Skip to main content
ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ಹಾಕಿದ ಮಾನ್ಯ ಶಾಸಕ ರಾಜಾವೆಂಕಟಪ್ಪ ನಾಯಕ.

ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ಹಾಕಿದ ಮಾನ್ಯ ಶಾಸಕ ರಾಜಾವೆಂಕಟಪ್ಪ ನಾಯಕ.

ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ಹಾಕಿದ ಮಾನ್ಯ ಶಾಸಕ ರಾಜಾವೆಂಕಟಪ್ಪ ನಾಯಕ.

Raichur

ಸಿರವಾರ : ಪರಿಸರ ದಿನಾಚರಣೆಯ ಅಂಗವಾಗಿ ಮಾನ್ವಿ ವಿಧಾನಸಭಾ ಕ್ಷೆತ್ರದ ಶಾಸಕರಾದ ಶ್ರೀ ರಾಜಾವೆಂಕಟಪ್ಪ ನಾಯಕ ಇವರು ಸಿರವಾರ ತಾಲೂಕಿನ ವಾರ್ಡ್ ನಂ 01 ರಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಿದರು.ಇದೇ ಸಂದರ್ಭದಲ್ಲಿ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪರಿಸರ ಕಾಳಜಿ ನಮ್ಮೆಲ್ಲರ ಹೊ ಣೆಯಾಗಿದೆ ಗಿಡಮರಗಳನ್ನು ಬೆಳಸುವುದರಿಂದ,ಉತ್ತಮ ಪರಿಸರ ನಿರ್ಮಾಣವಾಗುವುದರ ಜೊತೆಗೆ ಅಗತ್ಯವಾದ ಆಮ್ಲಜನಕ (ಆಕ್ಸಿಜನ್ )ದೊರೆಯುತ್ತದೆ ಎಂದು ಹೇಳಿದ್ರು.

Raichur

ಅಲ್ಲದೇ ಈಗಾಗಲೇ ದೇಶದಲ್ಲಿ ಹರಡಿರುವ ಕೊರೋನಾ ರೋಗದಿಂದ ಇಡೀ ಜಗತ್ತು ಸಾಕಷ್ಟು ಸಾವು ನೋವುಗಳನ್ನು ಅನುಭವಿಸುತ್ತಿದ್ದು,ಇಂತಹ ಸಂದರ್ಭದಲ್ಲಿ ಆಕ್ಸಿಜನ್ ಕೊಂಡುಕೊಂಡು ಜೀವ ರಕ್ಷಣೆ ಮಾಡಿಕೊಳ್ಳುವಂತಹ ಸಮಯ ನಿರ್ಮಾಣವಾಗಿದ್ದು,ಪರಿಸರ ಕಾಳಜಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಜೊತೆಗೆ ಪಕ್ಕದ ಸಿರವಾರ ತಾಲೂಕಿನ ಮೂರರಾರ್ಜಿ ಶಾಲೆಯಲ್ಲಿರುವ ಕೋವಿಡ್ ಸೆಂಟರ್ಗೆ ಭೇಟಿನೀಡಿ ಕೊರೊನಾ ಸೊಂಕಿತಾ ರೋಗಿಗಳ ಅರೋಗ್ಯ ವಿಚಾರಿಸಿ ಅವರಿಗೆ ಪುಡ್ಕಿಟ್ ನೀಡಿ ಅವರಿಗೆ ಆತ್ಮಸ್ಥೈರ್ಯ ನೀಡಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ,ತಾಲೂಕ ಅಧ್ಯಕ್ಷ ರಾದ ಮಲ್ಲಿಕಾರ್ಜುನ ಗೌಡ ಟಿ,ಜಿ ಲೋಕರೆಡ್ಡಿ,ದಾನಪ್ಪ,ನಾಗರಾಜ್ ಗೌಡ,ರವಿಕುಮಾರ್ ಮಾನ್ವಿ,ಗ್ಯಾನಪ್ಪ ಸುಜಪ್ಪ ಇನ್ನಿತರ ಜೆಡಿಎಸ್ ಮುಖಂಡರು ಭಾಗಿಯಾಗಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.