Skip to main content
ಮಾಜಿ ಸಿಎಂ ಯಡಿಯೂರಪ್ಪ ನಂತರ "ತನುಜಾ" ಸಿನಿಮಾ ಅಖಾಡಕ್ಕೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ ಸುಧಾಕರ್ ಎಂಟ್ರಿ .!

ನೈಜ ಘಟನೆಯಾಧಾರಿತ ತನುಜಾ ಸಿನಿಮಾದ ಕಥೆಗೆ ಮನಸೋತು ಇತ್ತೀಚಗಷ್ಟೇ ಮಾಜಿ ಸಿಎಂ ಯಡಿಯೂರಪ್ಪನವರು ನಟಿಸಿ ದೇಶದಾದ್ಯಂತ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಇದೀಗ ಸಚಿವ ಡಾ.ಕೆ ಸುಧಾಕರ್ ಅವರು ಈ ಸಿನಿಮಾದಲ್ಲಿ ನಟನೆ ಮಾಡಿ ಅಧಿಕೃತವಾಗಿ ಸ್ಯಾಂಡಲ್ ವುಡ್ ಅಂಗಳಕ್ಕೆ ಎಂಟ್ರಿ ಪಡೆದಿದ್ದಾರೆ.

ಈ ಹಿಂದೆ ತನುಜಾ ಎನ್ನುವ ಹೆಣ್ಣುಮಗಳು ಕೋವಿಡ್ ಸಂದರ್ಭದಲ್ಲಿ ಪರೀಕ್ಷೆ ಬರೆಯಲಾಗದೇ ಸಹಾಯ ಕೋರಿದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ , ಸಚಿವ ಡಾ.ಕೆ ಸುಧಾಕರ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಇನ್ನಿತರ ಸಹಾಯದಿಂದ ಪರೀಕ್ಷೆ ಬರೆದು ವೈದ್ಯಕೀಯ ಸೀಟು ಪಡೆದಿದ್ದು ಎಲ್ಲರ ಹುಬ್ಬೇರಿಸಿತ್ತು, ಅಷ್ಟೇ ಅಲ್ಲದೆ ಆ ನೈಜ ಘಟನೆಯಾಧಾರಿತ ವರದಿ ಆಧರಿಸಿ ಸಿನಿಮಾ ಕೂಡ ಸೆಟ್ಟೇರಿದ್ದು ಆ ಸಿನಿಮಾಗೆ ತನುಜಾ ಎಂದು ನಾಮಕರಣ ಮಾಡಿದ್ದರು . ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ತಮ್ಮ ಪಾತ್ರಕ್ಕೆ ತಾವೇ ನಟಿಸಿ ಸೈ ಎನಿಸಿಕೊಂಡಿದ್ದರು.

ಮಾಜಿ ಸಿಎಂ ಯಡಿಯೂರಪ್ಪ ನಂತರ "ತನುಜಾ" ಸಿನಿಮಾ ಅಖಾಡಕ್ಕೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ ಸುಧಾಕರ್ ಎಂಟ್ರಿ .!

ಇದೀಗ ಸಚಿವರಾದ ಡಾ.ಕೆ ಸುಧಾಕರ್ ಅವರು ಕೂಡ ಇಂದು ಅವರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅನುಭವಿ ಕಲಾವಿದರ ರೀತಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು ಅದ್ಭುತವಾಗಿ ನಟಿಸಿದ್ದಾರೆ ಜೊತೆಗೆ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದು ವಿಶೇಷವಾಗಿದ್ದು ಒಂದೇ ಟೇಕಿಗೆ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದು ಚಿತ್ರತಂಡದವರಿಗೆ ಖುಷಿ ಕೊಟ್ಟಿದೆ. ಇನ್ನು ಈ ಚಿತ್ರಕ್ಕೆ ರಾಜ್ಯಪ್ರಶಸ್ತಿ ವಿಜೇತ ಹರೀಶ್ ಎಂ.ಡಿ ಹಳ್ಳಿಯವರ ನಿರ್ದೇಶನವಿದ್ದು, Beyond Visions Cinemas ಬಂಡವಾಳ ಹೂಡಿದೆ.

ಮಾಜಿ ಸಿಎಂ ಯಡಿಯೂರಪ್ಪ ನಂತರ "ತನುಜಾ" ಸಿನಿಮಾ ಅಖಾಡಕ್ಕೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ ಸುಧಾಕರ್ ಎಂಟ್ರಿ .!

ಈ ಚಿತ್ರವು ಶಿವಮೊಗ್ಗ ಸುತ್ತ ಮತ್ತ ಹಾಗೂ ಬೆಂಗಳೂರಿನ ಹಲವೆಡೆ ಚಿತ್ರೀಕರಣಗೊಂಡಿದೆ. ತಾರಾಗಣದಲ್ಲಿ ರಾಜೇಶ್ ನಟರಂಗ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಖ್ಯಾತಿಯ ಸಪ್ತಾ ಪಾವೂರ್ , ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಸಂಧ್ಯಾ ಅರಕೆರೆ, ಕೈಲಾಶ್, ಬಾಲ ನಟಿ ಬೇಬಿ ಶ್ರೀ ಅಭಿನಯಿಸಿದ್ದು ಪ್ರದ್ಯೋತನ ಸಂಗೀತ ನಿರ್ದೇಶನ ರವೀಂದ್ರನಾಥ್ ಹಾಗೂ ಮೋಹನ್.ಎಲ್ ರಂಗಕಹಳೆ ಅವರ ಛಾಯಾಗ್ರಹಣ, ಉಮೇಶ್ ಆರ್.ಬಿ ಸಂಕಲನವಿದ್ದು ಆರ್ ಚಂದ್ರಶೇಖರ್ ಪ್ರಸಾದ್ ಹಾಗೂ ಜೆ.ಎಂ ಪ್ರಹ್ಲಾದ್ ಸಂಭಾಷಣೆ, ರಘುನಂದನ್ ಎಸ್.ಕೆ ಕಾರ್ಯಕಾರಿ ನಿರ್ಮಾಪಕರು, ಸತೀಶ್ ಬ್ರಮ್ಮಾವರ್ ನಿರ್ಮಾಣ ನಿರ್ವಹಣೆ ಇದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.