ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಗುರು ವಿಶ್ವಕರ್ಮ ಅವಿರೋಧ ಆಯ್ಕೆ.
ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಗುರು ವಿಶ್ವಕರ್ಮ ಅವಿರೋಧ ಆಯ್ಕೆ.

ರಾಯಚೂರು: ನಗರದಲ್ಲಿ ಇಂದು ದಿನಾಂಕ 21.07.2021 ಭಾನುವಾರ ಜೆಸ್ಸಿ ಭವನದಲ್ಲಿ ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜ (ರಿ) ರಾಯಚೂರು ವತಿಯಿಂದ ನಡೆದ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಹಿರಿಯ ಹಾಗೂ ಯುವ ಮುಖಂಡರುಗಳು ಸರ್ವಾನುಮತದಿಂದ ವಿಶ್ವಕರ್ಮ ಸಮಾಜದ ಜಿಲ್ಲಾ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅವಿರೋಧವಾಗಿ ಗುರು ವಿಶ್ವಕರ್ಮ ರವರನ್ನು ಆಯ್ಕೆ ಮಾಡಲಾಯಿತು. ಹಾಗೂ ಜಿಲ್ಲಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮರು ನೇಮಕಗೊಂಡರು, ನಂತರ ಸಮಾಜ ಬಾಂಧವರು ಪದಾಧಿಕಾರಿಗಳನ್ನು ಅಭಿನಂದಿಸಿದರು. ನಂತರ ಗುರು ವಿಶ್ವಕರ್ಮ ರವರು ಮಾತನಾಡಿದರು ರಾಯಚೂರು ಜಿಲ್ಲೆಯ ವಿಶ್ವಕರ್ಮರು ತಮ್ಮ ಪಂಚ ಕಸುಬುಗಳ ಮೂಲಕ ಕಲೆ, ಶಿಲ್ಪ ಕಲೆ, ವಾಸ್ತುವನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಮೂಲಕ ಮಾದರಿಯಾಗಿದ್ದಾರೆ. ಸರ್ವರೂ ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದು, ಸಮಾಜವನ್ನು ಮೇಲೆತ್ತುವ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಬೇಕು. ನಾವು ನಮ್ಮಲ್ಲಿರುವ ಒಡಕು, ವೈಮನಸ್ಸುಗಳನ್ನು ಮರೆತು ಒಗ್ಗಟ್ಟು ಪ್ರದರ್ಶಿಸಿ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಬೆಳೆಯಬೇಕು. ಪಟ್ಟಣದ ಬೇರೂನ್ ಕಿಲ್ಲಾದಲ್ಲಿರುವ ಶ್ರೀ ಕಾಳಿಕಾದೇವಿ ದೇವಸ್ಥಾನ ನಿರ್ಮಾಣ, ವಿಶ್ವಕರ್ಮ ಸಮುದಾಯ ಭವನ, ವಿಶ್ವಕರ್ಮ ವೃತ್ತದಲ್ಲಿ ಭಗವಾನ್ ವಿಶ್ವಕರ್ಮ ಮೂರ್ತಿ ಪ್ರತಿಷ್ಠಾಪನೆ, ಸಮಾಜದ ಮಕ್ಕಳಿಗೆ ವಿದ್ಯಾರ್ಥಿ ವಸತಿ ನಿಲಯ, ಉನ್ನತ ಶಿಕ್ಷಣಾಭ್ಯಾಸಕ್ಕೆ ನೆರವು ಸೇರಿದಂತೆ ಅನೇಕ ಯೋಜನೆಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದರು. 2021-2024ರ ಅವಧಿಗೆ ಹೊಸ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳು ಮನೋಹರ ವಿಶ್ವಕರ್ಮ ವಕೀಲರು ಗೌರವಾಧ್ಯಕ್ಷರು ಹಾಗೂ ಕಾನೂನು ಸಲಹೆಗಾರರು, ಗುರು ವಿಶ್ವಕರ್ಮ ಜಿಲ್ಲಾಧ್ಯಕ್ಷರು, ಮಾರುತಿ ಬಡಿಗೇರ್ ಉಪಾಧ್ಯಕ್ಷರು, ವೆಂಕಟೇಶ್ ಆನ್ವರಿ ಉಪಾಧ್ಯಕ್ಷರು, ಕೆ ರಾಮು ಗಾಣದಾಳ ಪ್ರಧಾನ ಕಾರ್ಯದರ್ಶಿ, ಗಿರೀಶ್ ಆಚಾರಿ ಕಾರ್ಯದರ್ಶಿ, ಕೆಸಿ ಲಕ್ಷ್ಮಿಪತಿ ಯರಗೇರಾ ಖಜಾಂಚಿ, ಉದಯಕುಮಾರ್ ಪತ್ತಾರ್ ಮಸ್ಕಿ ಜಂಟಿ ಕಾರ್ಯದರ್ಶಿ, ವೀರೇಶ್ ಸಂತೆಕಲ್ಲೂರು ಸಹ ಕಾರ್ಯದರ್ಶಿ, ಸೋಮಣ್ಣ ಸಿಂಧನೂರು ಕಾರ್ಯಕಾರಿ ಸಮಿತಿ ಸದಸ್ಯರು, ಮಲ್ಲಪ್ಪ ವಿಶ್ವಕರ್ಮ ಆಯಿಲ್ ಮಿಲ್ ದೇವದುರ್ಗ, ಎ. ಈಶ್ವರ್ ವಿಶ್ವಕರ್ಮ, ಮೌನೇಶ್ ಪತ್ತಾರ್ ಕವಿತಾಳ, ಯುವ ಘಟಕದ ಅಧ್ಯಕ್ಷರಾಗಿ ವಿರೇಶ್ ಬಡಿಗೇರ ಗಿಲ್ಲೆಸೂಗೂರು ನೇಮಕಗೊಂಡರು. ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಮುಖಂಡರುಗಳಾದ ಡಾ. ಮನೋಹರ ವೈ ಪತ್ತಾರ, ಮಾನಪ್ಪ ಕವಿತಾಳ, ಲಕ್ಷ್ಮೀನಾರಾಯಣ, ಎಂ ಕೆ ನಾಗರಾಜ್, ವೆಂಕಟೇಶ್ ವಕೀಲರು, ಹರಿನಾಥ್, ಗಿರಿಬಾಬು, ಗುರುಮೂರ್ತಿ, ಶರಣು ಬಲ್ಲಟಗಿ, ಪ್ರಾಣೇಶ್ ಹಿರಾಪುರ್, ಮಿಲ್ಟ್ರಿ ಮಲ್ಲೇಶ್, ರಾಮುಲು ಯಾಪಲದಿನ್ನಿ, ಉಮೇಶ್ ಜೇಗರಕಲ್, ವಿರೇಶ್ ಜಲಾಲನಗರ, ರಾಮಾಚಾರಿ, ಮರಿಸ್ವಾಮಿ ತುರುವಿಹಾಳ್ ವೀರೇಶ್ ಸಿರವಾರ್, ನಾಗರಾಜ್ ಆಚಾರ್ ಸಿಂಧನೂರು, ಶಿವಪುತ್ರ ಬಳಗಾನೂರು ಮೌನೇಶ ಬಳಗಾನೂರ, ಸಂಗಮೇಶ ಸಿಂಧನೂರು, ವಿಜಯಕುಮಾರ್ ಮಸ್ಕಿ, ಕಾಳಪ್ಪ ಮಸ್ಕಿ, ಮೌನೇಶ್ ಮಾನವಿ, ಮೌನೇಶ್ ಉಮಳಿಹೊಸೂರು, ಬಸವರಾಜ್ ಉಮಳಿಹೊಸೂರು, ಶಿವರಾಜ್ ಬಲ್ಲಟಗಿ, ಮಹೇಶ್ ಜೇಗರಕಲ್, ಶಿವಕುಮಾರ್ ಸಂತೆಕೆಲ್ಲೂರು, ವಿರೇಶ್ ಗಧಾರ್ ಮಲ್ಲೇಶ್ ಕಂಬಳೆತ್ತಿ, ಶ್ರೀನಿವಾಸ ಶಕ್ತಿನಗರ, ಬಿಂದು ವಿಶ್ವಕರ್ಮ, ವೆಂಕಟೇಶ್, ರಾಘು, ಶ್ರೀಕಾಂತ್ ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕಿನ ಹಿರಿಯ ಮುಖಂಡರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Recent comments