Skip to main content
ಅಧಿಕಾರಿಗಳೊಂದಿಗೆ ಶಾಸಕಿ ಅನಿತಾ ಕುಮಾರಸ್ವಾಮಿ zoom meeting.

ಅಧಿಕಾರಿಗಳೊಂದಿಗೆ ಶಾಸಕಿ ಅನಿತಾ ಕುಮಾರಸ್ವಾಮಿ zoom meeting.

ಅಧಿಕಾರಿಗಳೊಂದಿಗೆ ಶಾಸಕಿ ಅನಿತಾ ಕುಮಾರಸ್ವಾಮಿ zoom meeting.

Kannada new film

ರಾಮನಗರ :ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ರಾದ ಶ್ರೀಮತಿ ಅನಿತಾ ಕುಮಾರಸ್ವಾಮಿರವರು ಕೋವಿಡ್-19 ಗೆ ಸಂಬಂಧಿಸಿದಂತೆ. ಜೂನ್ 1,2021 ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ZOOM meeting ನಡೆಸಿಸರು. ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನ ಬಗ್ಗೆ ಸಂಪೂರ್ಣ ವಿವರ ಪಡೆದರು. ಎಲ್ಲಾ ಗ್ರಾ.ಪಂಚಾಯ್ತಿಗಳ pdo ಗಳು zoom meeting ಮೀಟಿಂಗ್ ನಲ್ಲಿ ಭಾಗವಹಿಸಿದ್ದರು.

Covid 19

zoom meeting ನಲ್ಲಿ ಜಿಲ್ಲಾ ಪಂಚಾಯ್ತಿ CEO, ರಾಮನಗರ ಮತ್ತು ಕನಕಪುರದ ಮಾನ್ಯ ದಂಡಾಧಿಕಾರಿಗಳಾದ ನರಸಿಂಹಮೂರ್ತಿ, ವಿಶ್ವನಾಥ್, DHO ನಿರಂಜನ್ ರವರು, RCH ಡಾ.ಪದ್ಮಾ, THO, EO ಶಿವಕುಮಾರ್, CDPO ಸಿ.ವಿ.ರಾಮನ್,, phc ಗಳ ವೈದ್ಯರು, ನಗರಸಭೆ ಕಮೀಷನರ್, ನಗರಸಭೆ ಆರೋಗ್ಯ ನಿರೀಕ್ಷಕರು ಸೇರಿದಂತೆ ಪ್ರಮುಖ ಅಧಿಕಾರಿಗಳು *zoom meeting* ನಲ್ಲಿ ಭಾಗವಹಿಸಿದ್ದರು. Zoom meeting ನಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗಿದ್ದು . ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಎಷ್ಟು ಜನ ಸೋಂಕಿತರಿದ್ದಾರೆ. ಎಷ್ಟು ಜನ ಹೋಂ ಐಸೋಲೇಟ್ ಆಗಿದ್ದಾರೆ. ಪಂಚಾಯ್ತಿಯಿಂದ ಕೊರೋನಾ ಸಂಬಂದಿಸಿದ್ದಂತೆ ಯಾವ ಯಾವ ಕ್ರಮ ತೆಗೊಂಡಿದೀರೆಂದು ಶಾಸಕಿ ಅನಿತಾ ಕುಮಾರಸ್ವಾಮಿಯವರು ಗ್ರಾಮ ಪಂಚಾಯ್ತಿವಾರು ಮಾಹಿತಿ ಪಡೆದರು. ಕೊರೊನಾ ಸೋಂಕಿತರಿಗೆ RTPCR, ct scan, blood tests ಗಳು ಆಗ್ತಿದ್ಯಾ. Discharge ಮಾಡೋಕು ಮುಂಚೆ blood test ಗಳನ್ನ ಮಾಡಿಸಬೇಕು ಎಂದು DHO ನಿರಂಜನ್ ರವರಿಗೆ ಶಾಸಕರು ಸೂಚಿಸಿದರು. ರಾಮನಗರ head quarter ನಲ್ಲಿ ಎಷ್ಟು ಆಕ್ಸಿಜನ್ ಬೆಡ್ ಇದೆ. ವೆಂಟಿಲೇಟರ್ಸ್ ಎಷ್ಟಿದೆ ಎಂಬುದರ ಬಗ್ಗೆ ಮಾಹಿತಿ ಪಡೆದ ಶಾಸಕರು, ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಸಿಗುವತ್ತ ಅಧಿಕಾರಿಗಳು ಗಮನ ಮಹರಿಸಬೇಕೆಂದು ಸೂಚಿಸಿದರು. ಗ್ರಾಮಪಂಚಾಯ್ತಿಗಳಲ್ಲಿ ಕೋವಿಡ್ ತುರ್ತು ನಿಧಿ(emergency fund) ಮತ್ತು 15th finance ನಲ್ಲಿ ನಿರ್ಗತಿಕರನ್ನ ಕಡುಬಡವರನ್ನ ಗುರುತಿಸಿ ವಿಶೇಷ ಪ್ರಾತಿನಿದ್ಯದ ಮೇಲೆ ಆಹಾರದ ಕಿಟ್ ಗಳನ್ನ ನೀಡಲು ಕ್ರಮವಹಿಸಬೇಕೆಂದು ಜಿ.ಪಂ.ಸಿಇಓ ಇಕ್ರಂ ರಿಗೆ ಸೂಚನೆ ನೀಡಿದರು. ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಮಂದಿಗೆ ವ್ಯಾಕ್ಸಿನ್ ಆಗಿದೆ. Remdeciver injection ಏನಾದ್ರು ಕೊರತೆ ಇದೆಯಾ ಎಂಬ ಮಾಹಿತಿ ಪಡೆದುಕೊಂಡರು. ರಾಮನಗರ ತಾಲೂಕಿನಲ್ಲಿ ಸುಮಾರು 45 ವರ್ಷ ಮೇಲ್ಪಟ್ಟ 44 ಸಾವಿರ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ವ್ಯಾಕ್ಸಿನ್ ಬಗ್ಗೆ ಹೆಚ್ಚಿನ ಪ್ರಚಾರ ಕೊಟ್ಟು ಇನ್ನೂ ಹೆಚ್ಚಿನ ಜನರಿಗೆ ವ್ಯಾಕ್ಸಿನ್ ನೀಡಲಾಗುವುದೆಂದು DHO ನಿರಂಜನ್ ತಿಳಿಸಿದರು. ಕೊರೊನಾ ಸೋಂಕಿತರಿಗೆ ಮಾನಸಿಕ ಸ್ಥೈರ್ಯ ಮುಖ್ಯ ಆಗಿರುತ್ತೆ. ಆದ್ದರಿಂದ ಕೇರ್ ಸೆಂಟರ್ ಗಳಲ್ಲಿ, hospital ಗಳಲ್ಲಿ ಸೋಂಕಿತರಿಗೆ quality treatment ಸಿಗೋ ರೀತಿ ನೋಡ್ಕೋಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಸೂಚನೆ ನೀಡಿದರು. ಆಶಾ ಕಾರ್ಯಕರ್ತೆಯರಿಗೆ ಉಚಿತವಾಗಿ anti body test ಮಾಡಬೇಕು. ಇದರ ಬಗ್ಗೆ DHO, THO ಹೆಚ್ಚಿನ ಗಮನಹರಿಸಬೇಕೆಂದು ಹೇಳಿದರು. ಗ್ರಾಮ ಪಂಚಾಯ್ತಿಯಿಂದ ಪ್ರತಿ ಹಳ್ಳಿಗಳಲ್ಲೂ ಜನರಲ್ಲಿ ಕೊರೊನಾ ಬಗ್ಗೆ ಇನ್ನೂ ಹೆಚ್ಚೆಚ್ವು awareness ಮೂಡಿಸೋಕೆ ಕ್ರಮ ತೆಗೋಬೇಕೆಂದು ಪಿಡಿಓ ಗಳಿಗೆ ಶಾಸಕರು ಸೂಚಿಸಿದರು. ಈಗ ಸ್ವಲ್ಪ ಕೊರೊನಾ ಅಬ್ಬರ ಕಡಿಮೆಯಾಗಿದೆ. ಆದರೆ ಮೂರನೇ ಅಲೆ ಬರುತ್ತೆ ದೊಡ್ಡ ಮಟ್ಟದಲ್ಲಿ ಪರಿಣಾಮ ಆಗುತ್ತೆ ಅಂತ experts ಹೇಳಿದಾರೆ. ಆದ್ರಿಂದ ಈಗಿನಿಂದಲೇ ಪ್ರತಿ ಹಳ್ಳಿಗಳಲ್ಲೂ ಕೊರೊನಾ ಮೂರನೇ ಅಲೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಶಾಸಕರು ತಿಳಿಸಿದರು. ರಾಮನಗರ ಟೌನ್ ವ್ಯಾಪ್ತಿಯಲ್ಲೆ ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ.ನಗರಸಭೆ ವತಿಯಿಂದ ವಾರಕ್ಕೆ ಎರಡು ದಿನ ಪ್ರತಿ ವಾರ್ಡ್ ಗಳಲ್ಲಿ ಸ್ಯಾನಿಟೈಸ್ ಮಾಡಿಸುವಂತೆ ನಗರಸಭೆ ಕಮೀಷನರ್ ರವರಿಗೆ ಸೂಚಿಸಿದರು. ಪೌರ ಕಾರ್ಮಿಕರ ಸುರಕ್ಷತೆಗಾಗಿ ಗ್ಲೌಸ್, ಮಾಸ್ಕ್, ಫೇಸ್ ಶೀಲ್ಡ್, ಮೆಡಿಕಲ್ ಕಿಟ್ ಗಳನ್ನ ನಗರಸಭೆಯಿಂದ ಒದಗಿಸಬೇಕೆಂದು ಸೂಚಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳಿಂದ ಮಕ್ಕಳಿಗೆ ಆಹಾರ ಧಾನ್ಯ ತಲುಪಿಸಬೇಕು. ಗರ್ಭಿಣಿಯರು, ಬಾಣಂತಿಯರ ಆರೈಕೆಗಾಗಿ ಸರ್ಕಾರ ಕೊಡೋ ಸೌಲಭ್ಯವನ್ನ ಕೂಡ ಸಮರ್ಪಕವಾಗಿ ತಲುಪಿಸಬೇಕೆಂದು ಸಿಡಿಪಿಒ ಗಳಿಗೆ ಶಾಸಕರು ಸೂಚಿಸಿದರು. ಬೆಡ್ ಕೊರತೆ, ಆ್ಯಕ್ಸಿಜನ್ ಕೊರತೆ, ರೆಮ್ಡಿಸೀವರ್ ಕೊರತೆ, ಬೇರೆ ಮೆಡಿಸಿನ್ ಕೊರತೆ ಏನಾದ್ರು ಇದ್ದರೆ ತಕ್ಷಣವೇ ನನ್ನ ಗಮನಕ್ಕೆ ತನ್ನಿ ಎಂದು ಶಾಸಕರು ಹೇಳಿದರು. ಸದ್ಯಕ್ಜೆ ಮೆಡಿಸನ್ ಕೊರತೆ ಇಲ್ಲ, ರೆಮ್ಡಿಸೀವರ್ ಪೂರೈಕೆಯಾಗ್ತಿದೆ, ಬೆಡ್, ಆ್ಯಕ್ಸಿಜನ್ ಕೊರತೆಯೂ ಇಲ್ಲವೆಂದು DHO ನಿರಂಜನ್ ತಿಳಿಸಿದರು. ವಾರಕ್ಕೆ ಒಂದ್ಸಾರಿಯಾದ್ರೂ ಹಳ್ಳಿಗಳಲ್ಲಿ ಸ್ಯಾನಿಟೈಸ್ ಮಾಡಿಸಿ. ನೀರುಗಂಟಿಗಳು, ಬಿಲ್ ಕಲೆಕ್ಟರ್, ಸಿಬ್ಬಂದಿಗಳ ಆರೋಗ್ಯದ ದೃಷ್ಟಿಯಿಂದ ಗ್ಲೌಸ್, ಸ್ಯಾನಿಟೈಸರ್ಸ್, face shield, ಮಾಸ್ಕ್, ವಿಟಮಿನ್ ಮಾತ್ರೆಗಳನ್ನ ಕೊರತೆ ಇಲ್ಲದಂತೆ ಕೊಡಬೇಕು ಎಂದು ಇಓ ಗಳಿಗೆ ಶಾಸಕರು ಸೂಚಿಸಿದರು. ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಶುಚಿತ್ವ ಮತ್ತು ಗುಣಮಟ್ಟದ ಆಹಾರವನ್ನ ಸೊಇಂಕಿತರಿಗೆ ನೀಡುವತ್ತ ಸಿಇಓ ಇಕ್ರಂ ರವರೆ ಖುದ್ದು ಪರಿಶೀಲನೆ ನಡರಸಿ ಕ್ರಮವಹಿಸಬೇಕೆಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು. ನರೇಗಾ ಕಾಮಗಾರಿಗಳ ಟಾರ್ಗೆಟ್ ಎಷ್ಟು ರೀಚ್ ಆಗಿದೆ ಎಂಬ ಮಾಹಿತಿ ಪಡೆದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.