Skip to main content
ಶಿವರಾಮಣ್ಣನಿಗೆ ಡಾ||ಅರವಿಂದ್ ರಾವ್ ಹಾಗೂ ಡಾ||ಕಾಮಿನಿರಾವ್ ಕುಟುಂಬದಿಂದ  ಶ್ರದ್ಧಾಂಜಲಿ.

ಶಿವರಾಮಣ್ಣನಿಗೆ ಡಾ||ಅರವಿಂದ್ ರಾವ್ ಹಾಗೂ ಡಾ||ಕಾಮಿನಿರಾವ್ ಕುಟುಂಬದಿಂದ ಶ್ರದ್ಧಾಂಜಲಿ.

ಶಿವರಾಮಣ್ಣನಿಗೆ ಡಾ||ಅರವಿಂದ್ ರಾವ್ ಹಾಗೂ ಡಾ||ಕಾಮಿನಿರಾವ್ ಕುಟುಂಬದಿಂದ ಶ್ರದ್ಧಾಂಜಲಿ.

Kannada new film

*ಕನ್ನಡದ ಹಿರಿಯನಟರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗಿ.

ಕನ್ನಡ ಚಿತ್ರರಂಗದ ಎಲ್ಲಾ ಚಟುವಟಿಕೆಗಳಲ್ಲೂ ಪಾದರಸದಂತೆ ಪಾಲ್ಗೊಳ್ಳುತ್ತಿದ್ದ, ಶಿವರಾಮಣ್ಣ ಅವರ ನಿಧನ ನಿಜಕ್ಕೂ ನೋವಿನ ಸಂಗತಿ. ಬೆಂಗಳೂರಿನ ಖ್ಯಾತ ವೈದ್ಯರಾದ ಡಾ||ಅರವಿಂದ್ ರಾವ್ ಹಾಗೂ ಡಾ||ಕಾಮಿನಿರಾವ್ ಅವರ ಕುಟುಂಬಕ್ಕೂ ಹಾಗೂ ಶಿವರಾಮ್ ಅವರಿಗೂ ಅರ್ಧ ಶತಕಕ್ಕೂ ಮೀರಿದ ನಂಟು. ಶಿವರಾಮ್ ಅವರ ನಿಧನದಿಂದ ಅರವಿಂದ್ ರಾವ್ ಅವರ ಕುಟುಂಬ ಶೋಕಸಾಗರದಲ್ಲಿ ಮುಳಗಿದೆ. ಈ ಕುಟುಂಬದವರು ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಹಿರಿಯ ಕಲಾವಿದರಾದ ಶ್ರೀನಾಥ್, ಶ್ರೀನಿವಾಸಮೂರ್ತಿ, ಸುಂದರರಾಜ್, ಜೈಜಗದೀಶ್ ಹಾಗೂ ಶಿವರಾಮ್ ಅವರ ಮಕ್ಕಳು ಪಾಲ್ಗೊಂಡಿದ್ದರು. ನನ್ನ ಹಾಗೂ ಶಿವರಾಮ್ ಅವರ ಸ್ನೇಹ ಐವತ್ತು ವರ್ಷಕ್ಕೂ ಹೆಚ್ಚಿನದು.

ನಾನು ಚಿಕ್ಕವನಿದಾಗ "ನಮ್ಮ ಮಕ್ಕಳು" ಚಿತ್ರದಲ್ಲಿ ಅಭಿನಯಿಸಿದ್ದೆ. ಅದಕ್ಕೆ ಶಿವರಾಮ್ ಅವರೆ ಕಾರಣ. ನಮ್ಮ ಕುಟುಂಬದ ಎಲ್ಲಾ ಕಾರ್ಯಕ್ರಮಗಳಲ್ಲೂ ಅವರು ಪಾಲ್ಗೊಳ್ಳುತ್ತಿದ್ದರು. ಅವರು ನಿಧನರಾದಾಗ ಅನಿವಾರ್ಯ ಕಾರಣದಿಂದ ಹೋಗಲು ಆಗಿರಲಿಲ್ಲ. ಆ ನೋವನ್ನು ನನ್ನ ಸೊಸೆ ಪೂಜಾ ಬಳಿ ಹೇಳಿಕೊಂಡೆ, ಅವರು ಈ ರೀತಿ ಶಿವರಾಮ್ ಅವರಿಗೆ ಗೌರವ ಸಲ್ಲಿಸೋಣ ಎಂದು ಸಲಹೆ ನೀಡಿದರು. ಶಿವರಾಮ್ ಅವರ‌ ಬಗ್ಗೆ ನೆನಪಿಸಿಕೊಳ್ಳಲು ಸಾಕಷ್ಟಿದೆ ಎಂದು ಭಾವುಕರಾದರು ಡಾ||ಅರವಿಂದ್ ರಾವ್.

ಡಾ||ಕಾಮಿನಿ ರಾವ್ ಸಹ ಶಿವರಾಮ ಅವರ ಹಲವು ವಿಚಾರಗಳನ್ನು ಮೆಲಕು ಹಾಕಿದರು. ನನಗೆ "ಲಗ್ನಪತ್ರಿಕೆ" ಚಿತ್ರದಲ್ಲಿ ಅವಕಾಶ ಕೊಡಿಸಿದ್ದೆ ಶಿವರಾಮಣ್ಣ. ಪುಟ್ಟಣ್ಣ ಅವರಿಗೆ ಹೇಳಿ ನನ್ನನ್ನು ಶುಭಮಂಗಳ ಚಿತ್ರದ ಮೂಲಕ ನಾಯಕನನಾಗಿ ಮಾಡಿದ್ದೆ ಅವರು. ಶಿವರಾಮ್ ಅವರು ನನಗೆ ಅಣ್ಣ, ಅಪ್ಪ, ಸ್ನೇಹಿತ ಎಲ್ಲಾ ಆಗಿದರು ಎಂದರು ಶ್ರೀನಾಥ್. ಶಿವರಾಮ್ ಅವರು ‌ಬಹಳ ಸ್ನೇಹಜೀವಿ. ಓದುವ ಅಭ್ಯಾಸ ಹೆಚ್ಚಾಗಿ ಇಟ್ಟುಕೊಂಡವರು. ಸಾವಿರ ಸಂಖ್ಯೆಯ ಪುಸ್ತಕಗಳು ಅವರ ಮನೆಯಲಿದ್ದವು. ನಮ್ಮ ಮನೆಯಲ್ಲೂ ಸಾಕಷ್ಟು ಪುಸ್ತಕಗಳಿದ್ದವು.

ಈ ವಿಷಯ ಕೇಳಿ ಅವರಿಗೆ ಸಂತೋಷವಾಗಿತ್ತು.‌ ನಾನು ಮಂತ್ರಾಲಯಕ್ಕೆ ಪಾದಯಾತ್ರೆ ಹೋಗಿಬಂದ ವಿಷಯ ತಿಳಿದು ಮನೆಗೆ ಬಂದು ಆರೋಗ್ಯ ವಿಚಾರಿಸಿದರು ಎಂದು ತಮ್ಮ ನೆನಪುಗಳನ್ನು ತೆರೆದಿಟ್ಟರು ಶ್ರೀನಿವಾಸಮೂರ್ತಿ. ಚಿತ್ರರಂಗದಿಂದ ಆಗಬೇಕಿದ್ದ ಕಾರ್ಯಕ್ರಮವನ್ನು ನೀವು ಮಾಡಿದ್ದಕ್ಕೆ ವಂದನೆಗಳು. ಕಲಾವಿದರ ಸಂಘಕ್ಕೆ ಶಿವರಾಮಣ್ಣ ಅವರ ಕೊಡುಗೆ ದೊಡ್ಡದು. ಅವರ ಪಾರ್ಥಿವ ಶರೀರವನ್ನು ಐದು ನಿಮಿಷಗಳ ಕಾಲವಾದರೂ ಅಲ್ಲಿ ಇಡಬೇಕಿತ್ತು ಎನ್ನುವುದು ನನ್ನ ಅನಿಸಿಕೆ ಎಂದರು ಜೈಜಗದೀಶ್. ನಾನು ಚಿತ್ರರಂಗಕ್ಕೆ ‌ಬಂದ ಕಾಲದಿಂದಲೂ ಶಿವರಾಮಣ್ಣ ನನಗೆ ಆತ್ಮೀಯರು. ನನ್ನ ಮೊದಲ ಚಿತ್ರದಲ್ಲಿ ಅವರು ಅಭಿನಯಿಸಿದ್ದರು. ಕಲಾವಿದರ ಸಂಘದಲ್ಲಿ ನಾನು ಅವರೊಟ್ಟಿಗೆ ಕೆಲಸ ಮಾಡಿದ್ದೇನೆ. ಪರಿಚಯವಿರುವ ಯಾರೇ ಸತ್ತರು, ಅವರ ಅಂತ್ಯಕ್ರಿಯೆ ಆಗುವವರೆಗೂ ಶಿವರಾಮ್ ಅವರೆ ಎಲ್ಲಾ ನೋಡಿಕೊಳ್ಳುತ್ತಿದ್ದರು‌. ಕಷ್ಟ ಎಂದ ಕಡೆ ಶಿವರಾಮಣ್ಣ ಇರುತ್ತಿದ್ದರು ಎಂದು ನಟ ಸುಂದರರಾಜ್ ದುಃಖಿತರಾದರು. ಶಿವರಾಮ್ ಪುತ್ರ ಲಕ್ಷ್ಮೀಶ್ ಸಹ ತಮ್ಮ ಮಾತುಗಳ ಮೂಲಕ ಅಪ್ಪನ ನೆನೆದರು. ಅಪರ್ಣ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಗಾಯಕಿ ಜೋಗಿ ಸುನಿತಾ, ಶಿವರಾಮ್ ಅವರು ನಟಿಸಿದ್ದ ಹಾಗೂ ನಿರ್ಮಾಣ ಮಾಡಿದ್ದ ಕೆಲವು ಚಿತ್ರಗಳ ಆಯ್ದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.