Skip to main content
ಸಿರವಾರ ತಾಲೂಕ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ- ಸಚಿವ ಎನ್ಎಸ್ ಬೋಸರಾಜು*

ಸಿರವಾರ ತಾಲೂಕ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ- ಸಚಿವ ಎನ್ಎಸ್ ಬೋಸರಾಜು*

ಸಿರವಾರ- 5 ಕೋಟಿ 16 ಲಕ್ಷ ರೂನ ವಿವಿಧ ಕಾಮಗಾರಿಗಳಿಗೆ ಸಚಿವ ಎನ್ ಎಸ್ ಬೋಸರಾಜು ಶಾಸಕ ಹಂಪಯ್ಯ ನಾಯಕ್ ಅವರಿಂದ ಭೂಮಿ ಪೂಜೆ.

Raichur

ಸಿರವಾರ ತಾಲೂಕ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ- ಸಚಿವ ಎನ್ಎಸ್ ಬೋಸರಾಜು.

ಈ ಭಾಗದ ಅಭಿವೃದ್ಧಿಗೆ ಕೆಕೆಆರ್ ಡಿಬಿಯಿಂದ ಹೆಚ್ಚಿನ ಅನುದಾನ-ಸಚಿವ ಎನ್ಎಸ್ ಬೋಸರಾಜು.

ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನ- ಎನ್ ಎಸ್ ಬೋಸರಾಜು.

ರಾಯಚೂರು ಗ್ರಾಮೀಣ ಭಾಗದ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಸರ್ವಾಂಗಣ ಅಭಿವೃದ್ದಿಗಾಗಿ ಹೆಚ್ಚಿನ ಅನುದಾನವನ್ನು ನೀಡಲಾಗುತ್ತಿದೆ. ಸಿರವಾರ ತಾಲೂಕು ಅಭಿವೃದ್ಧಿಗೆ ನಮ್ಮ ಸರ್ಕಾರದ ಬದ್ಧವಾಗಿದೆ.

ಅಲ್ಲದೆ ವಿಶೇಷವಾಗಿ ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹೆಚ್ಚಿನ ಅನುದಾನವನ್ನು ನೀಡುತ್ತಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ತಿಳಿಸಿದರು. ಸಿರವಾರ ತಲೂಕಿನ ಮಲ್ಲಟ, ಬಲ್ಲಟಗಿ, ಕೆ ಗುಡದಿನ್ನಿ ಸೇರಿ ವಿವಿಧೆಡೆ 5 ಕೋಟಿ 16 ಲಕ್ಷ ರೂನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ ಅವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು‌.

ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅನೇಕ ಜನಪರ ಯೋಜನೆಗಳನ್ನು ರೂಪಿಸುತ್ತಾ ಕಲ್ಯಾಣ ಭಾಗದ ಜನರ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯಿಂದ ನಮ್ಮ ಸರ್ಕಾರ ಹೆಚ್ಚಿನ ಅನುದಾನದೊಂದಿಗೆ ಸರ್ವಾಂಗೀಣ ಅಭಿವೃದ್ಧಿಗಾಗಿ ಬದ್ದವಾಗಿದೆ ಎಂದು ಅಭಿಪ್ರಯ ವ್ಯಕ್ತಪಡಿಸಿದರು ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ 10 ಲಕ್ಷ ರೂ ವೆಚ್ಚದ ಕೆಕೆಆರ್‌ಡಿಬಿಯ ಮೈಕ್ರೋ ಯೋಜನೆ ಅಡಿಯಲ್ಲಿ ಸಿಸಿ ರಸ್ತೆ ಕಾಮಗಾರಿ ಹಾಗೂ ಸರ್ಕಾರಿ ಪ್ರೌಢಶಾಲೆ ಗೆ 17-50 ಲಕ್ಷ ರೂ ನ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಮಾಡಿದರು.

ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮ್ಯಾಕ್ರೋ ಯೋಜನೆಯ ಅಡಿಯಲ್ಲಿ 20. 87 ಲಕ್ಷ ಬಸ್ ಸೆಲ್ಟರ್ ನಿರ್ಮಾಣ, 25 ಲಕ್ಷ ರೂ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿ, 30.27 ಲಕ್ಷ ರೂ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಂಪೌಂಡ್ ವಾಲ್ ನಿರ್ಮಾಣ, 1 ಕೋಟಿ 13 ಲಕ್ಷ ವೆಚ್ಚದಲ್ಲಿ ಬಲ್ಲಟಗಿ ಗ್ರಾಮದ ಮುಖ್ಯರಸ್ತೆಗೆ ಕ್ರಾಸ್ ಬ್ಯಾರಿಯರ್ ಅಳವಡಿಕೆ, ಪಲ್ಲಟಿಗೆ ಲಮಾಣಿ ಕ್ಯಾಂಪನಲ್ಲಿ 1 ಕೋಟಿ 24 ಲಕ್ಷ ರೂ ವೆಚ್ಚದಲ್ಲಿ ಬಲ್ಲಟಗಿ ಕ್ಯಾಂಪ್ ವರೆಗೆ ರಸ್ತೆ ಡಾಂಬರಿಕರಣ ಸೇರಿ ಸುಮಾರು ಕೆಕೆಆರ್‌ಡಿಬಿಯ ಮುಖ್ಯಮಂತ್ರಿಗಳ ವಿವೇಚನಾ ನಿಧಿಯಿಂದ 50 ಲಕ್ಷ ರೂ ಸಿಸಿ ರಸ್ತೆ ಕಾಮಗಾರಿಗಳು ಹಾಗೂ ಕೆಕೆಆರ್ ಡಿಬಿಯ ಮ್ಯಾಕ್ರೋ ಅನುದಾನದಡಿ 45 ಲಕ್ಷ ರೂ ವೆಚ್ಚದಲ್ಲಿ ವಿವಿಧಡೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶರಣಯ್ಯ ನಾಯಕ, ಬ್ರಿಜ್ಜೇಶ ಪಾಟೀಲ್, ಮಾಜಿ ಜಿಪಂ ಸದಸ್ಯರಾದ, ಗಂಗಣ್ಣ ಸಾಹುಕಾರ, ಕೆ ಶಾಂತಪ್ಪ, ಬಲ್ಲಟಗಿ ಅಮರೇಶಪ್ಪ, ಕಿರಲಿಂಗಪ್ಪ, ಶಿವಮೂರ್ತಿ, ಮಲ್ಲಟ ಮಲ್ಲಿಕಾರ್ಜುನ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ,‌ ದೇವೆಂದ್ರಪ್ಪ ಬೊಮ್ಮನಾಳ, ದಾನಗೌಡ ಬಸವರಾಜ ಪಾಟೀಲ್, ನಾಗಪ್ಪ ನವಲಕಲ್, ರಮೇಶ ದರ್ಶನಕರ್, ಬೀರಪ್ಪ, ಶಿವಣ್ಣ, ಪ್ರವೀಣ, ನಾಗರಾಜ ಸೇರಿದಂತೆ ಅನೇಕರು ಇದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.