ಎಸ್ಸಿ/ ಎಸ್ಟಿ ಒಳಮೀಸಲಾತಿಗೆ ಸುಪ್ರೀಮ್ ಕೋರ್ಟ್ ಗ್ರೀನ್ ಸಿಗ್ನಲ್ .
ಎಸ್ಸಿ/ ಎಸ್ಟಿ ಒಳಮೀಸಲಾತಿಗೆ ಸುಪ್ರೀಮ್ ಕೋರ್ಟ್ ಗ್ರೀನ್ ಸಿಗ್ನಲ್ .

ಸತತ ಮೂವತ್ತು ವರ್ಷಗಳಿಂದ ಒಳಮೀಸಲಾತಿ ಹೋರಾಟದ ವಿಚಾರಕ್ಕೆ ನಡೆಸಿದ ದಲಿತ ಸಂಘಟನೆಗಳ ಸುದೀರ್ಘ ಹೋರಾಟಕ್ಕೆ ಇಂದು ಸುಪ್ರೀಮ್ ಕೋರ್ಟ್ನ 7 ಸದ್ಯಸ್ಯರ ಪೀಠ ಮಹತ್ವದ ತೀರ್ಪು ಹೊರಡಿಸಿದ್ದು, ಪರಿಶಿಷ್ಟ ಜಾತಿ, ಪಂಗಡಗಳಲ್ಲಿ ಅತ್ಯಂತ ಹಿಂದುಳಿದಿರುವ ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲು ಒಳ ಮೀಸಲಾತಿಯನ್ನು ಒದಗಿಸುವ ಪ್ರಸ್ತಾವಕ್ಕೆ ಸುಪ್ರೀಂ ಕೋರ್ಟ್ನ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಸಮ್ಮತಿ ಸೂಚಿಸಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠವು 6-1 ಅಂತರದ ಬಹುಮತದ ತೀರ್ಪಿನ ಮೂಲಕ ಒಳ ಮೀಸಲಾತಿ ಪ್ರಸ್ತಾವವನ್ನು ಎತ್ತಿ ಹಿಡಿದಿದೆ.
ನ್ಯಾ. ಬೇಲಾ ಮಾತ್ರ ಈ ಪ್ರಸ್ತಾವಕ್ಕೆ ಭಿನ್ನಮತ ವ್ಯಕ್ತಪಡಿಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಗಳಲ್ಲಿ ಅತ್ಯಂತ ಹಿಂದುಳಿದಿರುವ ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲು ಒಳ ಮೀಸಲಾತಿಯನ್ನು ಒದಗಿಸುವ ಪ್ರಸ್ತಾವಕ್ಕೆ ಸುಪ್ರೀಂ ಕೋರ್ಟ್ನ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಸಮ್ಮತಿ ಸೂಚಿಸಿದ್ದು. ರಾಜ್ಯವು ಉಪ-ವರ್ಗದ ಪ್ರಾತಿನಿಧ್ಯದ ಅಸಮರ್ಪಕತೆಯ ಬಗ್ಗೆ ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ಒಳ ಮೀಸಲಾತಿ ಸಮರ್ಥಿಸಬೇಕಾಗಿದೆ ಎಂದಿದೆ.
ದಲಿತ ಸಂಘನೆಗಳ ಒಳಮೀಸಲಾತಿ ಹೋರಾಟಕ್ಕೆ ಸುಪ್ರೀಮ್ ಕೋರ್ಟ್ ಅಸ್ತು ಎಂದಿದೆ.

ಸುದೀರ್ಘ ಹೋರಾಟದ ಫಲಕ್ಕೆ ದಲಿತ ಸಂಘಟನೆಗಳು ಘೋಷಣೆಗಳ ಕೂಗುವ ಮೂಲಕ ಸಂತೋಷವನ್ನು ವ್ಯಕ್ತ ಪಡಿಸಿದ್ದು,ಸಂವಿಧಾನದ ಆಸೆಯಗಳನ್ನ ಎತ್ತಿಹಿಡಿದ ದೇಶದ ಸರ್ವೊಚ್ಚ ನ್ಯಾಯಲದ 7 ಸದ್ಯಸ್ಯರ ಪೀಠಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಅನುಷ್ಠಾನ ಗೋಳಿಸುವುದಕ್ಕಾಗಿ ರಾಜ್ಯದ ವಿವಿಧ ದಲಿತ ಪರ ಸಂಘಟನೆಗಳು ಮೂರು ದಶಕಗಳಿಂದ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದು,ಅದರಲ್ಲಿ ತಮ್ಮ ಕುಟುಂಬ,ಊರು, ಎಲ್ಲವನ್ನು ತೊರೆದು ಜಿವವನ್ನು ಕಳೆದು ಕೊಂಡಂತಹ ಉದಾಹರಣೆಗಳು ಉಂಟು ಅದರಲ್ಲಿ ಇವತ್ತೀನ ನ್ಯಾಯಲದ ಈ ಮಹತ್ವದ ತೀರ್ಪಿನಿಂದಾಗಿ ಅಂತಹ ಹೋರಾಟಗಾರಿಗೆ ನ್ಯಾಯ ಒದಗಿಸಿದಂತಾಗಿದೆ.
ಇಂದು ಸಿರವಾರ ತಾಲುಕಿನ ವಿವಿಧ ದಲಿತ ಪರ ಸಂಘಟನೆಗಳು ಒಗ್ಗೂಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಮತ್ತು ಉಪ ಪ್ರಧಾನಿಯಾಗಿದ್ದ ದಿವಂಗತ ಬಾಬು ಜಗಜೀವನ ರಾಮ್ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸಂಘಟಕರು ಹರ್ಷೋದ್ಗರಾ ವ್ಯಕ್ತ ಪಡಿಸಿದರು. ಇದೇ ಸಂದರ್ಭದಲ್ಲಿ ರಾಯಚೂರು ಮಾದಿಗ ಮೀಸಲಾತಿ ಹೋರಾಟ ಸಮೀತಿಯ ಜಿಲ್ಲಾಧ್ಯಕ್ಷರಾದ ಜೆ.ಅಬ್ರಾಹಂ ಹೋನ್ನಟ್ಟಗಿ ಯವರು ಮಾತನಾಡಿ ಒಳಮೀಸಲಾತಿಯ ಸುದೀರ್ಘ ಹೋರಾಟದ ಪ್ರಾರಂಭದ ದಿನಗಳನ್ನು ನೇನಪು ಮಾಡಿಕೊಳ್ಳುತ್ತ ಹೋರಾಟದಲ್ಲಿ ಭಾಗಿಯಾಗಿ ಯಶ್ವಸಿಗೆ ಕಾರಣರಾದ ದಲಿತ ಹೋರಾಟಗಾರರಿಗೆ ಅಭಿನಂದಿಸಿದರಲ್ಲದೇ ,ಸುಪ್ರೀಮ್ ಕೊರ್ಟ್ ನೀಡಿರುವ ತೀರ್ಪಿಗೆ ಅಭಿನಂದಿಸಿದರು.
ಜೊತೆಗೆ ಈ ತೀರ್ಪಿನಿಂದ ಮುಂದಿನ ದಿನಮಾನಗಳಲ್ಲಿ ಒಳಮೀಸಲಾತಿ ವರ್ಗಕ್ಕೆ ಒಳಪಡುವ ಸಮಾಜದ ಜನತೆಗೆ ಒಳಿತಾಗುವುದಲ್ಲದೇ ಸಾಮಾಜಿಕವಾಗಿ ,ಆರ್ಥಿಕವಾಗಿ ,ಶೈಕ್ಷಣಿಕವಾಗಿ ಅಭಿವೃದ್ದಿ ಸಾಧಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಒಗ್ಗಟಿನಿಂದ ಸಮಾಜದ ಬೆಳವಣಿಗೆಗೆ ಶ್ರಮಿಸಬೇಕಾಗಿದೆ ಎಂದು ಹೇಳಿದರು.

ದಲಿತ ಯುವ ಹೋರಾಟಗಾರ ಮೇಶಕ್ ದೊಡ್ಡಮನಿ ಯವರು ಮಾತನಾಡಿ ವಿವಿಧ ಅನ್ಯ ರಾಜ್ಯಗಳು ಒಳಮೀಸಲಾತಿ ಹೋರಾಟಕ್ಕೆ ಶ್ರಮಸಿದ ಪರಿ ಹಾಗೂ ವರ್ಗಿಕರಣದ ಅಂಶಗಳ ಬಗ್ಗೆ ಮಾತನಾಡುವುದರೊಂದಿಗೆ ಸಂವಿಧಾನಕ್ಕೆ ಅನುಗೂಣವಾಗಿ ನೀಡಿರುವ ಸುಪ್ರೀಮ್ ಕೋರ್ಟ್ ಆದೇಶವನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಿರವಾರ ತಾಲುಕಿನ ವಿವಿಧ ದಲಿತ ಸಂಘಟನೆಯ ಹಿರಿಯ ಹೋರಾಟಗಾರರದ ರಾಜಪ್ಪ ಹೊನ್ನಟ್ಟಗಿ,ಪ್ರಾಕಶಪ್ಪ ಎಮ್ .ಹನುಮಂತಪ್ಪ ಬಡ್ಡಪ್ಪ,ಮತ್ತಾಯಪ್ಪ,ಮಲ್ಲಪ್ಪ ದೊಡ್ಡಮನಿ, ಗ್ಯಾನಪ್ಪ ಸೂಜಪ್ಪ ,ಮಲ್ಲಪ್ಪ ನಾರಬಂಡಿ, ಅರಳಪ್ಪ, ಜಯಪ್ಪ ಗುತ್ತೆದಾರ, ಜಯಪ್ಪ ಡಿ ಕೆಂಪು, ಮೈಕಲ್ ದಾಬಾ ,ಚನ್ನಪ್ಪ ಬುದಿನಾಳ್ , ಮಲ್ಲಪ್ಪ ನವಲಕಲ್ , ಮಲ್ಲಪ್ಪ ಜಿಂದವಾಲಿ, ಶಾಂತಪ್ಪ ಪಿತ್ತಗಲ್ ,ಮೇಶಕ್ ಕೆಂಪು, ,ಹನುಮಂತ ಬೇರಿ, ಅರುಣ್ ಕುಮಾರ್, ಜಯರಾಜ್ ,ಹನುಮಂತ ಡೋಲು. ಪ್ರಭಾಕರ್ ಅರ್ನಳ್ಳಿ, ಮುತ್ತಣ್ಣ ಚಾಗಬಾವಿ, ಬಸವರಾಜ್ ಜಂಬಲದಿನ್ನಿ, ಹನುಮೇಶ್ ಶಾಕಪುರ್, ಯಲ್ಲಪ್ಪ ನವಲಕಲ್, , ಜಯರಾಜ್ ಜಾಡಲ್ದಿನ್ನಿ, ಹುಲಿಗೆಪ್ಪ ಶಾಖಾಪುರ್, ಶಿವಪ್ಪ ಶಾಖಪುರ್ , ಬಸವರಾಜ್ ಗಚ್ಚಿನ ಮನೆ ಅತ್ತನೂರು, ಅಂಬರೀಶ್ ಅತ್ತನೂರು, ಬಸವರಾಜ್ ಶಾಖಪುರ್, ಇನ್ನು ಉಳಿದ ಸಿರುವಾರ್ ಹಿರಿಯ ಮುಖಂಡರುಗಳ ಹಾಗೂ ಭಾಗಿಯಾಗಿದ್ದರು.
Recent comments