ಮುಂದಿನ ಸರ್ಕಾರದ ನಂತರ "ಎಂ ಎಲ್ ಎ" ಯಾಗಿ ಬರಲಿದ್ದಾರೆ ಪ್ರಥಮ್.
ಮುಂದಿನ ಸರ್ಕಾರದ ನಂತರ "ಎಂಎಲ್ಎ" ಯಾಗಿ ಬರಲಿದ್ದಾರೆ ಪ್ರಥಮ್ .
ಅರೇ ಇದೇನಪ್ಪಾ "ಎಂಎಲ್ಎ" ನಾ.? ಅಂದ್ಕೊಂಡ್ರಾ ಬಿಗ್ ಬಾಸ್ ವಿನ್ನರ್ ಒಳ್ಳೆಹುಡುಗ ಪ್ರಥಮ.ಎಂಎಲ್ಎ ಅನ್ನೋ ಕನ್ನಡ ಚಿತ್ರದಲ್ಲಿ ಎಂಎಲ್ಎ ಪಾತ್ರದಲ್ಲಿ ಕಾಣಿಕೊಳ್ಳಲಿದ್ದಾರೆ. ಮೌರ್ಯ ಮಂಜು ರಚನೆ ಮತ್ತು ನಿರ್ದೇಶನಲ್ಲಿ ಮೂಡಿ ಬರುತ್ತಿರುವ ಚಿತ್ರವಾಗಿದ್ದು,ನಿರ್ಮಾಪಕರಾಗಿ ವೆಂಕಟೇಶ್ ರೆಡ್ಡಿ, ಸಹ ನಿರ್ಮಾಪಕರಾಗಿ ವೆಂಕಿ ಪಾಲಗುಳ್ಳ ನಿರ್ಮಾಣಮಾಡಿದ್ದಾರೆ.
ಮೇ 1 ರಂದು ನಗರದ ಹೋಟೆಲ್ ಒಂದರಲ್ಲಿ ಚಿತ್ರದ ಆಡಿಯೋ ಮತ್ತು ವಿಡಿಯೋ ಸಾಂಗ್ ಬಿಡುಗಡೆ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು,ಇನ್ನೂ ಚಿತ್ರದ ನಿರ್ದೇಶಕರು ಚಿತ್ರದಲ್ಲಿನ ಪಾತ್ರದ ಬಗ್ಗೆ ಮಾತನಾಡಿ ಇದು ಪಕ್ಕ ಕಾಮಿಡಿ ಮನೋರಂಜನ ಚಿತ್ರವಾಗಿದೆ. ಈ ಚಿತ್ರದಲ್ಲಿ ಪ್ರಮುಖವಾಗಿ ಕುರಿ ಪ್ರತಾಪ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದರು. ಅಲ್ಲದೇ “ಪುನೀತ್ ರಾಜ್ ಕುಮಾರ್” ರವರ “ಪಿ ಆರ್ ಕೆ” ಆಡಿಯೋ ಸಂಸ್ಥೆಯ ಮೂಲಕ ಹಾಡುಗಳು ಹೊರಬಂದಿದ್ದು ಚಿತ್ರದಲ್ಲಿ ಹೆಚ್ ಎಂ ರೇವಣ್ಣನವರು ಮುಖ್ಯಮಂತ್ರಿ ಪಾತ್ರದಲ್ಲಿ ಕಾಣಿಸಿಕೊಳ್ಳು ತ್ತಿರುವರ ಕಾರಣ , ರಾಜ್ಯದಲ್ಲಿ ಚುನಾವಣೆಯ ನೀತಿ ಸಂಹಿತೆ ಇರುವ ಕಾರಣದಿಂದಾಗಿ ಚಿತ್ರವನ್ನು ಚುನಾವಣೆಯ ನಂತರ ಬಿಡುಗಡೆಗೆ ಸಿದ್ದತೆ ನಡೆಸಿದೆ.
ಈ ಚಿತ್ರದ ಧ್ವನಿ ಸುರುಳಿಯ ಸಿಡಿಯನ್ನು ಚಾಂಲೇಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿ ಚಿತ್ರದ ತಂಡಕ್ಕೆ ಶುಭ ಹಾರೈಸಿದರು. ಅಲ್ಲದೆ ಈ ಕಾರ್ಯಕ್ರಮದಲ್ಲಿ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ. ರಾ . ಗೋವಿಂದ್ ಹಾಜರಾಗಿದ್ದರು.
Recent comments