Skip to main content
ಸಾದಿಕ್ ಖಾನ್ ಅವರಿಗೆ *ಕೊರೊನಾ ಯೋಧ* ಎಂದು ಗೌರವ ಸನ್ಮಾನ.

ಸಾದಿಕ್ ಖಾನ್ ಅವರಿಗೆ *ಕೊರೊನಾ ಯೋಧ* ಎಂದು ಗೌರವ ಸನ್ಮಾನ.

ಸಾದಿಕ್ ಖಾನ್ ಅವರಿಗೆ *ಕೊರೊನಾ ಯೋಧ* ಎಂದು ಗೌರವ ಸನ್ಮಾನ.

Raichur

ಬೆಂಗಳೂರಿನ ಕರ್ನಾಟಕ ಯೂತ್ ವೆಲ್ ಫೇರ್ ಅಸೋಸಿಯೇಶನ್ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕರಾಟೆ ಡಾ.ಎ ಪಿ ಶ್ರೀನಾಥ್ ರವರಿಂದ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಮತ್ತು ಅಪ್ಪು ಯೂತ್ ಬ್ರಿಗೇಡ್ ರಾಯಚೂರು ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಸಾಧಿಕ್ ಖಾನ್ ರವರು ಕೊರೋನಾ ಸಂದರ್ಭದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ *ಕರೋನಾ ಯೋಧ* ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಆ ಸಂದರ್ಭದಲ್ಲಿ ಅವರು ಮಾಡಿರುವಂತಹ ಸೇವೆ ಮತ್ತು ನಿರಂತರ ಮೂರು ಒಪ್ಪತ್ತಿನ ಊಟದ ವ್ಯವಸ್ಥೆ ನಿರಾಶ್ರಿತರಿಗೆ , ವಲಸೆಗಾರರಿಗೆ, ಆಟೋ ಚಾಲಕರಿಗೆ , ಅಂಬುಲೆನ್ಸ್ ಡ್ರೈವರ್ ಗಳಿಗೆ , ಲಾರಿ ಚಾಲಕರಿಗೆ ಊಟ ವಿತರಣೆ ಮಾಡಿ , 5 ಸಾವಿರಕ್ಕೂ ಹೆಚ್ಚು ಮಾಸ್ಕ್ ಗಳನ್ನೂ ಉಚಿತ ವಿತರಣೆ, ವೀಕೆಂಡ್ ನಲ್ಲಿ ರೋಗಿಗಳಿಗೆ ಉಚಿತ ಆಟೋ ಸೌಲಭ್ಯ, ಮತ್ತು ಇದುವರೆಗೂ ಮೂವತ್ತಕ್ಕೂ ಹೆಚ್ಚು ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಇನ್ನೂ ಹತ್ತು ಹಲವಾರು ಇವರ ಸೇವೆಗೆ ದೊರೆತ ಸನ್ಮಾನ ವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕರಾಟೆ ಡಾ .ಎ ಪಿ ಶ್ರೀನಾಥ್ ರವರು ಡಾ. ಎಸ್ ರಾಘವೇಂದ್ರ ಗೌಡ್ರು ರವರು ಮತ್ತು ರಾಯಚೂರ್ ಜಿಲ್ಲಾ ಜಿಲ್ಲಾಧ್ಯಕ್ಷರಾದ ಸಾಧಿಕ್ ಖಾನ್ ನಾಡು ,ನುಡಿ ,ಜಲ ,ಭಾಷೆ ಸಂಸ್ಕೃತಿ ಮತ್ತು ಸರ್ಕಾರಿ ಶಾಲೆ ಅಭಿವೃದ್ಧಿ ಪರ ರೈತರ ಪರ ಕಾರ್ಮಿಕರ ಪರ ಅನ್ಯಾಯದ ವಿರುದ್ಧ ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡು ಬಂದಿರುತ್ತಾರೆ, ಮತ್ತು ಕರೋನಾ ಒಂದನೇ ಅಲೆಯಿಂದ ಮೂರನೇ ಅಲೆಯ ಸಂದರ್ಭದಲ್ಲಿ ಜನ ಸೇವೆ ಜನಾರ್ಧನ ಸೇವೆಯೆಂದು ವೈಯಕ್ತಿಕವಾಗಿ 400 ದಿನಕ್ಕೂ ಹೆಚ್ಚು ದಿನಗಳಿಂದ ಅನ್ನದಾನ ಮಾಡುತ್ತ ಬರುತ್ತಿದ್ದಾರೆ ಹಾಗೂ ಕೋರೋನ ವೈರಸ್ ಬಗ್ಗೆ ರಾಯಚೂರು ನಗರದ ಜನರಲ್ಲಿ ಜಾಗೃತಿ ಮೂಡಿಸಿದ್ದರು. *ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ಮತ್ತು ಅಪ್ಪು ಯೂತ್ ಬ್ರಿಗೇಡ್ ರಾಯಚೂರು ಜಿಲ್ಲಾಧ್ಯಕ್ಷರಾದ ಸಾಧಿಕ್ ಖಾನ್ ರವರ ಇವರ ಸೇವೆಯನ್ನು ಗುರುತಿಸಿ* ಕೋವಿಡ-19 ಕರೊನಾ ಯೋಧರೆಂದು ಅಭಿನಂದನಾ ಪತ್ರ ಕೊಟ್ಟು ಗೌರವಿಸಲಾಯಿತು ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಉದ್ಯಮ ಘಟಕ ರಾಜ್ಯಾಧ್ಯಕ್ಷರಾದ ಡಾ. ಕೆ ಮುತ್ತು ಕುಮಾರ್ ರಾಜ್ಯ ಹಿರಿಯ ಸಲಹೆಗಾರರಾದ ಡಾ.ಕರಾಟೆ ಎಪಿ ಶ್ರೀನಾಥ್ ರವರು ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ.ಶ್ರೀನಿವಾಸ ಸಿ ಮತ್ತು ಸಾಯಿ ಕಿರಣ್ ಆದೋನಿ , ಚಿಕ್ಬಳ್ಳಾಪುರ ಜಿಲ್ಲಾಧ್ಯಕ್ಷರಾದ ರಿಯಾಜ್ ಅಹಮದ್ ಮತ್ತು ಕೋಲಾರ ಜಿಲ್ಲಾ ಜಿಲ್ಲಾಧ್ಯಕ್ಷರಾದ ಹೊಸಕೆರೆ ಶ್ರೀನಿವಾಸ್ ರವರು ಚಾಲಕರ ಘಟಕದ ಬೆಂಗಳೂರು ನಗರ ಉಪಾಧ್ಯಕ್ಷರಾದ ಸಿದ್ದೇಶ್ ಹಾಗೂ ಪ್ರದೀಪ್ ಮತ್ತು ರಾಯಚೂರು ಜಿಲ್ಲೆಯ ಜಿಲ್ಲೆಯ ಪದಾಧಿಕಾರಿಗಳು ಭಾಗವಹಿಸಿದರು

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.