Skip to main content
ನವೆಂಬರ್ ನಲ್ಲಿ ಆಕ್ಟ್ 1978 ತೆರೆಗೆ

ನವೆಂಬರ್ ನಲ್ಲಿ ಆಕ್ಟ್ 1978 ತೆರೆಗೆ.

ನವೆಂಬರ್ ನಲ್ಲಿ ಆಕ್ಟ್ 1978 ತೆರೆಗೆ.

Kannada new film

ಮುಕ್ಕಾಲು ವರ್ಷವನ್ನು ಕೊರೊನಾ ವೈರಸ್ ಹುರಿದು ಮುಕ್ಕಿದೆ. ಜಗತ್ತು ತಲ್ಲಣಗೊಂಡಿದೆ. ಲಾಕ್ ಮತು ್ತ ಅನ್ ಲಾಕ್ ನಡುವಿನ ಸರ್ಕಸ್ ಇನ್ನೂ ನಡೆಯುತ್ತಲೇ ಇದೆ. ಈ ಆತಂಕವನ್ನು ಕೊಂಚ ಬದುಕಿಟು ್ಟ, ಬದುಕು ಸಾಗುತ್ತಿದೆ. ನಾವೂ ಸಾಗಬೇಕಿದೆ. ಕೊರೊನಾದಿಂದಾಗಿ ಸಿನಿಮಾ ರಂಗ ಕೂಡ ತನ್ನ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಿತ್ತು.

Kannada new film

ಈಗ ಒಂದೊಂದೆ ಸಿನೆಮಾ ಕೆಲಸಗಳು ಶುರುವಾಗಿವೆ. ಥಿಯೇಟರ್ ಬಾಗಿಲು ತೆರೆದಿವೆ. ಇತ್ತೀಚೆಗಷ್ಟೇ ನಮ್ಮ ಆಕ್ಟ್ 1978 ಸಿನೆಮಾ ಸೆನ್ಸಾರ್ ಮಂಡಳಿಯಿಂದ ಯಾವುದೇ ಕಟ್ ಇಲ್ಲದೇ `ಯು' ಪ್ರಮಾಣ ಪತ್ರ ಪಡೆದಿದ್ದು, ಇದನ್ನು ಬಿಡುಗಡೆ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ಮಾಡಿದೆವು. ಒಟ್ಟಾರೆ ನಮ್ಮ ತಂಡ ಹಾಗೂ ನಿರ್ಮಾಪಕರ ಅಭಿಲಾಷೆಯಂತೆ ನಾವು ಸಿನೆಮಾ ಆಕ್ಟ್ 1978 ಥಿಯೇಟರಿನಲ್ಲಿಯೇ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿದ್ದು, ಬಿಡುಗಡೆ ಮಾಡಲು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.

ಸಿನಿಮಾ ಮಂದಿರಕ್ಕೆ ಪ್ರೇಕ್ಷಕರು ಬರುತ್ತಾರೋ, ಇಲ್ಲವೋ ಅನ್ನುವ ಆತಂಕದ ಮಧ್ಯ ಅನೇಕರು ಈಗಾಗಲೇ ಬಿಡುಗಡೆಯಾದ ಚಿತ್ರಗಳನ್ನು ಮರು ಬಿಡುಗಡೆ ಮಾಡಿದ್ದಾರೆ. ಆತಂಕದ ನಡುವೆಯೂ ಜನರು ಉತ್ಸಾಹದಿಂದ ಬರುತ್ತಿದ್ದಾರೆ. ಜನರ ಪ್ರತಿಕ್ರಿಯೆ ಕಂಡು ನಮಗೂ ವಿಶ್ವಾಸ ಮೂಡಿದ್ದು, ನಮ್ಮ ಆಕ್ಟ್ 1978 ಸಿನಿಮಾವನ್ನು ಇದೇ ನವೆಂಬರ್ ನಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ನವೆಂಬರ್ 1, ಅಂದರೆ ಕನ್ನಡ ರಾಜ್ಯೋತ್ಸವದಂದು ಸಿನೆಮಾ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿದ್ದೇವೆ. ಈಗಾಗಲೇ ಸಿನಿಮಾದ ಪೋಸ್ಟರ್ ಮತು ್ತ ಟೈಟಲ್ ನೋಡಿದ ಅನೇಕರು, ಚಿತ್ರದ ಬಗ್ಗೆ ತಮ್ಮದೇ ಆದ ವ್ಯಾಖ್ಯಾನ ಕೊಡುತ್ತಿದ್ದಾರೆ. ಸಿನೆಮ ಮತ್ತು ಅದರ ಕಥಾವಸ್ತುವಿನ ಬಗ್ಗೆ ಪ್ರೇಕ್ಷಕರಿಗೆ ಈಗಾಗಲೇ ಸಾಕಷು ್ಟ ಕುತೂಹಲ ಮೂಡಿದೆ.

Kannada new film

ಪ್ರೇಕ್ಷಕರ ಚಿಂತನೆಗಳು ಸಿನಿಮಾ ತಂಡಕ್ಕೆ ಮತ್ತಷು ್ಟ ಕುತೂಹಲ ಮೂಡಿಸಿವೆ. ಈ ಕಾಯಿದೆಯ ಹುಡುಕಾಟ ಮತು ್ತ ವಿಶ್ಲೇಷಣೆ ನಮ್ಮನ್ನು ಬೆರಗು ಮೂಡಿಸಿದೆ. ಇದರ ಪರಿಣಾಮವೇ ಆದಷು ್ಟ ಬೇಗ ನಿಮ್ಮ ಮುಂದೆ ಸಿನಿಮಾ ತರಲು ಪ್ರೇರೇಪಣೆ ಮಾಡಿದೆ. ಸದ್ಯ ಸಿನಿಮಾ ಬಿಡುಗಡೆ ಕುರಿತಾದ ವಿಷಯ ತಲುಪಿಸಿರುವೆ. ಮುಂದೆ ಮತ್ತಷು ್ಟ ವಿಷಯಗಳನ್ನು ಹಂಚಿಕೊಳ್ಳಲಿದೆ ಸಿನಿಮಾ ತಂಡ. ಸಿನೆಮಾ ಬಿಡುಗಡೆಯ ಕುರಿತಂತೆ ತಕ್ಕ ಮಟ್ಟಿಗೆ ಆತಂಕವೂ ಇದೆ, ಆದರೆ ನಮ್ಮ ಈ ಪ್ರಯತ್ನಕ್ಕೆ ನಮ್ಮ ಪ್ರೇಕ್ಷಕರು ಖಂಡಿತವಾಗಿ ಬೆಂಬಲ ನೀಡುತ್ತಾರೆ ಎಂಬ ಆಶಯ ನಮ್ಮದು. ಲಾಕ್‍ಡೌನ್ ಅವಧಿಯಲಿ ್ಲ ಸಿನೆಮಾಗಳು ಪ್ರೇಕ್ಷಕರ ಮನರಂಜನೆಯ ಮೂಲವಾಗಿತ್ತು. ಈಗ ಅದೇ ಸಿನೆಮಾರಂಗ ಕಷ್ಟದ ದಿನಗಳನ್ನು ಎದುರಿಸುತ್ತಿದೆ. ನಿರ್ಮಾಪಕರು ಕಂಗಾಲಾಗಿದ್ದಾರೆ, ಆ ನಿರ್ಮಾಪಕರನ್ನೇ ಅವಲಂಬಿಸಿರುವ ಇಡೀ ಸಿನೆಮಾ ಕುಟುಂಬ ಆತಂಕದಲ್ಲಿದ್ದಾರೆ. ಒಂದು ಸಿನೆಮಾ ನಿರ್ಮಾಪಕ ಗೆದ್ದರೆ, ಹೊಸ ಸಿನೆಮಾ ಆರಂಭವಾಗುತ್ತದೆ.

ಅವರೊಂದಿಗೆ ನೂರಾರು ಕಾರ್ಮಿಕರಿಗೆ, ಕಲಾವಿದರಿಗೆ, ಅವರನ್ನೇ ಅವಲಂಬಿಸಿರುವ ಕುಟುಂಬಗಳಿಗೆ ಆಸರೆ ಸಿಗುತ್ತದೆ. ನಮ್ಮ ಸಿನೆಮಾ ಥಿಯೇಟರಿನಲ್ಲಿ ಯಶಸ್ವಿಯಾದರೆ, ಉಳಿದ ನಿರ್ಮಾಪಕರಿಗೆ ಹಾಗೂ ಸಿನೆಮಾ ತಂಡದವರಿಗೂ ನಾಳಿನ ದಿನಗಳ ಮೇಲೆ ಭರವಸೆ ಮೂಡುತ್ತದೆ ಎಂಬ ನಂಬಿಕೆ ನಮ್ಮ ತಂಡದ್ದು. ಈ ಕಾರ್ಯದಲ್ಲಿ ಪ್ರೇಕ್ಷಕರು ಹಾಗೂ ಇಡೀ ಚಿತ್ರತಂಡದ ಬೆಂಬಲವನ್ನು ನಮ್ಮ ಆಕ್ಟ್ 1978 ತಂಡ ಕೋರುತ್ತಿದೆ. ಆಕ್ಟ್ 1978 ಸಿನೆಮಾದ ನಿರ್ದೇಶನ ಮಂಸೋರೆ, ದೇವರಾಜ್ ಆರ್ ನಿರ್ಮಾಪಕರು.

ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿ.ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕೃಷ್ಣಾ ಹೆಬ್ಬಾಳೆ, ಶ್ರುತಿ, ದತ್ತಣ್ಣಾ, ಸಂಚಾರಿ ವಿಜಯ್, ಶರಣ್ಯ, ಶೋಭರಾಜ್, ಅವಿನಾಶ್, ರಾಘು ಶಿವಮೊಗ್ಗ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.