Skip to main content
ವಿದ್ವತ್ ಇನ್ನೋವೇಟಿವ್ ಸಲ್ಯೂಷನ್ಸ್.

ವಿದ್ವತ್ ಇನ್ನೊವೆಟಿವ್ ಸೆಲ್ಯೂಷನ್.

ವಿದ್ವತ್ ಪ್ರತಿ ವಿದ್ಯಾರ್ಥಿಯ ಹ್ಯಾಪ್ ಮೈಸೂರು ಮೂಲದ ವಿದ್ವತ್ ಇನ್ನೊವೆಟಿವ್ ಸೆಲ್ಯೂಷನ್.

ವಿದ್ವತ್ ಇನ್ನೋವೇಟಿವ್ ಸಲ್ಯೂಷನ್ಸ್.

ಸಂಸ್ಥೆಯು ವಿದ್ಯಾರ್ಥಿಗಳಿಗೆ ಆಧುನಿಕತೆಯ ಸದ್ಬಳಕೆಯೊಂದಿಗೆ ಉತ್ತಮವಾದ ಶೈಕ್ಷಣಿಕ ವಿಷಯಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗೊ ತಲುಪಿಸುವ ಸದುದ್ದೇಶದಿಂದ ವಿನ್ಯಾಸ ಗೊಳಿಸಿರುವ ವಿದ್ವತ್ ಅಪ್ ಗೆ ಹಿರಿಯ ನಟ ಹಾಗೂ ಅಪ್ ನ ರಾಯಬಾರಿ ರಮೇಶ್ ಅರವಿಂದ್ ಬೆಂಗಳೂರಿನಲ್ಲಿ ಚಲಾನೆ ನೀಡಿದರು. 1 ನೇ ತರಗತಿಯಿಂದ 10 ನೇ ತರಗತಿಯವರೆಗೆ ರಾಜ್ಯ ಹಾಗೂ ಕೇಂದ್ರೀಯ ಪಠ್ಯ ಕ್ರಮಗಳನ್ನು ಒಳಗೊಂಡ ಅಪ್ ನಲ್ಲಿ ಮಕ್ಕಳ ಶೈಕ್ಷಣಿಕ ಪಠ್ಯ ಕ್ರಮಗಳ ಪ್ರತಿಯೊಂದು ವಿಷಯಗಳ ಮಾಹಿತಿಯು ಲಭ್ಯವಿರುವ ರೀತಿಯಲ್ಲಿ ವಿನ್ಯಾಸಗೊಳಿಸಿರುವುದು ಅಪ್ ನ ವಿಶೇಷವಾಗಿದೆ ಅಲ್ಲದೆ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವೇರಿಚು ಯಲ್ ರಿಯಾಲಿಟಿ ತಂತ್ರಜ್ಞಾನ ದ ಬಳಕೆಯಿಂದ ಮಕ್ಕಳಿಗೆ ಶೈಕ್ಷಣಿಕ ವಿಷಯಗಳ ಬಗ್ಗೆ ವಿಚಾರಗಳನ್ನು ತಲುಪಿಸುವ ಯೋಜನೆ ಹೊಂದಿದ್ದೇವೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಶ್ರೀಯುತ ರೋಹಿತ್ ಎಂ.ಪಾಟೀಲ್ ತಿಳಿಸಿದರು.

ವಿದ್ವತ್ ಇನ್ನೋವೇಟಿವ್ ಸಲ್ಯೂಷನ್ಸ್.

ವಿಶೇಷ ಅಪ್ ಗೆ ಚಲಾನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಪ್ ನ ರಾಯಬಾರಿ ರಮೇಶ್ ಅರವಿಂದ್ ತಂತ್ರಜ್ಞಾನ ದ ಬದಲಾದ ದಿನಮಾನಗಳಲ್ಲಿ ಅದರ ಬಳಕೆಯು ಸಹ ಅತ್ಯಂತ ಪ್ರಯೋಜನಾತ್ಮಕವಾಗಿರಬೇಕು ಇನ್ನು ಪ್ರತಿ ನಿತ್ಯದ ಜೀವನ ಜಂಜಾಟದೊಂದಿಗೆ ಮಕ್ಕಳಿಗೆ ಅಗತ್ಯವಾದ ವಿದ್ಯಾಭ್ಯಾಸ ನೀಡುವುದು ನಮ್ಮೆಲ್ಲರ ಕರ್ತವ್ಯ . ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಅಗತ್ಯ ಎಲ್ಲ ವಿಷಯಗಳನ್ನು ಹೊಂದಿರುವ ಈ ಅಪ್ ಅತ್ಯಂತ ಉಪಯುಕ್ತಕರವಾಗಿದ್ದು ಪ್ರತಿಯೊಬ್ಬರು ಇದರ ಸದುಪಯೋಗ ಪಡೆಯುವಲ್ಲಿ ಸಾಧ್ಯವಾಗಲಿ ಎಂದರು.

ಏನಿದು ವಿದ್ವತ್ ಇನ್ನೋವೇಟಿವ್ ಸಲ್ಯೂಷನ್ಸ್. ?

ವಿದ್ವತ್ ಇನ್ನೋವೇಟಿವ್ ಸಲ್ಯೂಷನ್ಸ್.

ವಿದ್ವತ್ ಇನ್ನೋವೇಟಿವ್ ಸಲ್ಯೂಷನ್ಸ್ ಕಂಪನಿಯು ಶ್ರೀಯುತ ರೋಹಿತ್ ಎಂ.ಪಾಟೀಲ್ ರವರಿದ 2012 ರಲ್ಲಿ ಸ್ಥಾಪಿಸಲ್ಪಟ್ಟಿತ್ತು. ಇವರು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿಯ ಜೊತೆಗೆ ಮಾರ್ಕೇಟಿಂಗ್ ನಲ್ಲಿ ಎಂ.ಬಿ.ಎ ಸ್ನಾತಕೋತ್ತರ ಪದವಿಯನ್ನೂ ಸಹ ಪಡೆದಿದ್ದಾರೆ. ಇವರು ತಮ್ಮ ವೃತ್ತಿ ಜೀವನವನ್ನು ಹಾರ್ಡ್ ವೇರ್ ಗಳನ್ನು ಮಾರುವ ಮೂಲಕ ಆರಂಭಿಸಿ ಇಂದು ಒಬ್ಬ ಯಶಸ್ವಿ ಉದ್ಯಮಶೀಲರಾಗಿದ್ದಾರೆ.

ವಿದ್ವತ್ ಇನ್ನೋವೇಟಿವ್ ಸಲ್ಯೂಷನ್ಸ್ನ ಪ್ರಧಾನ ಕಛೇರಿ ಮೈಸೂರಿನಲ್ಲಿದೆ, ಅಲ್ಲದೆ ಬೆಳಗಾಂ, ಬಳ್ಳಾರಿ, ಗದಗ, ಬಾಗಲಕೋಟೆಯಲ್ಲಿ ಉಪಶಾಖೆಗಳನ್ನು ಹೊಂದಿದೆ, ಕೆಲವೇ ಕೆಲವು ಶಾಲೆಗಳಿಂದ ಪ್ರಾರಂಭವಾದ ವಿದ್ವತ್ ಈಗ 6.5 ಲಕ್ಷ ವಿದ್ಯಾರ್ಥಿಗಳು ಮತ್ತು ಸುಮಾರು 3.500 ಶಾಲೆಗಳಿಗೆ ಸೇವೆ ಸಲ್ಲಿಸುತ್ತಾ ಉತ್ತಮ ಹಾದಿಯಲ್ಲಿ ಸಾಗುತ್ತಿದೆ. ಸಿ.ಬಿ.ಎಸ್.ಇ ಮತ್ತು ಕರ್ನಾಟಕ ರಾಜ್ಯ ಪಠ್ಯಕ್ರಮವನ್ನು ಡಿಜಿಟಲ್ ಶಿಕ್ಷಣ ತಂತ್ರಜ್ಞಾನದ ಆಧಾರದ ಮೇಲೆ 1 ರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ತಲುಪಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ರೇತ್ರವು ಇಂಗ್ಲೀಷ್ ಮಧ್ಯಮವನ್ನು ಕೇಂದ್ರಿಕರಿಸುತ್ತಿದೆ, ಆದರೆ ವಿದ್ವತ್ ಇಂಗ್ಲೀಷ್ ಮಾಧ್ಯಮದ ಜೊತೆಗೆ ಪಾದೇಶಿಕ ಭಾಷೆಗಳಾದ ಕನ್ನಡ ಮತ್ತು ಉದ ಭಾಷೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಮೂಲಕ ಶಿಕ್ಷಣ ಹಕ್ಕು ಕಾಯ್ಡೆ ಅನ್ವಯ “ಎಲ್ಲರಿಗೂ ಶಿಕ್ಷಣ” ಎಂಬ ಆಶಯವನ್ನು ಪೂರ್ಣಗೊಳಿಸುವ ಹಾದಿಯತ್ತ ಸಾಗುತ್ತಿದೆ. ವಿದ್ವತ್ ಡಿಜಿಟಲ್ ಶಿಕ್ಷಣವನ್ನು ಎಲ್ಲಾ ಸ್ಥಳಗಳಿಗೆ ತಲುಪಿಸುವ ಕಾರ್ಯ ಮಾಡುವ ಜೊತೆಗೆ, ದೃಶ್ಯಮಾಧ್ಯಮ ಕಲಿಕ, 2ಡಿ ಮತ್ತು 3ಡಿ ಅನಿಮೇಷನ್ ಗಳನ್ನು ಅತ್ಯನ್ನತ ತಂತ್ರಜ್ಞಾನದೊಂದಿಗೆ ನೀಡಿ ಶಿಕ್ಷಣಕ್ಕೆ ಸಂಬಂಧಿಸಿದ ಮನರಂಜನಾ ಚಟುವಟಿಕೆಗಳನ್ನು ಕೂಡ ಒದಗಿಸುತ್ತಿದೆ.

ವಿದ್ವತ್ ಇನ್ನೋವೇಟಿವ್ ಸಲ್ಯೂಷನ್ಸ್.

ವಿದ್ವತ್ ನ ಈ ಯಶಸ್ಸಿಗೆ ಕಾರಣ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಎಲ್ಲಾ ಉದ್ಯೋಗಿಗಳ ಕಠಿಣ ಪರಿಶ್ರಮವಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ಡಿಜಿಟಲ್ ಶಿಕ್ಷಣ ತಂತ್ರಜ್ಞಾನವನ್ನು ರೂಪುಗೊಳಿಸಿ, ಎಲ್ಲರಿಗೂ ಡಿಜಿಟಲ್ ಶಿಕ್ಷಣ ತಂತ್ರಜ್ಞಾನವನ್ನು ಒದಗಿಸುವುದೇ ನಮ್ಮ ಕಂಪನಿಯ ಮುಖ್ಯ ಧ್ಯೇಯ. ವಿದ್ವತ್ ಆ್ಯಪ್ ನಿಮ್ಮ ಕಲಿಕೆಗೆ ಒಂದು ರೋಮಾಂಚನಕಾರಿ ವೇದಿಕೆಯನ್ನು ಒದಗಿಸುತ್ತದೆ. ಪರಿಕಲ್ಪನೆಗಳನ್ನು ಕಲಿಯುವುದು ಎಂದಿಗೂ ಸುಲಭ ಮತ್ತು ವಿನೋದಮಯವಾಗಿರುವುದಿಲ್ಲ. ವಿದ್ವತ್ ಆ್ಯಪ್ ನಿಮಗೆ 1 ರಿಂದ 10ನೇ ತರಗತಿಯವರೆಗಿನ ವಿನ್ಯಾಸಗೊಳಿಸಿದ ಪಠ್ಯಕ್ರಮಗಳ ಎಲ್ಲಾ ವಿಷಯಗಳ ಘಟಕಗಳನ್ನೂ ಒದಗಿಸುತ್ತದೆ. ದೃಶ್ಯಮಾಧ್ಯಮದಿಂದ ಸಮೃದ್ಧಿಗೊಂಡಿರುವ ವಿಷಯವು ಮಗುವಿನ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವ ಜೊತೆಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ. ಪರಿಕಲ್ಪನೆಗಳ ಚಿತ್ರಾತ್ಮಕ ನಿರೂಪಣೆಯು ಹೆಚ್ಚಿನ ಅಭಿವೃದ್ಧಿ ಹಾಗೂ ಪರಿಕಲ್ಪನೆಗಳ ಗ್ರಹಿಕೆಗಾಗಿ ಪೋಷಕರು ತಮ್ಮ ಮಗುವಿನ ಆಲೋಚನೆಗಳನ್ನು ಸಂಘಟಿಸಲು ಮತ್ತು ಸಂಶ್ಲೇಪಿಸಲು ಸಹಾಯ ಮಾಡುತ್ತದೆ. ನಮ್ಮ ಆ್ಯಪ್ ನ ಆಕರ್ಷಕವಾಗಿರುವ ವಿಷಯಗಳನ್ನು ಉತ್ಸಾಹಭರಿತ ಆಯಾ ವಿಷಯಗಳ ವಿಷಯ ತಜ್ಞರು ತಮ್ಮ ಪರಿಣಿತ ಅನಿಮೇಟರ್ ಗಳ ತಂಡವು ಅಭಿವೃದ್ಧಿಪಡಿಸಿದೆ.

ವಿದ್ವತ್ ಇನ್ನೋವೇಟಿವ್ ಸಲ್ಯೂಷನ್ಸ್.

ನಮ್ಮ ಮುಖ್ಯ ಗುರಿ ವಾಸಸ್ಥಳ ಅಥವಾ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ, ಪ್ರತಿ ಮಗುವಿನ ನಿಜವಾದ ಸಾಮರ್ಥ್ಯ ಮತ್ತು ಕಲಿಕೆಯ ಮೇಲಿನ ಆಸಕ್ತಿಯನ್ನು ತಿಳಿದುಕೊಳ್ಳುವುದಾಗಿದೆ. ವೈಶಿಷ್ಟ್ಯಗಳು ಒಳಗೊಂಡಿರುವ ಮಾಧ್ಯಮಗಳು ಇಂಗ್ಲೀಷ್, ಕನ್ನಡ ಮತ್ತು ಉರ್ದು ಪಠ್ಯಕ್ರಮ ಕರ್ನಾಟಕ ರಾಜ್ಯ ಪಠ್ಯಕ್ರಮ ಮತ್ತು ಸಿ.ಬಿ.ಎಸ್.ಇ ಪಠ್ಯಕ್ರಮ ಕಲಿಕಾ ಮಾಡ್ಯೂಲ್ ಗಳು ದೃಶ್ಯ ಮಾಧ್ಯಮ ಕಲಿಕೆಯು 1 ರಿಂದ 10ನೇ ತರಗತಿಯ ಪಠ್ಯಪುಸ್ತಕಗಳ ಎಲ್ಲಾ ವಿಷಯಗಳನ್ನು ಒಳಗೊಂಡಿರುತ್ತದೆ. ಮಗುವಿನ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸಲು ಪರಿಕಲ್ಪನಾಧಾರಿತ ಅನಿಮೇಷನ್ ಗಳನ್ನು ನೀಡಲಾಗಿದೆ. ಪ್ರಶ್ನೋತ್ತಗಳ ಮೂಲಕ ಪಠ್ಯಪುಸ್ತಕದ ಪ್ರಶ್ನೇಗಳಿಗೆ ಉತ್ತರ ನೀಡಲಾಗಿದೆ. ಪ್ರಶ್ನೆಕೋಠಿಯಲ್ಲಿ ನಾವು ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪ್ರಶ್ನೋತ್ತರಗಳನ್ನು ನೀಡಿದ್ದೇವೆ. ಹೆಚ್ಚುವರಿ ಅಭ್ಯಸಕ್ಕಾಗಿ ಅಭ್ಯಾಸ ಪುಸ್ತಕಗಳು ಲಭ್ಯವಿದೆ. ಮಗುವಿನ ಕಲಿಕೆಯ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಪ್ರಶ್ನೆ ಕೋಠಿಯ ಜೊತೆಗೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಹ ಒದಗಿಸಲಾಗಿದೆ. ಈ ಆ್ಯಪ್ ಅನ್ನು ರಚಿಸುವಾಗ ಮಕ್ಕಳಿಗಾಗಿ ಮೋಜಿನ ಕಲಿಕೆಯ ಅನುಭವವನ್ನು ನೀಡಲು ಮತ್ತು ಅದನ್ನು ಸಕ್ರಿಯವಾಗಿ ಪ್ರೋತ್ಸಾಹಿಸಲು ಪೋಷಕರಿಗೆ ವಿಶ್ವಾಸಾರ್ಹ ವೇದಿಕೆಯನ್ನು ನಿರ್ಮಿಸುವಲ್ಲಿ ಗಮನಹರಿಸಲಾಗಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.