ತೆರೆಯ ಮೇಲೆ ಬರಲು ಸಿದ್ದವಾದ " ನಮ್ಮ ಭಾರತ " ಚಿತ್ರ
ನಮ್ಮ ಭಾರತ

ಕಳೆದ ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕುಮಾರಸ್ವಾಮಿ ನಿರ್ಮಿಸಿ ನಿರ್ದೇಶಿಸಿರುವ ಚಿತ್ರ " ನಮ್ಮ ಭಾರತ". ಮಂಡ್ಯ ನಾಗರಾಜ್ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದು ದೇಶದ ಬೆಲೆ ತಿಳಿಸುವ ಜೊತೆಗೆ ರಾಷ್ಟ್ರ ಧ್ವಜ ದೇಶ ಭಕ್ತಿಯ ಕಥೆಯನ್ನು ಒಳಗೊಂಡಿರುವ ಮಕ್ಕಳ ಚಿತ್ರ ಇದು. ಮಾತಿಗಿಳಿದ ಚಿತ್ರ ತಂಡ ಮೊದಲು ಮಾತು ಆರಂಭಿಸಿದ ಕುಮಾರಸ್ವಾಮಿ, 'ಧರ್ಮಸೆರೆ' ಸೇರಿದಂತೆ ಹಲವು ಚಿತ್ರಗಳಿಗೆ ಕ್ಯಾಮರಾಗೆ ಸಹಾಯಕರಾಗಿ ಕೆಲಸ ಮಾಡಿದ್ದೇನೆ.
ನಮ್ಮ ಭಾರತಕ್ಕಾಗಿ ಹದಿನೈದು ಇಪ್ಪತ್ತು ಕಥೆ ಬಗ್ಗೆ ಚರ್ಚೆ ನಡೆಸಿ ಈ ಚಿತ್ರದ ಕಥೆ ಆಯ್ಕೆ ಮಾಡಿಕೊಳ್ಳಲಾಯಿತು ಪಿರಿಯಾ ಪಟ್ಟಣದ ಬಳಿಯ ಬೆಟ್ಟದ ಪುರ, ಕಣಗಾಲ್ ನಲ್ಲಿ ಚಿತ್ರೀಕರಣ ಮಾಡಿದ್ದೇವು. ಎಸ್.ಎ ಚನ್ನೇಗೌಡ ಅವರ ಸಹಕಾರ ಇರಲಿದೆ ಎಂದರು. ಪ್ರೀಮಿಯರ್ ಶೋ ನೋಡಿ ಖುಷಿ ಪಟ್ಟರು. ಅತಿ ಶೀಘ್ರದಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ ಎಲ್ಲರ ಸಹಕಾರ ಬೆಂಬಲವಿರಲಿ ಎಂದರು.

ದೇಶದ ಬಾವುಟ, ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬಂತು ಎನ್ನುವುದನ್ನು ತೆರೆಯ ಮೇಲೆ ತರಲಾಗಿದೆ ಎಂದು ವಿವರ ನೀಡಿದರು. ಮಂಡ್ಯ ನಾಗರಾಜ್ ಮಾತನಾಡಿ, ನೆಗೆಟೀವ್ ಹೋಗಿ ಡಿಜಿಟಲ್ ಬಂದಿದೆ ಎಂದು ಹೇಳಿದೆ ಚಿತ್ರ ಚೆನ್ನಾಗಿ ಬಂದಿದೆ .ಫೆಬ್ರವರಿಯಲ್ಲಿ ತೆರೆಗೆ ತರುವ ಉದ್ದೇಶವಿದೆ ಎಂದರು. ಕಲಾವಿದ ವಾಗೀಶ್, (ಬಿಕೆ ವಿಶ್ವನಾಥ್ ), ಒಮನ್ ನಿಂದ ಬಂದ ನಂತರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ.
ಸ್ವಾಂತ್ರತ್ಯ ಹೋರಾಗಾರ, ನನ್ನಲ್ಲಿರಿವ ಆದರ್ಶವನ್ನು ಹುಡುಗಲ್ಲಿ ಕಾಣುವ ಪ್ರಯತ್ಬ ನನ್ನದು ಎಂದರು. ಬಾಲ ನಟ ಪ್ರಜ್ವಲ್,ಕಥೆ ಚೆನ್ನಾಗಿದೆ. ದೇಶದ ಅಬಿಮಾನವಿದೆ.ಸಿನಿಮಾದಲ್ಲಿನಟಿಸಿದ್ದೇನೆ ಅನ್ನಿಸಲಿಲ್ಲ. ಪಾಠ ಕಲಿತಿದ್ದೇನೆ ಎಂದರು. ಸಂಗೀತ ನಿರ್ದೇಶಕ ಕುಮಾರ್ ಈಶ್ವರ್ ಚಿತ್ರದಲ್ಲಿ ಮೂಡು ಹಾಡುಗಳಿವೆ.ಮಕ್ಕಳ ಸಿನಿಮಾ ಆದರೂ ಒಳ್ಳೆಯ ಚಿತ್ರ ವಾಗಲಿದೆ ಎಂದು ವಿವರ ನೀಡಿದರು ಸಂಭಾಷಣೆಕಾರ ರವಿಶಂಕರ್ ಮಿರ್ಲೆ
Recent comments