ಮುಂದಿನ ಪೀಳಿಗೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ಶಿಕ್ಷಣ ವ್ಯವಸ್ಥೆಯ ಬದಲಾವಣೆ ಅನಿವಾರ್ಯ: ಪ್ರಾಂಶುಪಾಲರ ಒಮ್ಮತ
ಮುಂದಿನ ಪೀಳಿಗೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ಶಿಕ್ಷಣ ವ್ಯವಸ್ಥೆಯ ಬದಲಾವಣೆ ಅನಿವಾರ್ಯ: ಪ್ರಾಂಶುಪಾಲರ ಒಮ್ಮತ .
ಬೆಂಗಳೂರು, 21 ಡಿಸೆಂಬರ್ 2019: ಇತ್ತೀಚಿನ ಶಿಕ್ಷಣ ವ್ಯವಸ್ಥೆಯುವು ಮುಂದಿನ ಪೀಳಿಗೆಯ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಕುಂಠಿತವಾಗುತ್ತಿದೆ. 21ನೇ ಶತಮಾನಕ್ಕೆ ಮುಂದಿನ ಪೀಳಿಗೆಯನ್ನು ಸಿದ್ಧಪಡಿಸುವಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಗಳು ಕುಸಿಯುತ್ತಿವೆ. ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದ ನಡುವಿನ ಅಂತರವನ್ನು ನಿವಾರಿಸುವ ಸಲುವಾಗಿ ಇಂದು "ಏಟ್ರಿಯಾ ವಿಶ್ವವಿದ್ಯಾಲಯ"ವು ರ್ಯಾಡಿಸನ್ ಬ್ಲೂ ಏಟ್ರಿಯಾ ಹೋಟೆಲ್ನಲ್ಲಿ "ಪ್ರಾಂಶುಪಾಲರ ಸಮಾವೇಶ" ("ಪ್ರಿನ್ಸಿಪಾಲ್ ಕಾನ್ಕ್ಲೇವ್) ಆಯೋಜಿಸಿತ್ತು. ಈ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಎಂಐಟಿಯ ನ್ಯೂ ಇಂಜಿನಿಯರಿಂಗ್ ಎಜುಕೇಷನ್ ಟ್ರಾನ್ಸ್ ಫರ್ಮೇಷನ್ ಪ್ರೋಗ್ರಾಮ್ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಬಾಬಿ ಮಿತ್ರ ಮಾತನಾಡಿ, "ವಿದ್ಯಾರ್ಥಿ ಮತ್ತು ಬೋಧನಾ ಸಮುದಾಯದ ಮೇಲೆ ವಿಶ್ವಾಸವನ್ನು ಬೆಳೆಸುವ ನಿಟ್ಟಿನಲ್ಲಿ ಏಟ್ರಿಯಾ ವಿಶ್ವವಿದ್ಯಾಲಯವು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನಾರ್ಹ. ಇಂದಿನ ವಿದ್ಯಾರ್ಥಿಗಳಲ್ಲಿ ಭವಿಷ್ಯದ ಬಗ್ಗೆ ದೂರದೃಷ್ಟಿ ಹೊಂದುವುದನ್ನು ಕಲಿಸಬೇಕು. ಆತ್ಮವಿಶ್ವಾಸ, ಕುತೂಹಲ ಮತ್ತು ಸೃಜನಶೀಲ-ಪರಿಹಾರ ಚಾಲಕರಾಗಿ ವಿಕಸನಗೊಳ್ಳಲು ಅವರನ್ನು ಸಜ್ಜುಗೊಳಿಸಬೇಕಾಗಿದೆ. ಸವಾಲುಗಳನ್ನು ಎದುರಿಸಲು ಮತ್ತು ಅವುಗಳನ್ನು ಯಾವುದೇ ಸಂದರ್ಭದಲ್ಲಾದರೂ ಅವಕಾಶಗಳಾಗಿ ಪರಿವರ್ತಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವ ರೀತಿಯಲ್ಲಿ ಅವರನ್ನು ಬಲಿಷ್ಠಗೊಳಿಸಬೇಕು," ಎಂದರು.
ಕಲಿಕೆಯನ್ನು ಹೆಚ್ಚು ಆಕರ್ಷಕವಾಗಿ ಮಾಡಲು ಆರು ವಿಚಾರಗಳು ಅತ್ಯಂತ ಪರಿಣಾಮಕಾರಿ. ವಿಷನ್, ಸಬಲವಾದ ತಂಡ, ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ತರುವ ಶಿಕ್ಷಣ ಸೇರಿದಂತೆ ಹಲವು ಅಂಶಗಳು ಶಿಕ್ಷಣದಲ್ಲಿ ಸೇರಿಬೇಕಿರುವುದು ಅತ್ಯಂತ ಅವಶ್ಯಕ ಎಂದು ಅವರು ಹೇಳಿದರು. ನಂತರ ಮಾತನಾಡಿದ ಆಟ್ರಿಯಾ ವಿಶ್ವವಿದ್ಯಾಲಯದ ಸ್ಥಾಪಕ ಮತ್ತು ಟ್ರಸ್ಟಿ ಶ್ರೀ ಸುಂದರ್ ರಾಜು, “ವಿದ್ಯಾರ್ಥಿ ಕೇಂದ್ರಿತ ಕಲಿಕೆಯ ಅನುಭವವನ್ನು ವಿನ್ಯಾಸಗೊಳಿಸುವ ಕುರಿತು ಒಳನೋಟವುಳ್ಳ ಚರ್ಚೆಗಳೊಂದಿಗೆ ಆಲೋಚಿಸುವ ಮತ್ತು ತೊಡಗಿಸಿಕೊಳ್ಳುವ ಅವಶ್ಯಕತೆ ಇದೆ," ಎಂದರು. ಪ್ರಿನ್ಸಿಪಾಲ್ ಕಾನ್ಕ್ಲೇವ್ ಮೂಲಕ, ವಿದ್ಯಾರ್ಥಿಗಳಿಗೆ ಕಲಿಕೆಯ ವಿನ್ಯಾಸವನ್ನು ಸುಗಮಗೊಳಿಸುವ ಪ್ರಕ್ರಿಯೆಯನ್ನು ನಾವು ರಚಿಸಬೇಕೆಂದು ಬಯಸುತ್ತೇವೆ. ಮಗುವು ಹೊಸ ಹೆಜ್ಜೆ ಇಡಲು ಅದಕ್ಕೆ ಬೇಕಾದ ಸ್ಥೈರ್ಯ ನೀಡಲಾಗುತ್ತದೆಯೋ ಹಾಗೆಯೇ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ನೀಡಬೇಕು ಎಂದು ಅಭಿಪ್ರಾಯಪಟ್ಟರು. ಏಟ್ರಿಯಾ ವಿಶ್ವವಿದ್ಯಾಲಯದಲ್ಲಿ ವಿಧ್ಯಾರ್ಥಿಗಳು ತಮ್ಮ ಕಾಲುಗಳ ಮೇಲೆ ನಿಲ್ಲಬಲ್ಲ ಉತ್ತಮ ಪ್ರಜೆಯಾಗಿ ರೂಪಿಸುವ ಉನ್ನತ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.
ಏಟ್ರಿಯಾ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಅವರ ಕಲಿಕೆಯ ಪ್ರಯಾಣವನ್ನು ಹೆಚ್ಚು ವೈಯಕ್ತಿಕವಾಗಿ ಮರುಸೃಷ್ಟಿಸಲು ಕೆಲಸ ಮಾಡುತ್ತಿದೆ. ಅವರ ಸೃಜನಶೀಲ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸಲು ವೈಯಕ್ತಿಕ ಕಲಿಕೆಯ ಮಾರ್ಗಗಳನ್ನು ಸಹ ನಮ್ಮ ಸಂಸ್ಥೆ ರಚಿಸುತ್ತಿದೆ ಎಂದರು. ಸಮಾವೇಶದಲ್ಲಿ ಭಾಗವಹಿಸಿದ ಡೆಕ್ಕನ್ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಅನುರಾಧಾ ಅನೆಕಲ್ ಮಾತನಾಡಿ, "ಈ ದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ವೈವಿಧ್ಯಮಯ ವಿಷಯಗಳಿಗೆ ಒಡ್ಡಿಕೊಳ್ಳುತ್ತಾರೆ. ಅವರ ಬೆರಳ ತುದಿಯಲ್ಲಿರುವ ಮಾಹಿತಿಯೊಂದಿಗೆ, ಅವರು ತಮಗೆ ಬೇಕಾದ ವಿಚಾರಗಳನ್ನು ಆಯ್ಕೆ ಮಾಡಲು ಅವರು ಸಮರ್ಥರಾಗಿದ್ದಾರೆ ಎಂದರು. ಎಲ್ಲಾ ಕಾಲೇಜುಗಳ ಪ್ರಾಂಶುಪಾಲರ ಸಮಾವೇಶವು ಅತ್ಯಂತ ಉಪಯುಕ್ತವಾಗಿದೆ.
ವಿಭಿನ್ನ ವಿಧಾನಗಳಿಗೆ ದಾರಿ ತೋರಿಸಿದೆ ಮತ್ತು ಕಲಿಕೆಯ ಅನುಭವದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಶಿಕ್ಷಣ ತಜ್ಞರಿಗೆ ಸಹಾಯ ಮಾಡಿದೆ," ಎಂದು ಅಭಿಪ್ರಾಯ ಪಟ್ಟರು. ಸಮಾವೇಶದಲ್ಲಿ ಶಿಕ್ಷಣ ತಜ್ಞರಾದ ಡಾ. ಅಲಾನಾ ಸೊಬೆಲ್ಮನ್, ಇಸ್ರೆಲ್ನ ನೆಗೆವ್ ಇನ್ ಬಿ ವಿಶ್ವವಿದ್ಯಾಲಯದ ಉಪನ್ಯಾಸಕ "ಬೆನ್-ಗುರಿಯನ್" , ಅಮೇರಿಕದ ಕಾರ್ಲೆಟನ್ ಕಾಲೇಜಿನ ಮಾಜಿ ಸಹಾಯಕ ಡೀನ್ ಡಾ. ಅರ್ಜೆಂಡು ಪಟ್ಟನಾಯಕ್, ಫ್ಲೋರಿಡಾ ವಿಶ್ವವಿದ್ಯಾಲಯದ ಏರೋಸ್ಪೇಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಡಾ. ನಾಗರಾಜ್ ಕೆ. ಅರಕೆರೆ, ಫ್ಲೋರಿಡಾ ವಿಶ್ವವಿದ್ಯಾಲಯದ ಟೆಕ್ ಲ್ಯಾಬ್ ಡಾ. ಶ್ರೀರಾಮ್ ಕಲ್ಯಾಣರಾಮನ್ ಸೇರಿದಂತೆ ದೇಶಾದ್ಯಂತ 50 ಕ್ಕೂ ಹೆಚ್ಚು ಪ್ರಾಂಶುಪಾಲರು ಮತ್ತು ಜಗತ್ತಿನಾದ್ಯಂತದ ಶಿಕ್ಷಣ ತಜ್ಞರು ಸಮಾವೇಶದಲ್ಲಿ ಹಾಜರಾಗಿದ್ದರು. ಆಟ್ರಿಯಾ ವಿಶ್ವವಿದ್ಯಾಲಯವು ಈ ದಿನವಿಡೀ ನಡೆದ ಸಮಾವೇಶದ ಮೂಲಕ, ಕಲಿಕೆಯ ಹೊಸ ವಿನ್ಯಾಸವನ್ನು ರಚಿಸುವ ಗುರಿ ಹೊಂದಿರುವುದು ತಿಳಿಸಿತು. ಇದು ಮಾಧ್ಯಮಿಕ ಶಾಲಾ ಕಲಿಕೆಯಿಂದ ಉನ್ನತ ಶಿಕ್ಷಣ ಕಲಿಯಲು ಬರುವ ವಿದ್ಯಾರ್ಥಿಗಳ ಪರಿವರ್ತನೆಗೆ ಹೆಚ್ಚು ಉಪಕಾರಿಯಾಗಲಿದೆ. ಉನ್ನತ ಶಿಕ್ಷಣಕ್ಕೆ ಕಾಲಿಡುವ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ವಿಶ್ವವಿದ್ಯಾಲಯಗಳ ಪಾತ್ರದ ಬಗ್ಗೆಯೂ ಬೆಳಕು ಚೆಲ್ಲಲಾಯಿತು. ಶಿಕ್ಷಣ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಯ ಅನಿವಾರ್ಯತೆ, ಕೆಲಸಲಹೆಗಳು ಸಹ ಕೇಳಿ ಬಂದವು. ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಣ ವ್ಯವಸ್ಥೆಯ ಬದಲಾವಣೆಯ ಬಗ್ಗೆಯೂ ಚರ್ಚೆಗಳಾದವು.
Recent comments