Skip to main content
ಮಸ್ಕಿ ತಾಲೂಕಿನ ಎಸ್. ಬುದ್ದಿನ್ನಿ ಗ್ರಾಮಕ್ಕೆ ಒತ್ತಾಯಿಸಿ ಎಸ್ಎಫ್ಐ ಪ್ರತಿಭಟನೆ

ಮಸ್ಕಿ ತಾಲೂಕಿನ ಎಸ್. ಬುದ್ದಿನ್ನಿ ಗ್ರಾಮಕ್ಕೆ ಒತ್ತಾಯಿಸಿ ಎಸ್ಎಫ್ಐ ಪ್ರತಿಭಟನೆ

ಮಸ್ಕಿ ತಾಲೂಕಿನ ಎಸ್. ಬುದ್ದಿನ್ನಿ ಗ್ರಾಮಕ್ಕೆ ಒತ್ತಾಯಿಸಿ ಎಸ್ಎಫ್ಐ ಪ್ರತಿಭಟನೆ.

Raichur

ರಾಯಚೂರು : ಪ್ರಸಕ್ತ ೨೦೨೧-೨೨ನೇ ಶೈಕ್ಷಣಿಕ ಸಾಲಿನಿಂದ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುದ್ದಿನ್ನಿ.ಎಸ್. ಗ್ರಾಮದಲ್ಲಿ ಪ್ರೌಢಶಾಲೆ ಆರಂಭಿಸಿ ವಿವಿಧ ೮ ಗ್ರಾಮಗಳ ೧೨೨ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ( ಎಸ್ಎಫ್ಐ ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ‌ ಮುಂಭಾಗದಲ್ಲಿ ಹೋರಾಟ ಮಾಡಿದರು.

ನಗರದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹೋರಾಟ ನಡೆಸಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುದ್ದಿನ್ನಿ ಎಸ್. ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ (ಡಯಾಸ್ ನಂ: ೨೯೦೬೦೫೦೩೫೦೨) ಪ್ರಸಕ್ತ ಸಾಲಿನಲ್ಲಿ ಬುದ್ದಿನ್ನಿಯ ೨೭, ಬೆಂಚಮರಡಿ ೧೨, ಕಾಟಗಲ್ ೨, ಮುದಬಾಳ ೧, ಹೂವಿನಬಾವಿ ೩೩ ಹಾಗೂ ಸಾನಬಾಳ ಗ್ರಾಮದ ೨ ವಿದ್ಯಾರ್ಥಿಗಳು ಸೇರಿ ಒಟ್ಟು ೭೭ ವಿದ್ಯಾರ್ಥಿಗಳು ೮ನೇ ತರಗತಿಗೆ ದಾಖಲಾತಿ ಪಡೆದುಕೊಂಡಿದ್ದಾರೆ ಮತ್ತು ಹರ್ವಾಪುರ (ಡಯಾಸ್ ನಂ:೨೯೦೬೦೬೦೫೫೦೧) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೮ನೇ ತರಗತಿಗೆ ೪೫ ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ.

ಒಟ್ಟು ೧೨೨ ವಿದ್ಯಾರ್ಥಿಗಳು ೮ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ೯ನೇ ತರಗತಿಯ ಆರಂಭದ ಅವಶ್ಯಕತೆ ಇರುತ್ತದೆ. ಕಳೆದ ೧೪ ವರ್ಷಗಳ ಹಿಂದೆಯೇ ಬುದ್ದಿನ್ನಿ. ಎಸ್.ಗ್ರಾಮದಲ್ಲಿ ೮ನೇ ತರಗತಿ ಆರಂಭವಾಗಿದ್ದು, ತಾಂತ್ರಿಕ ಮತ್ತು ಇತರ ಮಾನದಂಡಗಳ ನೆಪ ಇಟ್ಟುಕೊಂಡು ಇದುವರೆಗೂ ೯ನೇ ತರಗತಿ ಪ್ರವೇಶಾವಕಾಶಕ್ಕೆ ಅನುಮತಿ ನೀಡಿರುವುದಿಲ್ಲ. ಇದರಿಂದಾಗಿ ಸ್ವಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಹೆಚ್ಚಿನ ಅಭ್ಯಾಸದಿಂದ ವಂಚಿತರಾಗಿದ್ದಾರೆ. ೨೦೧೭-೧೮ನೇ ಸಾಲಿನಲ್ಲಿ ಎಚ್.ಕೆ.ಆರ್.ಡಿ.ಬಿ.ಯೋಜನೆ ಅಡಿ ೧ ಕೋಟಿ ೪೦ ಲಕ್ಷ ರೂ.ವೆಚ್ಚದಲ್ಲಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣ ಮಾಡಿ ವರ್ಷ ಕಳೆದಿದೆ. ಸರಕಾರದ ಅವೈಜ್ಞಾನಿಕ ನೀತಿಯಿಂದ ಪ್ರೌಢಶಾಲೆ ಮಂಜೂರಾಗದ ಕಾರಣ ಸುಸಜ್ಜಿತ ಕಟ್ಟಡ ಪಾಳು ಬಿದ್ದಿದೆ. ವಿದ್ಯಾರ್ಥಿಗಳು ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಮನಗಂಡು ಪ್ರೌಢಶಾಲೆ ಮಂಜೂರಾತಿಗೆ ಆಗ್ರಹಿಸಿ ಕಳೆದ ನಾಲ್ಕೈದು ವರ್ಷಗಳಿಂದ ಪಾಲಕರು, ಪೋಷರು ಮತ್ತು ಮಕ್ಕಳು ಹಾಗೂ ವಿವಿಧ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತ ಬಂದರೂ ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು ತಾಂತ್ರಿಕ ಮತ್ತು ಇತರೆ ಕಾರಣಗಳ ನೆಪವೊಡ್ಡಿ ಕೇವಲ ಭರವಸೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಸಂವಿಧಾನಿಕ ಶೈಕ್ಷಣಿಕ ಹಕ್ಕುಗಳಿಗೆ ಧಕ್ಕೆಯಾಗಿದೆ. ಹತ್ತಿರದಲ್ಲಿ ಶಾಲೆ ಇರದ ಕಾರಣ ದೂರದ ಪಟ್ಟಣಗಳಿಗೆ ಸಾರಿಗೆ ಸಂಪರ್ಕ, ಹೆಣ್ಣು ಮಕ್ಕಳ ಭದ್ರತೆ ಕೊರತೆಯಿಂದ ಶಾಲೆಗೆ ಹೋಗಲಾಗದೇ ಬಹಳಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.

ವಿದ್ಯಾರ್ಥಿಗಳು ಅರ್ಧಕ್ಕೆ ಶಾಲೆ ಬಿಡಲು ಶಿಕ್ಷಣ ಇಲಾಖೆ, ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳೇ ನೇರ ಹೊಣೆಗಾರರಾಗಿದ್ದಾರೆ ಕೂಡಲೇ ಶಾಲಾ ಮಂಜೂರಾತಿ ಆದೇಶವನ್ನು ನೀಡಬೇಕೆಂದು ಎಂದು ಕಿಡಿಕಾರಿದರು. ಪ್ರತಿಭಟನಾ ಮನವಿ ಪತ್ರವನ್ನು ಉಪ ವಿಭಾಗ ಅಧಿಕಾರಿ ಸಂತೋಷ ಕಾಮಗೌಡರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ, ಜಿಲ್ಲಾಧ್ಯಕ್ಷರಾದ ರಮೇಶ ವೀರಾಪುರ, ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, SDMC ಅಧ್ಯಕ್ಷರಾದ ನಾಗರೆಡ್ಡಪ್ಪ ದೇವರಮನಿ, ಬಸವರಾಜ ದೀನಮುದ್ರ, ಸವರಪ್ಪ, ಮೌನೇಶ್, ಬಿ, ವೆಂಕಟೇಶ ವೈಜನಾಥ ಸೇರಿದಂತೆ ಗ್ರಾಮದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.