Skip to main content
ಶ್ರೀ ರಾಜಾ ಅಂಬಣ್ಣ ನಾಯಕ ಫೌಂಡೇಶನ್ ವತಿಯಿಂದ ಆಹಾರ ಕಿಟ್ ವಿತರಣೆ.

ಶ್ರೀ ರಾಜಾ ಅಂಬಣ್ಣ ನಾಯಕ ಫೌಂಡೇಶನ್ ವತಿಯಿಂದ ಆಹಾರ ಕಿಟ್ ವಿತರಣೆ.

ಶ್ರೀ ರಾಜಾ ಅಂಬಣ್ಣ ನಾಯಕ ಫೌಂಡೇಶನ್ ವತಿಯಿಂದ ಆಹಾರ ಕಿಟ್ ವಿತರಣೆ.

Raichur

ಸಿರವಾರ: ಈಗಾಗಲೇ “ಕೊರೋನಾ “ ಭಿತಿಯ “ಲಾಕ್ ಡೌನ್” ನಿಂದಾಗಿ ಕಂಗಗಾಲಾಗಿರುವ ಸಮಾನ್ಯ ಬಡ ಕುಟುಂಬಗಳಿಗೆ ಆಸರೆಯಾಗಲು ತಾಲೂಕು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಇವರು  ತಮ್ಮ ತಿಂಗಳ ವೇತನವನ್ನು ಬಡ ಜನರಿಗಾಗಿ ನೀಡಿ ಮಾನವಿಯತೆ ಮೇರೆದಿದ್ದರು, ಆದರೂ ಸಹ ಸಂಪೂರ್ಣ ಬಂದ್ ಇರುವ ಹಿನ್ನೆಲೆ ತಾಲುಕಿನದ್ಯಾಂತ ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ದಿನ ನಿತ್ಯದ ಆಹಾರ ಧಾನ್ಯಗಳ ಕಿಟ್ ನ್ನು ಶ್ರೀ ರಾಜಾ ಅಂಬಣ್ಣ ನಾಯಕ ಫೌಂಡೇಶನ್ ವತಿಯಿಂದ ವಿತರಣೆ ಮಾಡುತ್ತಿದ್ದಾರೆ.

Sirwar

ಇಂದು ಸಿರವಾರ ತಾಲುಕಿನ ಜನತೆಗೆ ಈ ಆಹಾರ ಧಾನ್ಯಗಳ ಕಿಟ್ ನ್ನು ವಿತರಣೆ ಮಾಡುವ ಮೂಲಕ ಬಡ ಜನರಿಗೆ ಈ ಆಹಾರದ ಕಿಟ್ ನ್ನು ವಿತರಣೆ ಮಾಡುತ್ತಿರುವುದು ಕೇವಲ ಬಡ ಕುಟುಂಬದ ಜನರಿಗೆ ಊಟಕ್ಕೆ ಉಪಯೋಗ ವಾಲೆಂದು ಮಾತ್ರವೇ ಹೋರೆತು ಯಾವುದೇ ರಾಜಕೀಯದ ಉದ್ದೇಶವಿಲ್ಲ ಎಂದು ಹೇಳಿದರು.ಇನ್ನೂ “ಕೊರೋನ” ರೋಗವನ್ನು ತಡೆಗಟ್ಟಲು ಕೈಗೊಂಡಿರುವ ಕಾನೂನಿನ ಕ್ರಮಗಳಿಗೆ ಎಲ್ಲಾ ಸಾರ್ವಜನಿಕರು ಸಹಕರಿಸಬೇಕು,ಎಂದರು.

Raichur

ಇನ್ನೂ ತಾಲುಕಿನ ತಾಹಸಿಲ್ದಾರರಾದ ಶ್ರೀ ಮತಿ ಶೃತಿ.ಕೆ ಇವರು ಮಾತನಾಡಿ ಜನರೆಲ್ಲ ಸಮಾಜಿಕ ಅಂತರವನ್ನ ಕಾಯ್ದುಕೊಂಡು,ಜನರು ಈ ಕೊರೋನಾ ರೋಗ ತಡೆಗಟ್ಟಲು ಮಾಸ್ಕ್ ಧರಿಸುವುದರ ಜೊತೆಗೆ ಮನೆಯಲ್ಲಿಯೇ ಇದ್ದು ನಮ್ಮನ್ನ ನಾವೇ ರಕ್ಷಣೆ ಮಾಡಿಕೊಳ್ಳ ಬೇಕು ಎಂದರು ಇನ್ನೂ ಈ ಆಹಾರದ ಕಿಟ್ ವಿತರಣೆಯ ಮಾಡುತ್ತೀರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Raichur

ಅಲ್ಲದೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಶ್ರೀ ಸುನೀಲ್ ಕುಮಾರ್ ಸರೋದೆ ಇವರು ಮಾತನಾಡಿ ರೋಗ ಹರಡದಂತೆ ಸ್ವಚ್ಚವಾಗಿ ಕೈ ಗಳನ್ನು ತೊಳೆಯುವುದು, ಮಾಸ್ಕ ಧರಿಸುವುದು,ಸಾಮಜಿಕ ಅಂತರ ಕಾಯ್ದು ಕೊಳ್ಳುವಂತಹ ಕೇಲವು ಮುಂಜಾಗೃತ ಕ್ರಮಗಳ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಜೆ ಡಿ ಎಸ್ ಮುಖಂಡರಾದ ಜಿ.ಲೊಕರೆಡ್ಡಿ,ರಾಮಚಂದ್ರ ನಾಯಕ, ಮಲ್ಲಿಕಾರ್ಜುನ್ ಗೌಡ, ಸಿಪಿಐ ಶ್ರೀ ದತ್ತ್ರೇಯ ಕಾರ್ನಾಡ್ . ಪಿಎಸ್ಐ ಸುಜಾತ ಡಿ. ನಾಗರಾಜ್ ಗೌಡ, ದಾನಪ್ಪ , ಇಮಾಮ್ ಉದ್ದಿನ್ ಪಂ.ಪ.ಸದ್ಯಸ್ಯರು,ಕಾಶಿನಾಥ್,ಪ್ರಕಾಶಪ್ಪ ಇನ್ನೀತರು ಭಾಗಿಯಾಗಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.