Skip to main content
 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭ.

12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭ.

12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭ.

BIFF

ಬೆಂಗಳೂರು: 12ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಫೆ.26 ರಂದು ಬುಧವಾರ ಸಂಜೆ ಕಂಠೀರವ ಒಳಂಗಾಣ ಕ್ರೀಡಾಂಗಣದಲ್ಲಿಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದ್ದು, ಇದರ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ.ಬಿ.ಎಸ್.ಯಡಿಯೂರಪ್ಪನವರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ ಸ್ಯಾಡಂಲ್ ವುಡ್ ಚಿತ್ರರಂಗದ ಸಿನಿತಾರೆಗಳಾದ ನಟ ಯಶ್, ಖ್ಯಾತ ನಟಿ ಶ್ರೀ ಮತಿ ಜಯಪ್ರದಾ,ಬಾಲಿವುಡ್ ನ ಹೆಸರಾಂತ ನಿರ್ಮಾಪಕ ಶ್ರೀ ಬೋನಿಕಪೂರ್ ಹಾಗೂ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಂ ಮುಖ್ಯ ಅತಿಥಿಗಳಾಗಿರುತ್ತಾರೆ.

ಇನ್ನೂ ಕಾರ್ಯಕ್ರಮ ಫೆ.26 ರಿಂದ ಮಾರ್ಚ 4ರ ವರೆಗೆ ನಡೆಯಲಿದೆ, ಇದರ ಮುಕ್ತಾಯ ಸಮಾರಂಭ ಹಾಗೂ ಪ್ರಶಸ್ತಿಪ್ರದಾನ ಸಮಾರಂಭ ಇದೆ ದಿನ ಸಂಜೆ ನಡೆಯಲಿದೆ.ಉದ್ಘಾಟನ ಚಲನಚಿತ್ರವನ್ನಾಗಿ ಇರಾನಿ ಚಲನಚಿತ್ರ ನಿರ್ದೇಶಕ ಶಾಹಿದ್ ಅಹಮಡೇಲು ನಿರ್ದೇಶನದ “ ಸಿನಿಮಾ ಖಾರ್ “ ಸಿನಿಮಾ ಡಾಂಕಿ ಚಿತ್ರವನ್ನು ಉದ್ಘಾಟನಾ ಚಿತ್ರವಾಗಿ ಪ್ರದರ್ಶಿಸಲಾಗುವುದು. ಮುಕ್ತಾಯ ಸಮಾರಂಭ ಮಾ.4ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದ್ದು, ಏಶಿಯಾ, ಭಾರತೀಯ ಹಾಗೂ ಕನ್ನಡದ ಅತ್ಯುತ್ತಮ ಚಿತ್ರಗಳಿಗೆ ಗೌರವಾನ್ವಿತ ರಾಜ್ಯಪಾಲರು ವಝಬಾಯ್ ವಾಲಾ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಅಲ್ಲದೇ ಮುಕ್ತಾಯ ಚಲನಚಿತ್ರವಾಗಿ ಇಸ್ರೇಲಿನ ಇವೆಗಿನಿ ರುಮಾನ್ ನಿರ್ದೇನದ “ ಗೊವಾಯ್ಸ್ ಸ್” ಚಲಚಿತ್ರ ಪ್ರದರ್ಶಿಸಲಾಗುವುದು. ಚಿತ್ರ ಪ್ರದರ್ಶನಗಳ ವಿವರ. ಚಿತ್ರ ರಸಿಕರಿಗೆ ಪ್ರತಿನಿಧಿಗಳಿಗೆ ಫೆ.27 ರಿಂದ ಕೆಳಕಂಡ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ನಡೆಯಲಿದ್ದು ಪಿ.ವಿ.ಅರ್.ಸಿನಿಮಾಸ್ ಓರಾಯನ್ ಮಾಲ್ ಇಲ್ಲಿನ 11 ಪರದೆಗಳಲ್ಲಿ. ನವರಂಗ್ ಚಿತ್ರಮಂದಿರ, ರಾಜಾಜಿನಗರ. ಡಾ.ರಾಜ್ ಭವನ ,ಕನ್ನಡ ಕಲಾವಿದರ ಸಂಘ, ಚಾಮರಾಜ ಪೇಟೆ. ಸುಚಿತ್ರ ಫಿಲಂ ಸೊಸೈಟಿ,ಬನಶಂಕರಿ ಎರಡನೇ ಹಂತ. ದಲ್ಲಿ ಪ್ರದರ್ಶನ ನಡೆಯಲಿದ್ದು ಈ ಚಿತ್ರೋತ್ಸವದಲ್ಲಿ 60 ದೇಶಗಳ 225 ಚಿತ್ರಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶನಗೊಳ್ಳಲಿದೆ.

BIFF

ಚಿತ್ರೋತ್ಸವದ ಚಿತ್ರಗಳ ಪ್ರಮುಖ ಅಂಶಗಳು

1 ಸ್ಪರ್ಧಾ ವಿಭಾಗ: ಏಶಿಯನ್ ಸ್ಪರ್ಧಾ ವಿಭಾಗ ಭಾರತೀಯ ಚಿತ್ರಗಳ ವಿಭಾಗ ಕನ್ನಡ ಸ್ಪರ್ಧಾ ವಿಭಾಗ ಕನ್ನಡ ಜನಪ್ರಿಯಾ ಮನರಂಜನಾ ಚಿತ್ರಗಳ ವಿಭಾಗ 2 ಸಮಕಾಲೀನ ವಿಶ್ವ ಸಿನಿಮಾ 3 ದೇಶ ಕೇಂದ್ರಿತ : ಜರ್ಮನಿ, ಫಿಲಿಫೈನ್ಸ್, ಆಸ್ಟ್ರೇಲಿಯಾ ರಾಷ್ಟ್ರಗಳ ಚಿತ್ರಗಳು 4 ಪುನರವಲೋಕನ ವಿಭಾಗ: ರಷಿಯಾದ ನಿರ್ದೇಶಕ ಆಂದ್ರೆ ತಾರ್ಕೋವ್ಸ್ ಸ್ಕಿ ಬಹುಭಾಷಾ ನಟ ಅನಂತನಾಗ್ ಚಿತ್ರಗಳು 5 ಕೇಳರಿಯದ ಅದ್ಬುತ ಭಾರತ ವಿಭಾಗ : ಹೆಚ್ಚು ಪ್ರಚಾರವಿಲ್ಲದ ಭಾಷೆಗಳ ಚಿತ್ರಗಳು ಬರ್ಲಿನ್,ಕಾನ್,ವಿನಿಸ್,ಟೊರೆಂಟೊ,ಗೋವಾ,ಮುಂಬೈ ಮತ್ತು ಕೇರಳ ಅಂತಾರಾಷ್ಟೀಯ,ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡ ವಿಶ್ವ ಸಿನಿಮಾಗಳು ಈ ಬಾರಿ ಬೆಂಗಳೂರು ಚಿತ್ರೋತ್ಸವದಲ್ಲಿವೆ.

ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕ ಒಕ್ಕೂಟ ,ಪ್ರಶಸ್ತಿವಿಜೇತ ಹಾಗೂ ಏಷ್ಯಾ ಚಲನಚಿತ್ರ ಪ್ರಚಾರ ಜಾಲ ಪ್ರಶಸ್ತಿವಿಜೇತ ಆಯ್ದು ಚಿತ್ರಗಳ ಪ್ರದರ್ಶನ ಈ ಉತ್ಸವದ ವಿಶೇಷತೆಗಳಲ್ಲಿ ಸೇರಿದೆ. “ಭಾರತೀಯ ಸಾಂಪ್ರದಾಯಿಕ ಸಂಗೀತ ಪರಂಪರೆ ಮತ್ತು ಸಿನಿಮಾ ಇದು ಚಿತ್ರೋತ್ಸವದ ಮುಖ್ಯವಸ್ತುವಾಗಿದ್ದು, ಇದರಲ್ಲಿ ಸಂಗೀತ ಆತ್ಮಕಥೆ ಆಧಾರಿತ ಚಿತ್ರಗಳು,ಸಂಗೀತ ಪ್ರಧಾನ ಚಿತ್ರಗಳು ಪ್ರದರ್ಶನಗೊಳ್ಳಲಿವೆ.ಆತ್ಮಚರಿತ್ರೆ ಆಧರಿಸಿದ ಬಯೋಪಿಕ್ ಗಳು ಈ ಸಲದ ಚಿತ್ರೋತ್ಸವದಲ್ಲಿ ವಿಶೇಷ. ರಷ್ಯಾದ ನಿರ್ದೇಶಕ ತಾರ್ಕೋವೆಸ್ಕಿ,ಗಾಯಕಿ ಹೆಲನ್ ರೆಡ್ಡಿ,ಕನ್ನಡದ ಜನಪ್ರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ,ಡಾ.ಚಂದ್ರಶೇಖರ ಕಂಬಾರ. ಹಿಂದೂಸ್ತಾನಿ ಸಂಗೀತ ಸಾಮ್ರಾಟ ಡಾ.ರಾಜೀವ ತಾರಾನಾಥ್,ಶ್ರೀ ಮತಿ ಲಲಿತರಾವ್ ಮತ್ತು ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರುಗಳು ಸಾಕ್ಷ್ಯ ಚಿತ್ರಗಳಿರುತ್ತವೆ.

ಚಲನಚಿತ್ರ ಕಾರ್ಯಗಾರ ,ವಿಚಾರ ಸಂಕಿರ ಹಾಗೂ ಮಾಸ್ಟರ್ ಕ್ಲಾಸ್ ಗಳು ಪಿವಿಆರ್ ನ ಒಂದು ಚಿತ್ರಮಂದಿರದಲ್ಲಿ ನಡೆಯಲಿದೆ. ಚಿತ್ರೋತ್ಸವ ಹಾಗೂ ಇನ್ನಿತರ ಎಲ್ಲಾ ವಿವರಗಳನ್ನು ಚಲನಚಿತ್ರ ಅಕಾಡೆಮಿಯ ಅಧಿಕೃತ ಜಾಲತಾಣದಲ್ಲಿ ನೋಡಬಹುದು. ಚಿತ್ರೋತ್ಸವದಲ್ಲಿ ಪಶ್ಚಿಮ ಬಂಗಾಳ,ಮಹಾರಾಷ್ಟ್ರ.ರಾಜಾಸ್ತಾನ,ದೆಹಲಿ,ತೆಲಂಗಾಣ,ಕೇರಳ,ಹಾಗೂ ತಮಿಳುನಾಡುಗಳಿಂದ ಚಲನಚಿತ್ರ ನಿರ್ಮಾಪಕರು,ಚಲನಚಿತ್ರ ಉತ್ಸವ ಸಂಘಟಕರು,ಪತ್ರಕರ್ತರು,ಚಲನಚಿತ್ರ ವಿಮರ್ಶಕರು ಪ್ರತಿನಿಧಿಗಳಾಗಿ ಆಗಮಿಸುತ್ತಿದ್ದಾರೆ.ಅಲ್ಲದೆ ವಿದೇಶಗಳಿಂದ ಕೂಡ ಸಿನಿಮಾ ನಿರ್ಧೇಶಕರು ,ತಂತ್ರಜ್ಞರು ಆಗಮಿಸುತ್ತಿದ್ದಾರೆ.ಬುಕ್ ಮೈ ಶೋ ಜಾಲತಾಣದ ಮೂಲಕ ಪ್ರತಿನಿಧಿಗಳ ನೊಂದಣಿ ಫ್ರೆಬ್ರವರಿ 24ರ ವರೆಗೆ ಇರುತ್ತದೆ.ಫೆ.26 ರವರೆಗೆ ನಂದಿನಿ ಲೇಔಟ್ ನಲ್ಲಿರುವ ಚಲನಚಿತ್ರೋತ್ಸವ ಕಚೇರಿ, ಚಲಚಿತ್ರ ಅಕಾಡೆಮಿ,

ಕನ್ನಡ ಚಲಚಿತ್ರ ಅಮೃತೋತ್ಸವ ಭವನ, ವರ್ತಲ ರಸ್ತೆ, ನಂದಿನಿ ಬಡಾವಣೆ ಬೆಂಗಳೂರು ಇಲ್ಲಿ ನೊಂದಣಿ ಮಾಡಿಕೊಳ್ಳಬಹುದು. ಪ್ರತಿನಿಧಿ ಶುಲ್ಕ ಸಾರ್ವಜನಿಕರಿಗೆ ರೂ 800 ವಿದ್ಯಾರ್ಥಿಗಳಿಗೆ ಹಾಗೂ ಫಿಲಂ ಸೊಸೈಟಿ ಸದಸ್ಯರಿಗೆ ಹಾಗೂ ಕರ್ನಾಟಕ ವಾಣಿಜ್ಯ ಮಂಡಳಿ ಸದಸ್ಯರಿಗೆ ರೂ 400.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.