ವಿನೋದ್ ಪ್ರಭಾಕರ್ ಅವರ ನೂತನ ಚಿತ್ರ.
ವಿನೋದ್ ಪ್ರಭಾಕರ್ ಅವರ ನೂತನ ಚಿತ್ರ.

ಎ.ಎಂ.ಎಸ್. ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ ನೂತನ ಚಿತ್ರವೊಂದರ ನಾಯಕನಾಗಿ ವಿನೋದ್ ಪ್ರಭಾಕರ್ ಅಭಿನಯಿಸುತ್ತಿದ್ದಾರೆ..
ಹಿಂದೆ ಈ ಸಂಸ್ಥೆಯಿಂದ ಕುಲ್ಫಿ ಚಿತ್ರ ನಿರ್ಮಾಣವಾಗಿತ್ತು.. ಈಗಾಗಲೇ ಫೋಟೊಶೂಟ್ ಮುಗಿದಿದ್ದು, ಕೊರೋನ ಲಾಕ್ ಡೌನ್ ಆದ ಮೇಲೆ ಚಿತ್ರದ ಶೀರ್ಷಿಕೆ ಅನಾವರಣಗೊಳ್ಳಲಿದೆ. ನಂತರ ಚಿತ್ರೀಕರಣ ಆರಂಭವಾಗಲಿದೆ. ಗಣೇಶ್ ಅಭಿನಯದ ಗೀತ ಚಿತ್ರದಲ್ಲಿ ನಟಿಸಿದ್ದ ಪಾರ್ವತಿ ಅರುಣ್ ಈ ಚಿತ್ರದ ನಾಯಕಿ. ಮೂರ್ಕಲ್ ಎಸ್ಟೇಟ್ ಚಿತ್ರದ ನಿರ್ದೇಶಕ ಪ್ರಮೋದ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.. ಲವ್ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ನೂತನ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ನೀಡುತ್ತಿದ್ದಾರೆ. ಸುಜ್ಞಾನ್ ಛಾಯಾಗ್ರಹಣ ಹಾಗೂ ಕೆ.ಡಿ.ವೆಂಕಟೇಶ್ ಸಾಹಸ ನಿರ್ದೇಶನ ಈ ಹೊಸ ಚಿತ್ರದಲ್ಲಿದೆ.
Recent comments