ಈ ತಾಲೂಕಿಗೆ ಈ ಮೂರುಜನ ಮಹಿಳಾ ಅಧಿಕಾರಗಳೇ ರಕ್ಷ ಕವಚ.
ಈ ತಾಲೂಕಿಗೆ ಈ ಮೂರುಜನ ಮಹಿಳಾ ಅಧಿಕಾರಗಳೇ ರಕ್ಷ ಕವಚ.

ಸಿರವಾರ: ಸಕಲ ವಿಶ್ವ ಜನಾಂಗವೇ ಈ 'ಕೊರೋನಾ' ಅನ್ನುವ ಕೋವಿಡ್ -19 ಮಹಾಮಾರಿ ರೋಗಕ್ಕೆ ತತ್ತರಿಸಿ ಹೋಗಿದೆ ,ಅಂತಹುದರಲ್ಲಿ ನಮ್ಮ ಭಾರತ ದೇಶವು ಕೂಡ ಹೊರತೆನ್ನಲ್ಲ . ಒಬ್ಬರಿಂದ ಒಬ್ಬರಿಗೆ ಭಯಂಕರವಾಗಿ ಅತೀ ವೇಗದಲ್ಲಿ ಹರಡುವ ಈ ಸಾಂಕ್ರಾಮಿಕ ರೋಗಕ್ಕೆ ಇದುವರೆಗೂ ಯಾವುದೇ ಜೌಷಧಿ ದೊರೆಯದೆ ಇರುವುದು ಮತ್ತೊಂದು ವಿಪರ್ಯಾಸವೇ ಸರಿ .ಇದರ ಕ್ರೌರ್ಯ ಎಷ್ಟು ಕೆಟ್ಟದಾಗಿದೆ ಎಂದರೆ ಸಾವಿರ ಲಕ್ಷಕ್ಕೂ ಅಧಿಕ ಅಮಾಯಕ ಜನರ ಜೊತೆ ಇನ್ನೂ ಕಣ್ಣು ಬಿಡದ ಅಸುಗೂಸುಗಳ ಪ್ರಾಣವನ್ನೂ ಪಡೆದುಕೊಂಡ್ಡಿದೆ ಈ ಮಹಾಮಾರಿ.ಆದರೆ ಇದರ ಈ ರೌದ್ರ ನರ್ತನವನ್ನು ತಡೆಗಟ್ಟಲು ದೇಶದ ,ವೈದ್ಯರು ,ಅಧಿಕಾರಿಗಳು ತಮ್ಮ ಕುಟುಂಬ ಮಕ್ಕಳು ಸಂಸಾರವನ್ನೂ ಕೂಡ ಲೆಕ್ಕಿಸದೆ ಒಂದೇಡೆ ತಮ್ಮ ಪ್ರಾಣವನ್ನೂ ಪಣಕ್ಕಿಟ್ಟು ಇದರ ವಿರುದ್ದ ಹೋರಾಟ ಮಾಡಿ ,ಜನರ ಜೀವ ಉಳಿಸುವ ರಕ್ಷಾ ಕವಚ ವಾಗಿ ಕೆಲಸ ಮಾಡುತ್ತಿರುವುದು ಪ್ರತಿಯೊಬ್ಬರು ಮೆಚ್ಚುವಂತಹ ವಿಷಯವಾಗಿದೆ .

ಸಿರವಾರ ತಾಲೂಕಿನ ಮಹಿಳಾ ಅಧಿಕಾರಿಗಳು .
ಇಂತಹ ಕೊರೋನಾ ಅನ್ನುವ ರೋಗದ ವಿರುದ್ಧ ಹೊರಾಡುವ ಸಾಹಸಕ್ಕೆ ಮುಂದಾಗಿರುವ ಸಿರವಾರ ತಾಲೂಕಿನ ಅಧಿಕಾರಿಗಳಾದ ಶ್ರೀ ಮತಿ ಶ್ರೀ ಶ್ರುತಿ .ಕೆ ತಹಸೀಲ್ದಾರ್.ಪಿ.ಎಸ್.ಐ.ಶ್ರೀ ಮತಿ ಶ್ರೀ ಸುಜಾತ ಡಿ.ಏನ್ ಇವರ ಕಾರ್ಯ ವೈಖರಿಯನ್ನ ನಾವು ಮೆಚ್ಚಲೇ ಬೇಕು .ಅಂದು ಹೊನಕೆ ಓಬವ್ವ ಕಿತ್ತೂರು ರಾಣಿ ಚನ್ನಮ್ಮ ಶತ್ರುಗಳ ವಿರುದ್ಧ ಹೋರಾಡಿ ಹೆಣ್ತನವನ್ನೇ ಮೆಚ್ಚು ವಂತೆ ಮಾಡಿದ್ದರು,ಅಂತಹ ವೀರನಾರಿಯರಂತೆ ಇಂದು ಜನರ ಪ್ರಾಣ ರಕ್ಷಣೆಗೆ ಹಗಲಿರುಳು ಶ್ರಮ ಪಡುತ್ತಿದ್ದಾರೆ. ಹಳ್ಳಿ ಗ್ರಾಮದ ಪ್ರದೇಶದಲ್ಲಿ ಬೆಳೆದು ಜನಸೇವೆಗಾಗಿ ತಹಸೀಲ್ದಾರ್ ಮತ್ತು ಪಿ ಎಸ್ ಐ ವೃತ್ತಿಯಲ್ಲಿ ತೊಡಗಿರುವ ಇವರು ಪ್ರಥಮವಾಗಿ ಸಿರವಾರ ತಾಲೂಕು ಅಧಿಕಾರಗಳಾಗಿ ಸೇವೆ ಮಾಡುತ್ತಿದ್ದಾರೆ.

ಇನ್ನೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಇವರು ತಮ್ಮ ಕುಟುಂಬದ ಸದ್ಯಸ್ಯರ ರಕ್ಷಣೆಗಿಂತ ಹೆಚ್ಚಾಗಿ ಜನರ ಜೀವ ರಕ್ಷಣೆಗೆ ಪಣತೊಟ್ಟು ನಿಂತ್ತಿದ್ದಾರೆ . ಇಂತಹ ಸ್ಫೂರ್ತಿಧಾಯಕ ಮಾಧರಿ,ಧೈರ್ಯವಂತ ವೀರನಾರಿ ಅಧಿಕಾರಿಗಳಿಗೆ ಸಿರವಾರದ ಜನತೆ ಒಂದು ಸಲಾಂ ಹೇಳ್ ಬೇಕು.ನೂತನವಾಗಿ ತಾಲೂಕ್ಆಗಿರುವ ಸಿರವಾರಕ್ಕೆ ಅರೋಗ್ಯ,ತಾಲೂಕು ಆಡಳಿತ,ಪೊಲೀಸ್ ಇಲಾಖೆಗಳಿಗೆ ಮೂರು ಜನ ಮಹಿಳೆಯರೇ ಅಧಿಕಾರಿಗಳಾಗಿ ಬಂದಿದ್ದು ಸಿರವಾರದ ಜನತೆಗೆ ಸಂತೋಷ ಉಂಟುಮಾಡಿದೆ .

ಅದಕ್ಕಾಗಿ ಸಿರವಾರದ ಹಿರಿಯ ಪತ್ರ ಕರ್ತರಾದ ಮತ್ತು ಕಲ ಸಂಕುಲ ಕಾರ್ಯದರ್ಶಿಗಳಾದ ಮಾರುತಿ ಬಡಿಗೇರ್ ಇವರು ಇವರ ಕಾರ್ಯ ವೈಖರಿ ಮೆಚ್ಚಿ ಸಿರವಾರದ ಮಹಿಳೆಯರಿಗೆ ಒಂದು ಮನವಿ ಮಾಡಿಕೊಂಡಿದ್ದಾರೆ .ಇಂತಹ ಕಠಿಣ ಪರಿಸ್ಥಿತಿಯಲ್ಲೂ ಕೆಲಸ ಮಾಡುತ್ತಿರುವ ಇಂತಹ ಅಧಿಕಾರಿಗಳಿಗೆ ಮಹಿಳೆಯರು ಒಟ್ಟುಗೂಡಿ ಗೌರವ ಸಮರ್ಪಣೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ . ಸಿರವಾರ ತಾಲೂಕಿನ ವೈದ್ಯ ಅಧಿಕಾರಗಳಾದ ಪರಿಮಳ ಅವರು ಮತ್ತು ಪಟ್ಟಣ ಪಂಚಾಯತ್ ಅಧಿಕಾರಿಗಳ ಸೇವೆಯನ್ನು ಕೂಡ ಸ್ಮರಿಸಬೇಕು .
Recent comments