ಶ್ರೀ ಎನ್. ಎಸ್. ಬೋಸ್ ರಾಜು ಮತ್ತು ಶಾಸಕರ ಸಮ್ಮುಖದಲ್ಲಿ ಕಾಂಗ್ರೇಸ್ ಪಕ್ಷ ಸೇರ್ಪಡೆ ಗೊಂಡ ದುರ್ಗ ಪ್ರಸಾದ್
ಎನ್.ಎಸ್. ಬೋಸ್ ರಾಜು ಮತ್ತು ಶಾಸಕರ ಸಮ್ಮುಖದಲ್ಲಿ ಕಾಂಗ್ರೇಸ್ ಪಕ್ಷ ಸೇರ್ಪಡೆ ಗೊಂಡ ದುರ್ಗ ಪ್ರಸಾದ್.

ಸಿರವಾರ : ಇಂದು ದಿನಾಂಕ ಏಪ್ರಿಲ್ 03 2024 ಶುಕ್ರವಾರ ಸಿರವಾರ ತಾಲೂಕಿನ ಉದಯವನದಲ್ಲಿ ಜರುಗಿದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ರಾಯಚೂರು ಲೋಕ ಸಭಾ ಚುನಾವಣೆಯ ಅಭ್ಯರ್ಥಿಯಾಗಿರುವ ಜಿ ಕುಮಾರ ನಾಯಕ ಅವರ ಸಾಮಾಜಿಕ ಕಾರ್ಯ ಮತ್ತು ಶ್ರೀ ಎನ್ ಎಸ್ ಬೋಸರಾಜು ಹಾಗೂ ಶಾಸಕರಾದ ಶ್ರೀ ಜಿ ಹಂಪಯ್ಯ ಸಾಹುಕಾರ ಅವರ ನಾಯಕ್ತ್ವ ಮೆಚ್ಚಿಕೊಂಡು, ಸಿರವಾರ ತಾಲೂಕಿನ ವಿದ್ಯಾನಗರದ ವಾರ್ಡ್ನ ಯುವ ಮುಖಂಡ ಸಾಮಾಜ ಸೇವಕ ದುರ್ಗಾಪ್ರಸಾದ್ ಅವರು ಇಂದು ಕಾಂಗ್ರೇಸ್ ಪಕ್ಷ ಸೇರಿಕೊಂಡರು. ಕಳೆದ ನಾಲ್ಕೈದು ವರ್ಷಗಳಿಂದ ತಾಲೂಕಿನಲ್ಲಿ ಸಾಮೂಹಿಕ ವಿವಾಹ, ಮತ್ತು ಇನ್ನಿತರ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಯುವ ಉತ್ಸಾಹಿ ದುರ್ಗಾಪ್ರಸದ ಅವರು ಕಾಂಗ್ರೇಸ್ ಪಕ್ಷ ಸೇರಿಕೊಂಡಿರುವುದು ಸ್ನೇಹಿತರ ಬಳಗಕ್ಕೆ ಹರ್ಷ ಉಂಟುಮಾಡಿದ್ದಲ್ಲದೆ ಇವರ ಈ ತೀರ್ಮಾನಕ್ಕೆ ಸ್ವಾಗತ ಕೋರಿ ಅಭಿನಂದನೆಗಳು ಸಲ್ಲಿಸಿದ್ದರೆ.
ರಾಯಚೂರು ಲೋಕಸಭೆ ಚುನಾವಣೆಯ ಗೆಲುವಿನ ನಾಗ ಲೋಟದಲ್ಲಿರುವ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಇನ್ನಷ್ಟು ಬಲ ತುಂಬಲು ಯುವ ಉತ್ಸಾಹಿ ಯುವಕರನ್ನು ಪಕ್ಷಕ್ಕೆ ಸೇರ್ಪಡೆ ಗೊಳ್ಳಿಸುವುದರ ಮೂಲಕ ಪಕ್ಷದಲ್ಲಿ ಯುವ ಶಕ್ತಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರಾದ. ಪಂಚ ಗ್ಯಾರಂಟಿಯ ತಾಲೂಕಿನ ಅಧ್ಯಕ್ಷರಾದ ಬ್ರಿಜೇಶ್ ಪಾಟೀಲ್ ಗೌಡ,ಎನ್ ಉದಯ ಸಾಹುಕಾರ, ಉಮೇಶಪ್ಪ ಸಾಹುಕಾರ ಚುಕ್ಕಿ,ಕೆ. ಶರಣಯ್ಯ, ರಮೇಶ್ ದರ್ಶನ್ಕರ, ದಾನನ್ ಗೌಡ, ಹಸೇನ್ ಅಲಿ ಸಾಬ್, ಶಿವುಕುಮಾರ್, ಹೆಚ್. ಕೆ. ಅಮರೇಶ್, ಬಡ್ಡ ಹನುಮಂತಪ್ಪ, ಅಬ್ರಹಾಂ ಹೊನ್ನಟಗಿ, ಜಯಪ್ಪ ಕೆಂಪು, ಜಯಪ್ಪ ಗುತ್ತೇದಾರ್, ಮನೋಹರ ಇವರು ಭಾಗಿಯಾಗಿದ್ದರು.
Recent comments