜೆಪಿ ವಲಯದಲ್ಲಿ ವದಂತಿ ಈಗಾಗಲೇ ಹರಿದಾಡುತ್ತಿದೆ. ಇದರಿಂದಾಗಿ ಡಾ. ಪೂಜಾ ರಮೇಶ ಅವರಿಗೆ ಈಗಾಗಲೇ ಬೆಂಗಳೂರಿನ ಸಾಕಷ್ಟು ಜನ ಹಿರಿಯ ನಾಯಕರುಗಳು ಮತ್ತು ರಾಜಕಾರಣಿಗಳು ಬಿಜೆಪಿ ಪಕ್ಷದವರು ಸಹ ಅವರ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿರುವುದರಿಂದ ಎಲ್ಲಿ ಬಿಜೆಪಿ ಪಕ್ಷದಿಂದಲೇ ಟಿಕೆಟ್ ತರುವವರು ಎನ್ನುವ ಗಾಸಿಪ್ ಹರಡಿದೆ .

ಆದರೆ ಮುಂದಿನ ವಿಜಯದಶಮಿ ನಂತರ ದೆಹಲಿಯ ಬಿಜೆಪಿಯ ಹೈಕಮಾಂಡಕ್ಕೆ ಭೇಟಿಯಾಗಲು ಎಲ್ಲಾ ರೀತಿಯಿಂದ ತಯಾರಿಯನ್ನು ಡಾ. ಪೂಜಾ ರಮೇಶ ಅವರು ಮಾಡಿಕೊಂಡಿದ್ದಾರೆ ಎಂದು ಅವರ ಆತ್ಮೀಯರಿಂದ ತಿಳಿದುಬಂದಿದೆ ಆಮ ಆದ್ಮಿ ಪಾರ್ಟಿಯಿಂದಲೂ ಸ್ಪರ್ಧೆ ಮಾಡುವ ಸಾಧ್ಯತೆಗಳು ಇವೆ ಎನ್ನುವಂತೆ ಕೇಳಿ ಬರುತ್ತಿದೆ. ಪೂಜಾ ರಮೇಶ್ ಅವರು ಇದೇ ವಿಜಯದಶಮಿ ಅಂಗವಾಗಿ ನವರಾತ್ರಿ ಉತ್ಸವದಲ್ಲಿ ಭಾಗವಹಿಸಿ ಟೆಂಪಲ್ ರನ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಇದೇ ವಾರ ರಾಯಚೂರಿಗೆ ಆಗಮಿಸಲಿದ್ದಾರೆ ಎಂದು ಪತ್ರಕರ್ತ ಮಾರುತಿ ಬಡಿಗೇರ್ ಈಶಾನ್ಯ ವಾರ್ತೆ ಪತ್ರಿಕೆಗೆ ತಿಳಿಸಿದ್ದಾರೆ.

ರಾಯಚೂರು  ರಾಜಕಾರಣಿಗಳ ನಿದ್ದೆಗೆಡಿಸಿದ ಚಿತ್ರನಟಿ ಪೂಜಾ ರಮೇಶ್

ಈ ಹಿಂದೆ 2018 ರಲ್ಲಿ ಚಿತ್ರನಟಿ ಪೂಜಾ ಗಾಂಧಿ ಸ್ಪರ್ಧಿಸಿ ಸೋತಿದ್ದರು .ಆದರೆ ಆ ನಟಿ ಉತ್ತರ ಭಾರತದವರಾಗಿದ್ದರಿಂದ ಸೋಲನ್ನು ಅನುಭವಿಸಿದರು .ಚಿತ್ರನಟಿ ಪೂಜಾ ರಮೇಶ್ ಅವರು ಚಿಕ್ಕಮಂಗಳೂರಿನ ಮಲೆನಾಡಿನ ಅಪ್ಪಟ ಕನ್ನಡತಿ .ಸಮಾಜ ಸೇವಕಿ ಆಗಿರುವುದರಿಂದ ಬೆನ್ನಿಗೆ ಮಹಿಳೆಯರು ಯುವಕರು ನಿಂತಿದ್ದಾರೆ ರಾಯಚೂರು ನಗರಕ್ಕೆ ವಿಜಯದಶಮಿಯ ಹಬ್ಬದ ಅಂಗವಾಗಿ ಪೂಜಾರಮೇಶ ಅವರು ಆಗಮಿಸುತ್ತಿರುವುದು ಅವರ ಅಭಿಮಾನಿಗಳು ಮತ್ತು ಅವರ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುವರು. ಒಟ್ಟಾರೆ ಮುಂಬರುವ ವಿಧಾನಸಭಾ ಚುನಾವಣೆಗೆ ರಾಯಚೂರ ಕ್ಷೇತ್ರದಿಂದ ಸ್ಪರ್ಧಿಸಲು ಎಲ್ಲಾ ರೀತಿಯಿಂದ ಪೂಜ ರಮೇಶ್ ಅವರು ಸಜ್ಜಾಗುತ್ತಿದ್ದಾರೆ. ರಾಜಕೀಯ ಪ್ರವೇಶ ಮಾಡಿರುವ ಚಿತ್ರನಟಿ ಪೂಜಾ ರಮೇಶ್ ಅವರು ಯಾವ ಪಕ್ಷಕ್ಕೆ ಸೇರುತ್ತಾರೆ ಯಾವ ಪಕ್ಷದಿಂದ ಟಿಕೆಟ್ ತರುತ್ತಾರೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.